ಕಾಟಕಾಯಿ: ಬಿ. ಜನಾರ್ದನ ಭಟ್ ಬರೆದ ಸಣ್ಣ ಕಥೆಯ ಮುಂದುವರಿದ ಭಾಗ
”ಸುಬ್ರಾಯ ಭಟ್ಟರು ಬಹಳ ಯೋಚಿಸಿ ಕೊನೆಗೆ ಅವನು ಕೊಟ್ಟ ಚಿನ್ನಾಭರಣಗಳ ಗಂಟನ್ನು ತೆಗೆದುಕೊಂಡು, ಗಾಂಪ ಕೊಡ್ಡನ ಕಣ್ಣೆದುರೇ ಅದನ್ನು ತಮ್ಮ ಕೈಯಾರೆ ತಮ್ಮ ಮನೆಯ ಬಾವಿಯೊಳಗೆ ಹಾಕಿದರು.ಗಾಂಪ ಕೊಡ್ಡ ತೃಪ್ತಿಯಿಂದ ಹೊರಟುಹೋದ. ಕೆಲವೇ ದಿನಗಳಲ್ಲು ಕುಂಪಣಿ ಪೋಲೀಸರು ಬಂದು ಅವನನ್ನು ಹಿಡಿದುಕೊಂಡು ಹೋದರು.”
ಕಾಟಕಾಯಿ: ಬಿ. ಜನಾರ್ದನ ಭಟ್ ಬರೆದ ಸಣ್ಣ ಕಥೆ
“ಕಾಗದವನ್ನು ನಾರಾಯಣ ಉಪಾಧ್ಯಾಯರಿಗೆ ಹಿಂದಿರುಗಿಸಿದೆ. ನಾನು ಓದುವುದನ್ನೇ ಗಮನಿಸುತ್ತಿದ್ದ ನಾರಾಯಣ ಉಪಾಧ್ಯಾಯರು, “ಅರ್ಥವಾಗುವುದಿಲ್ಲ ಅಲ್ವಾ?” ಎಂದು ಅದು ತಮಗೆ ಗೊತ್ತೇ ಇತ್ತು ಎಂಬ ಭಾವದಿಂದ ಕೇಳಿ ಕಾಗದವನ್ನು ಮಡಚಿ ತಮ್ಮ ಅಂಗಿಯ ಕಿಸೆಯೊಳಗೆ ಇಟ್ಟುಕೊಂಡರು.”
ಭಾನುವಾರದ ವಿಶೇಷ:ಕಾಫ್ಕ ಬರೆದ ಸಣ್ಣಕಥೆ ‘ನ್ಯಾಯದ ಬಾಗಿಲು’
ಮೊದಮೊದಲ ವರ್ಷಗಳಲ್ಲಿ ಜೋರಾಗಿ ಸಿಟ್ಟಿಂದ ತನ್ನ ದುರ್ದೆಸೆನ ಬೈಕೋತಾ ಇದ್ದ. ಆಮೇಲೆ ವಯಸ್ಸಾದ ಹಾಗೆ ತನಗೆ ತಾನೇ ಬರೇ ಗೊಣಗಿಕೊಂಡು ಇದ್ದು ಬಿಟ್ಟ. ಬರಬರ್ತಾ ಮಕ್ಕಳ ತರ ಎಳಸಎಳಸಾಗಿ ಆಡ್ತಾನೆ.
ಶೂದ್ರ ಶ್ರೀನಿವಾಸ್ ಬರೆದ ‘ಯಾತ್ರೆ’ ಕಾದಂಬರಿಯ ಕೆಲವು ಹಾಳೆಗಳು
“ಆಗ ಚೆನ್ನೈನ ರಸ್ತೆಗಳಿಗೆ ಒಂದು ಸೊಬಗಿತ್ತು.ಅಲ್ಲಲ್ಲಿ ಆಂಗ್ಲೋಇಂಡಿಯನ್ಸ್ ಇನ್ನು ಓಡಾಡುತ್ತಿದ್ದ ಕಾಲವದು.ನನ್ನ ಸಹಪಾಠಿಗಳೂ ಇಬ್ಬರು ಮೂವರು ಇಂಗ್ಲೀಷ್ ನ ಕುಟುಂಬಕ್ಕೆ ಸೇರಿದವರೂ ಇದ್ದರು.ಮನೆಗೆ ವಾಪಸ್ಸು ಬಂದಾಗ ಗೇಟಿನಲ್ಲಿ ಆರತಿಯೆತ್ತಿ ನಾಗಸ್ವರ ವಾದ್ಯದ ಸಮೇತ ಒಳಗೆ ಬರಮಾಡಿಕೊಂಡಿದ್ದರು”
ಪ್ರಭಾಕರ ನೀರ್ ಮಾರ್ಗ ಬರೆದ ‘ಮಂಗಳೂರ ಕ್ರಾಂತಿ’ ಕಾದಂಬರಿಯ ಕೆಲವು ಪುಟಗಳು
”ಪುತ್ತೂರು ಕೈವಶ ಮಾಡಿಕೊಂಡ ಸಂತೋಷವನ್ನು ಆಚರಿಸಲು ಆ ದಿನ ಮಧ್ಯಾಹ್ನ ಸ್ವಾದಿಷ್ಟವಾದ ಭೋಜನವನ್ನು ಸೈನಿಕರಿಗೆ ನೀಡಲು ಕಲ್ಯಾಣಸ್ವಾಮಿ ಆದೇಶ ಹೊರಡಿಸಿದಾಗ ಸೈನಿಕರಿಂದ ಜಯ ಘೋಷ ಕೇಳಿ ಬಂತು.ಜನ ಓಲೆಕಾರರ ಡಂಗುರ ಕೇಳಿ ಸಂತೋಷ ಪಟ್ಟರು.”
