Advertisement

Month: April 2024

ಶರಣಬಸವ ಕೆ. ಗುಡದಿನ್ನಿ ಹೊಸ ಕಥಾ ಸಂಕಲನದಿಂದ ಒಂದು ಕಥೆ

“ಅವನಿಗೇನು ಗೊತ್ತು ಅವ್ರವ್ವನ ತ್ರಾಸು. ತವರುಮನ್ಯಾಗ ಒಂದು ಕಾಲು ಹೊರಗಾಕಲಾರದ್ಹಂಗ ಕಮ್ಮಗ ಕುಂತಗಂಡು ಬೆಳ್ದಾಕಿ ಇವರಪ್ಪನ ಕಟಿಗೆಂಡು ಏಟು ತ್ರಾಸು ಪಟ್ಟಿನಂತ. ನಮ್ಮ ಅತ್ತಿ ಬೇಗಂ ಏನ್ ಸಣ್ಣಾಗಿ ತ್ರಾಸು ಕೊಟ್ಲಾ ಕುಂತ್ರ ನಿರಮ್ಮಳಿಲ್ಲ ನಿಂತ್ರ ನಿರಮ್ಳಿಲ್ಲ ರಾತ್ರೀ ಮಕ್ಕಾಂಡಾಗೂ ವಟವಟ ಕೇಳಿ ಕೇಳಿ ಮನಿ ಯಾವಾಗ ಬಿಟ್ಟೀನಪೋ ದೇವ್ರೇ ಅನುಸೋದು. ಮನ್ಯಾಗ ನೋಡಿದ್ರ ಸರೀಗಿ ತಿಂಬಾಕ ಕೂಳಿಲ್ಲ ಅಂದ್ರೂ ನನಗಂಡುಂದು ಅತ್ತೀದು ಟಬರು ಬಾಳ.”

Read More

ಬಣ್ಣಗಳಿಗೆ ನಿಲುಕದ ಸೌಂದರ್ಯ!: ಕುಮಾರ ಬೇಂದ್ರೆ ಬರೆದ ಕಥೆ

“ತಲೆಯಿಂದ ಕಾಲವರೆಗೆ ಗಮನಿಸಿದ. ಅದೇ ರಶ್ಮಿ! ಗಾಢ ಹಳದಿ ವರ್ಣದ ಸೆಲ್ವಾರ್ ಕಮಿಜ್ ಧರಿಸಿದ್ದಾಳೆ. ತಲೆಯಿಂದ ನೀಳವಾಗಿ ಚಾಚಿ ಹೆಗಲು ಆವರಿಸಿರುವ ರೇಷ್ಮೆಯಂತಹ ಕೇಶ. ಅದೇ ಆಗ ತೀಡಿರುವ ಹುಬ್ಬು, ತುಟಿಯ ಕೆಂಪು ವರ್ಣ ಬೆಳಗಿನ ತಂಪಿಗೆ ನಳನಳಿಸುತ್ತಿದ್ದವು. ಗುಲಾಬಿ ಪಕಳೆಯಷ್ಟೇ ನಾಜೂಕಾದ ಅವಳ ಕೆನ್ನೆಯ ತ್ವಚೆಯಲ್ಲಿ ಮಂಜಿನ ಹನಿಗಳು ನಿಂತು ಮುತ್ತಿನಂತೆ ಮಿಂಚುತ್ತಿವೆ. ವಿಶಾಲವಾದ ಕಣ್ಣುಗಳಲ್ಲಿ ಆಪ್ತಭಾವ, ಅಂತಃಕರಣ ತುಂಬಿದೆ…”

