Advertisement

Month: May 2024

ಆಶಾಜಗದೀಶ್ ಬರೆದ ಎರಡು ಹೊಸ ಕವಿತೆಗಳು

“ಕೊನೇ ಬೀದಿಯ ತಿರುವಿನಲ್ಲಿ
ಅವನು ಮೂಡಿಸಿ ಮರೆತು ಹೋದ
ಅವನ ಹೆಜ್ಜೆಗಳ ಗುರುತನ್ನು
ಮತ್ತಾರೋ ತಮ್ಮ ಪಾದಗಳಿಗೆ
ತೊಡಿಸಿಕೊಂಡು ನಡೆಯಲು
ಸನ್ನದ್ಧರಾಗಿದ್ದಾರೆ
ಅವನನ್ನು ಹಿಂಬಾಲಿಸುತ್ತಾ”- ಆಶಾಜಗದೀಶ್ ಬರೆದ ಎರಡು ಹೊಸ ಕವಿತೆಗಳು

Read More

ಆಕರ್ಷ ರಮೇಶ್ ಕಮಲ ಪುಸ್ತಕಕ್ಕೆ ಕೇಶವ ಮಳಗಿ ಮುನ್ನುಡಿ

“ನಗರಗಳ ಅನೂಹ್ಯತೆ, ಅವು ಸೃಷ್ಟಿಸುವ ತಲ್ಲಣ ಮತ್ತು ಉಂಟುಮಾಡುವ ಪಲ್ಲಟ, ಅದರೊಳಗೆ ಹೂತಿರುವ ಆದರೆ ಚದುರಿ ಚೆಲ್ಲಾಪಿಲ್ಲಿಯಾಗಿರುವ ಲೋಕ, ನಗರದ ಅಸ್ತವ್ಯಸ್ತತೆಗಳು, ಇವುಗಳ ನಡುವೆಯೇ ಇರಬಹುದಾದ ಅರ್ಥವನ್ನು ಹೊರ ತೆಗೆಯುವ ಸೃಜನಶೀಲ ಹುಡುಕಾಟ ಈ ಕವಿತೆಗಳ ಮೂಲದ್ರವ್ಯವಾಗಿದೆ. ಆ ನಿಟ್ಟಿನಲ್ಲಿ ಆಕರ್ಷ ತನ್ನ ಅವಕಾಶ, ವ್ಯಾಪ್ತಿ ಮತ್ತು ಇಳಿದಾಣಗಳನ್ನು ಈಗಾಗಲೇ ಗುರುತಿಸಿಕೊಂಡಂತೆ ಕಾಣುತ್ತಿದ್ದಾನೆ. ತನ್ನ ಅಭಿವ್ಯಕ್ತಿಗೆ ಬೇಕಾದ ನುಡಿಗಟ್ಟು, ರೂಪಕ, ಪ್ರತಿಮಾಲೋಕಗಳನ್ನು ಅನುಭವ ಮತ್ತು ಭಾಷೆಗಳ ಟಂಕಸಾಲೆಯಲ್ಲಿ ನಿರ್ಮಿಸಿಕೊಳ್ಳುತ್ತಿದ್ದಾನೆ”

Read More

ಓಬೀರಾಯನ ಕಾಲದ ಕತೆಗಳ ಸರಣಿಯಲ್ಲಿ ಎಂ. ಎನ್. ಕಾಮತ್ ಬರೆದ ಕತೆ “ಕದ್ದವರು ಯಾರು?”

“ಮಂತ್ರವಾದಿಯೂ ಗಂಡನೂ ಕೇಳುತ್ತಲೇ ಇದ್ದ ಪ್ರಶ್ನೆಗಳಿಗೆ “ನಾನೊಂದೂ ಅರಿಯೆ”, ಎಂದೇ ಉತ್ತರ ಕೊಡುತ್ತಿದ್ದಂತೆ, – ಕುಂಡದ ಬಳಿ ಅವಳು ಕೂತಿರಬೇಕೆಂದಾಯಿತು. ಮಿಂದುಟ್ಟ ಒದ್ದೆ ಸೀರೆಯು ಮೈಮೇಲೆಯೇ ಒಣಗಹತ್ತಿತು. ಕೂದಲು ಕಟ್ಟಿಕೊಂಡಿರಲಿಲ್ಲ, ಒಣಗಲೆಂದು; ಅದೆಲ್ಲ ಬೆಂಕಿಯ ಧಗೆಗೆ ಒಣಗುತ್ತ ಗಾಳಿಗೆ ತೂಗುತ್ತ, ಬೆಂಕಿಯ ನಾಲಿಗೆಗಳನ್ನು ಸೋಕುತ್ತ, ಅಷ್ಟಷ್ಟೇ ತುದಿಗಳು ಸುಡುತ್ತ ಕರಿಯಾದುವು.”