ಸಾಲಿಗುಡಿ:ಶೇಷಗಿರಿರಾಯರ ಆತ್ಮಕಥಾನಕದ ಕೆಲವು ಪುಟಗಳು
“ಅವನು ಓದಿನಲ್ಲಿ ಅಷ್ಟು ಮುಂದಿಲ್ಲ.ಬಹಳ ಕಷ್ಟಪಡುತಿದ್ದ.ನಮ್ಮ ಗೆಳೆಯನೊಬ್ಬ ಅವನ ಹಣೆಯಲ್ಲಿನ ಈ ನರವೇ ವಿದ್ಯೆಯನ್ನು ಮಸುಕಾಗುವಂತೆ ಮಾಡಿದೆ ಎಂದು ವಿವರಣೆ ನೀಡಿದ.ಏನಾದರೂ ಮಾಡಿ ಸರಿ ಮಾಡಿ ಎಂದು ಸತ್ಯ ದುಂಬಾಲು ಬಿದ್ದ.ಅಂದು ಮಧ್ಯಾಹ್ನ ಅವನ ಹಣೆಬರಹ ತಿದ್ದುವ ಕೆಲಸ ಶುರುವಾಯಿತು.”
ಟೈಗರ್:ಸುನೈಫ್ ಅನುವಾದಿಸಿದ ವೈಕಂ ಮುಹಮ್ಮದ್ ಬಷೀರ್ ಕಥೆ
”ಟೈಗರ್ ಖೈದಿಗಳಲ್ಲಿ ವ್ಯತ್ಯಾಸವೇನೂ ಗುರುತಿಸುವುದಿಲ್ಲ. ಕೊಲೆಪಾತಕಿಯೂ, ಕಳ್ಳನೂ, ರಾಜಕೀಯ ಖೈದಿಯೂ ಅವನ ದೃಷ್ಟಿಯಲ್ಲಿ ಒಂದೇ. ಅವನ ಪ್ರಕಾರ ಮನುಷ್ಯರಲ್ಲಿ ಎರಡೇ ವರ್ಗ. ಪೋಲೀಸರು ಮತ್ತು ಖೈದಿಗಳು. ಲಾಕಪ್ಪಿನಲ್ಲಿರುವ ನಲವತ್ತೈದು ಜನರನ್ನೂ ಅವ ಒಂದೇ ರೀತಿ ಕಾಣುತ್ತಾನೆ.”
ಕರಣಿಕ ದೇವಪ್ಪಯ್ಯ:ಬೇಕಲ ರಾಮನಾಯಕ ಬರೆದ ಸಣ್ಣಕಥೆ
”ದಂಡು ಗಡಿಬಿಡಿಯಿಂದ ದೋಣೆಯನ್ನು ಹತ್ತಿತು. ಹಾಯಿಬಿಟ್ಟಿತು. ದೋಣಿಗಳು ಮುಂದೆ ಸರಿದು ನಡುಹೊಳೆಯನ್ನು ಮುಟ್ಟಿದುವು. ದಂಡಿನವರು ಕೂತಲ್ಲಿ ಕುಳ್ಳಿರದೆ ತಮ್ಮ ಹುಚ್ಚಾಟಕ್ಕೆ ತೊಡಗಿದ್ದರು. ದೋಣಿಗಳು ಅತ್ತಿತ್ತ ಮಾಲುತ್ತಿದ್ದುವು. ಅಷ್ಟರಲ್ಲಿ ಮೆತ್ತಿದ್ದ ಮೇಣವೆಲ್ಲ ಎದ್ದು ಹೋಯಿತು.”
ಮಂಜುನಾಯಕ ಚಳ್ಳೂರು ಬರೆದ ಸಣ್ಣ ಕತೆ ’ಮಿಣುಕು ಹುಳ’
”ಮಿಣುಕು ಹುಳುವಿನ ಉಪಟಳ ಹೊಸತೇನಲ್ಲ.ಮೊದಮೊದಲಿಗೆ ಆಗೀಗ ಕಾಣಿಸಿಕೊಂಡು ಹೈರಾಣು ಮಾಡುತ್ತಿದ್ದ ಅದು ಸಾಸಿವೆ ಕಾಳಷ್ಟು ಬೆಳಕಾಗಿ ಹುಟ್ಟಿದ್ದುದು ದೊಡ್ಡ ರಾಕ್ಷಸನಾಗಿ ಬೆಳೆದುಕೊಂಡು ಅವನನ್ನು ಕಿತ್ತು ಕಿತ್ತು ತಿನ್ನತೊಡಗುತ್ತದೆ.”









