Advertisement

Month: May 2024

ಡಾ. ಬಸವರಾಜ ಸಾದರ ಅವರ ಅನುವಾದಿತ ಕತೆಗಳ ಸಂಕಲನದಿಂದ ಒಂದು ಕತೆ

“ಸಾಹೇಬ್ರೆ, ಎಲ್ಲಾ ನಾಚಿಕೆ ಬಿಟ್ಟು, ಇರೋ ಸತ್ಯಾನೆಲ್ಲಾ ನಿಮಗೆ ಹೇಳುತ್ತೇನೆ. ನನ್ನ ಹತ್ತಿರ ಒಂದೇ ಒಂದು ಒಳಲಂಗ ಇದೆ. ಅದನ್ನು ನನ್ನ ಮದುವೆಯಲ್ಲಿ ಕೊಟ್ಟಿದ್ದರು. ಹರಿದು ಹೋಗಿದ್ದ ಅದನ್ನು ನಾನು ಅದೆಷ್ಟೋ ಸಾರಿ ಹೊಲಿದು ರಿಪೇರಿ ಮಾಡಿಕೊಂಡಿದ್ದೇನೆ. ಅದು ಮತ್ತೆ ಹೊಲಿಯಲಾರದಷ್ಟು ಚಿಂದಿ ಚಿಂದಿಯಾಗಿತ್ತು. ಅದಕ್ಕಾಗಿ ಸಾಹೇಬ್ರೆ…. ಈ ಬ್ಯಾನರ್ ಅನ್ನು ಕಿತ್ತುಕೊಂಡು ಅದರಿಂದ ಒಂದು ಒಳಲಂಗವನ್ನು ನಾನೇ ಹೊಲಿದುಕೊಂಡಿದ್ದೇನೆ…”

Read More

ಓಬಿರಾಯನ ಕಾಲದ ಕಥಾ ಸರಣಿಯಲ್ಲಿ ಎಸ್. ವೆಂಕಟರಾಜ ಬರೆದ ಕತೆ

“ಏನೋ ರಾಷ್ಟ್ರಗೀತೆ! ಪ್ರಾಯಶಃ ಪಿಕೆಟಿಂಗಿಗೆ ಹೋಗುತ್ತಾರಂತ ಕಾಣ್ತದೆ. (ಜ್ಞಾಪಿಸಿಕೊಂಡು) ಹೌದು. ಇವತ್ತು ಮಿರ್ಜಾ ಬ್ರದರ್ಸ್ ರ ಅಂಗಡಿ ಮುಂದೆ ಪಿಕೆಟಿಂಗ್ ಇದೆಯಂತೆ! (ನಗುತ್ತಾ) ಏ! ಮತ್ತೊಂದು ವಿಷಯ – ಆ ಪೈಕಿ ಒಂದು ಹುಡುಗಿ ಏನು ಚೆಂದ ಇದೆ ಗೊತ್ತಿದೆಯೆ? ಅದನ್ನು ನೋಡಿ ನಾನು ಕೂಡ ಪಿಕೆಟಿಂಗಿಗೆ ಸೇರೋಣಾಂತ… “