Read More

ಮುಗ್ಧ ಮನಸ್ಸಿನ ಬಂಡಾಯದ ಲೇಖಕ ಮೊಪಾಂಸಾ : ನಾರಾಯಣ ಯಾಜಿ ಬರಹ

“ಯಾವಾಗ ಅವರೆಲ್ಲ ಗಮ್ಯ ಸ್ಥಾನವನ್ನು ಸೇರಿದರೋ ಮತ್ತೊಮ್ಮೆ ಅವರಲ್ಲಿನ ನೈತಿಕ ಪ್ರಜ್ಞೆ ಜಾಗೃತವಾಗುತ್ತದೆ. ಎಲಿಜೆಬೆತಳೊಟ್ಟಿಗೆ ಊಟಮಾಡಲೂ ನಿರಾಕರಿಸುತ್ತಾರೆ. ನಡುರಾತ್ರಿಯಲ್ಲಿ ಈಕೆಯನ್ನು ಇಳಿಸಿ ಕಂಡಕ್ಟರ್ ಸೀಟಿ ಊದಿ ಮುಂದೆ ಸಾಗುವಾಗ ವಿಷಣ್ಣವಾಗಿ ಎಲ್ಲರನ್ನು ನೋಡಿ ಎಲ್ಲರಿಗಾಗಿ ಎಲ್ಲವನ್ನು ಕಳಕೊಂಡ ತನ್ನ ಕುರಿತು ಮೌನವಾಗಿ ಅಳು, ಕ್ರೋಧದಿಂದ ಅವರನ್ನು ನೋಡುವಲ್ಲಿಗೆ ಕತೆ ಮುಕ್ತಾಯವಾಗುತ್ತದೆ.”

Read More

ನೆಗಟೀವ್ ಮತ್ತು ಪಾಸಿಟೀವ್ : ಕುರಸೋವ ಆತ್ಮಕತೆಯ ಪುಟ

“ನನ್ನ ಕುರಿತಾದ ಈ ಆವಿಷ್ಕಾರದಿಂದ ನನಗೇನು ಅಚ್ಚರಿಯಾಗಲಿಲ್ಲ. ಸ್ವಂತ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಹರೆಯದ ಯುವಕನಾಗಿದ್ದಾಗ ಈ ಅಸಾಮಾರ್ಥ್ಯ ನನ್ನೊಳಗೊಂದು ಅಸಹನೆ, ಅತೃಪ್ತಿಯನ್ನು ಹುಟ್ಟುಹಾಕಿತ್ತು. ನನ್ನದೇ ರೀತಿಯಲ್ಲಿ ಎಲ್ಲವನ್ನೂ ನೋಡಬೇಕು ಎನ್ನುವ ಹಠ ನನ್ನಲ್ಲಿ ಅಸಹನೆಯನ್ನು ಬೆಳೆಸಿತ್ತು. ಪ್ರತಿಯೊಂದು ಚಿತ್ರಪ್ರದರ್ಶನಕ್ಕೆ ಹೋದಾಗಲೂ ಜಪಾನಿನ ಪ್ರತಿ ಚಿತ್ರಕಲಾವಿದನು ತನ್ನದೇ ಆದ ಶೈಲಿ ಹಾಗೂ ಸ್ವಂತ ದೃಷ್ಟಿಕೋನವನ್ನು ಹೊಂದಿದ್ದಾನೆ ಅನ್ನಿಸುತ್ತಿತ್ತು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…

Read More

ಬರಹ ಭಂಡಾರ