Read More

ಎಲ್ಲಿ ನೋಡಿದರೂ…!: ‘ಅಪರಾಧ ಮತ್ತು ಶಿಕ್ಷೆ’ ಕಾದಂಬರಿಯ ಎರಡನೇ ಭಾಗದ ಎರಡನೆಯ ಅಧ್ಯಾಯ

“ಕೊನ್ನೊಗ್ವಾಡೆಯೆಸ್ಕಿ ಬುಲೆವಾಕ್ಕೆ, ಎರಡು ದಿನದ ಹಿಂದೆ ಹುಡುಗಿ ಸಿಕ್ಕಿದ್ದಳಲ್ಲ, ಅದೇ ಬೀದಿಗೆ ತಿರುಗುವಾಗ, ಅವನ ನಗು ಹೊರಟು ಹೋಯಿತು. ಬೇರೆಯ ಯೋಚನೆಗಳು ತಲೆ ಎತ್ತುವುದಕ್ಕೆ ಶುರುಮಾಡಿದವು. ಆ ದಿನ ಆ ಹುಡುಗಿ ಹೋದ ಮೇಲೆ ಬಹಳ ಹೊತ್ತು ಕೂತು ಯೋಚನೆ ಮಾಡಿದ್ದೆನಲ್ಲಾ ಆ ಬೆಂಚಿನ ಹತ್ತಿರ ಹೋಗುವುದು ಬೇಡ ಅನ್ನಿಸಿತು. ಅವನು ಇಪ್ಪತ್ತು ಕೊಪೆಕ್ ಕೊಟ್ಟಿದ್ದ ಮೀಸೆ ಪೋಲೀಸಿನವನು ಮತ್ತೆ ಕಣ್ಣಿಗೆ ಬಿದ್ದರೆ ಕಷ್ಟವಾಗತ್ತೆ ಅನ್ನಿಸಿತು.”

Read More

“ಇನ್ ಆನ್ ಆಂಟೀಕ್ ಲ್ಯಾಂಡ್”: ಪುರಾತನ ಪ್ರಯಾಣಗಳ ಅನನ್ಯ ಅನ್ವೇಷಣೆ

“ಈ ಕೃತಿಯ ಇತಿಹಾಸಕ್ಕೆ ಸಂಬಂಧಿಸಿದ ವಸ್ತುವಾದರೆ, ಘೋಷ್ ಕ್ಷೇತ್ರಕಾರ್ಯಕ್ಕಾಗಿ ಇಜಿಪ್ಟಿನಲ್ಲಿ ಬಾಳ್ವೆ ನಡೆಸಿದ ದಿನಗಳ ಅನುಭವಗಳ ಕತೆ ಪ್ರವಾಸಕಥನಕ್ಕೆ ಸಂಬಂಧಿಸಿದ ವಸ್ತು. ಯಹೂದಿ-ಅರೇಬಿಕ್ ಭಾಷೆ ಕಲಿಯುವ ಸಲುವಾಗಿ ಘೋಷ್ ಲತಾಯಿಫಾ ಮತ್ತು ನಶಾವೀ ಎಂಬ ಹಳ್ಳಿಗಳಲ್ಲಿ ವಾಸ ಮಾಡುತ್ತಾರೆ. ಅದು ಯಾಕೆ ಈ ಹಳ್ಳಿಗಳಲ್ಲಿ ವಾಸ ಮಾಡಬೇಕಾಗಿ ಬರುತ್ತದೆ ಎನ್ನುವುದೂ ಕೂಡ ಮುಖ್ಯವೇ. ಕೈರೋದ ಜೆನಿಜಾದಲ್ಲಿ ಸಂಶೋಧಕರಿಗೆ ಬೆನ್..”

Read More

ಎನ್‌.ಸಿ. ಮಹೇಶ್‌ ಬರೆಯುವ ʼರಂಗ ವಠಾರʼ ಇನ್ನು ಪ್ರತಿ ಗುರುವಾರ

“ಯಾವುದೇ ಒಂದು ಪ್ರಕಾರದ ಬಗ್ಗೆ ತಿಳಿಯಬೇಕಿದ್ದರೆ ಅದರ ಹಿನ್ನೆಲೆ ಕೊಂಚವಾದರೂ ಅರಿವಿರಬೇಕಲ್ಲ..? ಈ ರಂಗದ ಕಾನ್ಸೆಪ್ಟ್ ಹುಟ್ಟಿಕೊಂಡದ್ದು ಹೇಗೆ ಮತ್ತು ಎಲ್ಲಿಂದ? ಗ್ರೀಕ್ ಮತ್ತು ರೋಮನ್ ಪರಿಕಲ್ಪನೆಗಳ ಬಗ್ಗೆ ಅಕ್ಷರ ಸರ್ ಅಧ್ಯಯನ ಮಾಡಿ ಬರೆದಿದ್ದದ್ದು ಗೊತ್ತಿತ್ತು. ಅಷ್ಟು ಡೀಟೆಲ್ಸ್ ಹೇಳಿದರೆ ಸ್ಟೂಡೆಂಟ್ಸ್ ಏನು ಮಾಡಬಹುದು ಎಂಬ ಅಂದಾಜು ನನ್ನಲ್ಲಿ ಇದ್ದಿತಾದ್ದರಿಂದ ನಾನು ನೇರವಾಗಿ ಭಾರತೀಯ ಸಂದರ್ಭಕ್ಕೆ ಶಿಪ್ಟ್ ಆಗಿ ನಾಟ್ಯಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಕಥೆಯಿಂದ..”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