Read More

ಮನುಷ್ಯನ ಮನಸ್ಸಿನ ಏರಿಳಿತಗಳು: ವಿನತೆ ಶರ್ಮ ಅಂಕಣ

“ಈ ಯೋಚನೆಗಳಲ್ಲಿ ಮುಳುಗಿದ್ದಾಗ ಮರುದಿನ ಶುಕ್ರವಾರ ತಾಯಿಯೊಬ್ಬಳು ತನ್ನ ಒಂಭತ್ತು ವರ್ಷ ವಯಸ್ಸಿನ ಮಗನನ್ನು ರಕ್ಷಿಸಲು ಕೈಗೊಂಡ ಕ್ರಮದ ಸುದ್ದಿ ಬಂತು. ಅವಳು ನನ್ನ ಸ್ನೇಹಿತೆಯೊಬ್ಬಳ ಸ್ನೇಹಿತೆ, ನನಗೂ ಪರಿಚಿತೆ. ಅವಳ ಮಗನನ್ನೂ ನಾವು ನೋಡಿದ್ದಿತ್ತು. ಅವನು ಕುಬ್ಜತೆ ಎಂಬ ದೈಹಿಕ ಸ್ಥಿತಿಗೆ ಗುರಿಯಾಗಿ ಅವನ ವಯಸ್ಸಿನ ಬೇರೆ ಮಕ್ಕಳಂತೆ ಶಾರೀರಿಕ ಬೆಳವಣಿಗೆಯನ್ನು ಪಡೆದಿಲ್ಲ. ತಲೆ ದೊಡ್ಡದು, ದೇಹ ಕುಬ್ಜ ಎಂಬಂಥ ರೂಪವಿದೆ. ಜನರ ದೃಷ್ಟಿ ಅವನೆಡೆ ಹೊರಳಿದಾಗ ಅವನನ್ನು ಎರಡೆರಡು ಬಾರಿ ದಿಟ್ಟಿಸಿ ನೋಡುತ್ತಾರೆ.”

Read More

ಪ್ರೊ. ಷ. ಶೆಟ್ಟರ್ ಜೊತೆ ಡಾ. ಗೀತಾ ವಸಂತ ನಡೆಸಿದ್ದ ಮಾತುಕತೆ

“ವ್ಯಾಕರಣ, ಛಂದಸ್ಸುಗಳನ್ನು ಬಾಲ್ಯದಲ್ಲಿ ಉರು ಹೊಡೆಸುತ್ತಿದ್ದರು. ಆಗ ಅದು ತಲೆಗೆ ಹತ್ತಲೇ ಇಲ್ಲ. ಕಂಠಪಾಠವು ಸಂಸ್ಕೃತದ ಕಲಿಕಾವಿಧಾನ. ಆದರೆ, ವ್ಯಾಕರಣ, ಛಂದಸ್ಸುಗಳು ಭಾಷೆಯ ಸಮಗ್ರ ತಿಳುವಳಿಕೆಗೆ ಅಗತ್ಯ. ಆ ಗ್ರಂಥಗಳನ್ನೂ ರಸಾಸ್ಪಾದಕ್ಕಾಗಿ, ರಸಾಸ್ಪಾದದ ಮೂಲಕ ಓದಲು ಸಾಧ್ಯ. ವ್ಯಾಕರಣ ಗ್ರಂಥಗಳ ಲೇಖಕರೂ ತುಂಟರು. ಸಾಕಷ್ಟು ರಸಿಕರು! ಉದಾಹರಣೆಗಳನ್ನು ಕೊಡುವಾಗ ರಸಾಸ್ವಾದದ ಸ್ಥಳಗಳನ್ನು ನಿರ್ಮಿಸುವಲ್ಲಿ ಅವರು ನಿಪುಣರು. ಇಂಥ ಸೂಕ್ಷ್ಮಗಳನ್ನು ಬೋಧಕರು ಗಮನಿಸಬೇಕು. ಕಾವ್ಯವನ್ನು ಸಹ ರಸಾಸ್ಪಾದದ ಮೂಲಕವೇ ತಲುಪಿಸುವುದು ಜಾಣತನ.”

Read More

ನರೇಂದ್ರಬಾಬು ಶಿವನಗೆರೆ ಅನುವಾದಿಸಿದ ಶ್ರೀಲಂಕಾದ ಕವಿ ವಿಪುಲಿ ಹೆಟ್ಟಿಯಾರಚ್ಚಿ ಬರೆದ ಕವಿತೆ

“ಊರಿನ ಸುರಕ್ಷತೆಗೆ
ಯಾರೂ ಅತಿಥಿಗಳೇ ಉಳಿದಿರದ
ನಾಯಿಯೂ ಕೂಡ ಇರದ
ಮನೆಗಳ ಹುಡುಕುತ್ತಾ ಅವರು”- ನರೇಂದ್ರಬಾಬು ಶಿವನಗೆರೆ ಅನುವಾದಿಸಿದ ಶ್ರೀಲಂಕಾದ ಕವಿ ವಿಪುಲಿ ಹೆಟ್ಟಿಯಾರಚ್ಚಿ ಬರೆದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…

Read More

ಬರಹ ಭಂಡಾರ