Advertisement

Month: May 2024

ಶಿವಪ್ರಸಾದ್ ಹಳುವಳ್ಳಿ ತೆಗೆದ ಈ ದಿನದ ಚಿತ್ರ.

ಈ ದಿನದ ಚಿತ್ರ ತೆಗೆದವರು ಶಿವಪ್ರಸಾದ್ ಹಳುವಳ್ಳಿ.  ಮೂಲತಃ ಕಳಸದವರಾದ ಶಿವಪ್ರಸಾದ್ ಪ್ರಸ್ತುತ ಉಜಿರೆಯ ಎಸ್.ಡಿ.ಎಂ.ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಅಂತಿಮ ವರ್ಷದ ಪತ್ರಿಕೋದ್ಯಮವನ್ನು ವ್ಯಾಸಂಗ ಮಾಡುತ್ತಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ದೀಪ್ತಿ ಭದ್ರಾವತಿ ಬರೆದ ಈ ದಿನದ ಕವಿತೆ

““ಪ್ರೇಮಕ್ಕೂ ಕಾಲ ಮಿತಿಯೇ” ಕೇಳಿದಂತೆ
ಭಾಸವಾಗಿ ಬೇಲಿಯೊಳಗಿನ ಬಿಂಬ
ತಣ್ಣಗೆ ಚಲಿಸುತ್ತದೆ
ಮತ್ತೆ ನೀನರಿಯದ ನಿನ್ನ ನೋಟಗಳಲ್ಲಿ
ಭಾವದಲೆಗಳ ತೇಲಿಬಿಡುತ್ತೇನೆ..”- ದೀಪ್ತಿ ಭದ್ರಾವತಿ ಬರೆದ ಈ ದಿನದ ಕವಿತೆ

Read More

ಅಶೋಕ್ ಕುಮಾರ್ ಅನುವಾದಿಸಿದ ಸುಭಾಷ್ ಚಂದ್ರನ್ ಅವರ ಕಾದಂಬರಿಯ ಒಂದು ಭಾಗ

“ಮಳೆ ಜೋರಾಗಿ ಮರವನ್ನೇ ಮುಳುಗಿಸುವಂತೆ ಸುರಿಯತೊಡಗಿದಾಗ ರಣಹದ್ದಿನ ಪುಕ್ಕಗಳು ತೊಯ್ದು ತೊಪ್ಪೆಯಾಗುವುದನ್ನು ತನ್ನ ಕಡೆಗಣ್ಣಿಂದ ನೋಡುವುದು ಅಯ್ಯಾಪಿಳ್ಳೆಗೆ ಸಾಧ್ಯವಾಯಿತು. ಪಂಜರಕ್ಕೆ ಒತ್ತಿಕೊಂಡಂತಿದ್ದ ಜುಟ್ಟಿನ ಗಂಟು ಕಳಚಿಕೊಂಡು ಹಿಂದಕ್ಕೆ ಚದುರಿದ್ದ ಕೂದಲಿಗೆ ಕುತ್ತಿಗೆಯನ್ನೊತ್ತಿ ಅಯ್ಯಾಪಿಳ್ಳೆ ತಲೆಯನ್ನು ಹೊರಳಿಸಲು ನೋಡಿದನಾದರೂ ಸಾಧ್ಯವಾಗಲಿಲ್ಲ. ಭೋರ್ಗರೆದು ಸುರಿಯುತ್ತಿರುವ ಮಳೆಯಲ್ಲಿ ಆತ ಬಾಯಾರಿ ತಹತಹಿಸಿದ.”

Read More

ಓಬಿರಾಯನ ಕಾಲದ ಕತೆಗಳ ಸರಣಿಯಲ್ಲಿ ಕಡೆಂಗೋಡ್ಲು ಶಂಕರಭಟ್ಟರು ಬರೆದ ಕತೆ “ದುಡಿಯುವ ಮಕ್ಕಳು”

“ಸಂಜೆ ಆಯಿತು; ನೆರಳು ಉದ್ದುದ್ದವಾಗಿ ಎಲ್ಲಾ ಕಡೆಗಳಲ್ಲಿಯೂ ಕತ್ತಲಿಸುತ್ತಿದೆ. ಮನುಷ್ಯ ಸಂಚಾರ ಕಡಿಮೆಯಾಗುತ್ತಿದೆ. ದೂರದೂರದಲ್ಲಿ ಯಾರೋ ಯಾರನ್ನೋ ಕರೆಯುವ ಒಂದೊಂದು ಧ್ವನಿ ಅಲೆಯಾಗಿ ಮಾತ್ರ ಕಿವಿಯನ್ನು ಹೊಡೆಯುತ್ತಿದೆ. ಇತರರಲ್ಲಿ ಕರೆಯುವವರೂ ಇದ್ದಾರೆ. ಕರೆಯಿಸಿಕೊಳ್ಳುವವರೂ ಇದ್ದಾರೆ ! ಈ ಬಡ ಕುಟುಂಬದಲ್ಲಿ ಮಾತ್ರ ಅಂಥವರು ಯಾರೂ ಇಲ್ಲವೆ? ಅನ್ಯಾಯವಿದು. ಲಿಂಗಪ್ಪ ಇನ್ನೂ ಬರಲಿಲ್ಲ.”

Read More

ಅಗ್ನಿಯಿಂದ ಎದ್ದು ಬಂದ ಬೆಳಕುಗಳು: ಡಾ.ಲಕ್ಷ್ಮಣ ವಿ.ಎ. ಅಂಕಣ

“ಈಗಿರುವ ಮೆಡಿಕಲ್ ಕಾಲೇಜಿಗೆ ಕೊಡುವ ಬಜೆಟ್ಟಿನಲ್ಲೇ ನಾವು ಲಕ್ಷಾಂತರ ತಜ್ಞ ಪರಿಣಿತ ವೈದ್ಯರನ್ನು ತಯಾರಿ ಮಾಡಬಹುದು. ಅದಕ್ಕೊಂದು ಸಿದ್ಧ ಸೂತ್ರವೂ ಅವರ ಬಳಿ ಇದೆ. ಹಳ್ಳಿಯಿಂದ ಬಂದ ಪ್ರತಿ ಮೆಡಿಕಲ್ ವಿಧ್ಯಾರ್ಥಿಯ ಎದೆಯಲ್ಲೊಂದು ಕಿಚ್ಚು ಇರುತ್ತದೆ. ಅವರ ಹೊಟ್ಟೆಯ ಹಸಿವು ದಿನದ ಇಪ್ಪತ್ನಾಲ್ಕು ಗಂಟೆ ದುಡಿಯುವ ಉತ್ಸಾಹ ಪ್ರಚೋದನೆ ನೀಡುತ್ತಿರುತ್ತದೆ.. ಅವಕಾಶ ವಂಚಿತ ಇಂತಹ ಗ್ರಾಮೀಣ ಬಡ ಭಾರತದ ಹುಡುಗ ಹುಡುಗಿಯರಿಗೆ ಬೇಕಿರುವುದು ಒಂದು ಸಣ್ಣ ಸಹಾಯ ಮಾತ್ರ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…

Read More

ಬರಹ ಭಂಡಾರ