Advertisement

Month: May 2024

ಕೆ.ವಿ. ತಿರುಮಲೇಶ್‌ ಬರೆದ ಹೊಸ ಕವಿತೆ

“ಇನ್ನು ಪದಮೋಹ ಹೇಳುವುದೆ ಬೇಡ ನಿಜಕ್ಕೂ
ಅದು ಪದಮೋಹವಲ್ಲ, ‘ನೆಗೆಟಿವ್ ಕೇಪೆಬಿಲಿಟಿ’
ಹಾಗೆಂದರೇನೆಂದು ಆಗ ನಮಗೆ ನಿಖರವಾಗಿ
ಗೊತ್ತಾಗದೆ ಇದ್ದರೂ-ಈಗ ಗೊತ್ತಾಗಿದೆಯೆಂದಲ್ಲ
ಆದರೆ ಯಾವ ರೀತಿಯಲ್ಲೋ ಇದೆ—
ಅನಿಸುತ್ತದೆ ಹಾಗೆಂದರೆ ಜೀವನವ್ಯಾಮೋಹ
ಪರಕಾಯ ಪ್ರವೇಶ”- ಕೆ.ವಿ. ತಿರುಮಲೇಶ್‌ ಬರೆದ ಹೊಸ ಕವಿತೆ

Read More

ನಾಗರಾಜ್ ವೀರಾಸ್ವಾಮಿ ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ನಾಗರಾಜ್ ವೀರಾಸ್ವಾಮಿ. ನಾಗರಾಜ್ ಮೂಲತಃ ಆಂಧ್ರಪ್ರದೇಶದ ಚಿತ್ತೂರಿನವರಾಗಿದ್ದು ಸಧ್ಯ ಬೆಂಗಳೂರು ವಾಸಿ. ಛಾಯಾಗ್ರಹಣ ವೃತ್ತಿ ಹಾಗೂ ಪ್ರವೃತ್ತಿಯನ್ನಾಗಿಸಿಕೊಂಡಿರುವ ಇವರಿಗೆ ಪ್ರಕೃತಿ ಛಾಯಾಗ್ರಹಣದಲ್ಲಿ ಅಪಾರ ಆಸಕ್ತಿ.  ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಮೌಲ್ಯ ಸ್ವಾಮಿ ಪುಸ್ತಕದ ಕುರಿತು ಆರ್. ವಿಜಯರಾಘವನ್ ಬರಹ

“ಸುಮ್ಮನೆ ಬಿದ್ದಿರುವ ಬಿಕ್ಕುಗಳು ಎಂಬ ಪುಸ್ತಕದ ಶೀರ್ಷಿಕೆಯೇ ಬೆರಳು ತೋರುತ್ತಿದೆ: ಅಲ್ಲಿ ಬಿಕ್ಕುಗಳೆಲ್ಲ ಸದ್ದಡಗಿ ಬಿದ್ದಿವೆ. ಇಲ್ಲಿ ಕವಿತೆಗಳಿಲ್ಲ. ಆದರೆ ನಮ್ಮೊಳಗಿನ ಮಾತಾಗದ ಬಿಕ್ಕುಗಳ ರಾಶಿಯಿದೆ. ಇದು ರಾಮರಾಜ್ಯದಲ್ಲಿ ಸೀತೆ ಬೆಂದದ್ದಕ್ಕೂ ಮೊದಲಿಂದಲೇ ಬಿದ್ದು ಸಂಚಯಿಸಿಕೊಳ್ಳುತ್ತಿರುವ ಬಿಕ್ಕುಗಳು. ಇವು ಹಳತಾಗಿಲ್ಲ, ಕೊಳೆತಿಲ್ಲ, ಕೊಚ್ಚಿ ಹೋಗಿಲ್ಲ, ಹಾಗೇ ಇವೆ. ನಿರಂತರವಾಗಿ ಬೆಳೆದುಕೊಂಡು. ಇದಕ್ಕೆ ಕಾರಣವೂ ಇಲ್ಲದಿಲ್ಲ. ‘ಕಾಣದ ಹಾಗೆ ಹರಿಯುವ ನಯವಂಚಕತೆಯನ್ನು’ ಹೊಂದಿಲ್ಲದ ಬದುಕುಗಳ ಹರಿವು ಮರೆಯಲ್ಲಿರುವುದಿಲ್ಲ.”

Read More

“ನಾನು ಮೆಚ್ಚಿದ ನನ್ನ ಕಥೆ” ಕಥಾ ಸರಣಿ ಆರಂಭ

““ನೀನು ಹುಚ್ಚನಂತೆ ಮಾತಾಡಬೇಡ. ನಮ್ಮ ಊರಿನಲ್ಲಿ ಮನುಷ್ಯರು ಮಾತ್ರ ಇದ್ದಾರೆ. ಇಲ್ಲಿ ಯಾವ ಕ್ಷಣಕ್ಕೂ ದೊಂಬಿ, ಗಲಭೆ ನಡೆದಿಲ್ಲ. ಜಾತಿ ಮತ್ಸರದಿಂದ ಹೃದಯಗಳು ಹೊತ್ತಿ ಉರಿದಿಲ್ಲ. ನೀನು ವಿನಾಕಾರಣ ನಮ್ಮಗಳ ಬಾಂಧವ್ಯಕ್ಕೆ ಬೆಂಕಿ ಹಚ್ಚಬೇಡ”
ಸ. ರಘುನಾಥ್‌ ಹಾಗೂ ಆರ್. ವಿಜಯರಾಘವನ್‌ ಅವರ ಸಂಪಾದಕತ್ವದಲ್ಲಿ ರೂಪುಗೊಂಡ “ನಾನು ಮೆಚ್ಚಿದ ನನ್ನ ಕಥೆ” ಪುಸ್ತಕ ನಾಲ್ಕು ಸಂಪುಟಗಳಲ್ಲಿ ಮುದ್ರಣಗೊಂಡಿದೆ. ಈ ಭಾನುವಾರದಿಂದ ಹದಿನೈದು ದಿನಕ್ಕೊಮ್ಮೆ ಈ ಸಂಪುಟಗಳ ಕಥೆಗಳು…”

Read More

ʼಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೇ ಭಾಗದ ಮೊದಲ ಅಧ್ಯಾಯ

“ನಾಲ್ಕನೆಯ ಮಹಡಿಗೆ ಹತ್ತುತ್ತಿರುವಾಗ, ‘ಹೋಗುತಿದ್ದ ಹಾಗೆ ಮೊಳಕಾಲೂರಿ ಕೂತು ಅವರಿಗೆ ಎಲ್ಲಾ ಹೇಳಿಬಿಡತೇನೆ,’ ಅಂದುಕೊಂಡ. ಮೆಟ್ಟಿಲು ಇಕ್ಕಟ್ಟಾಗಿದ್ದವು, ಕಡಿದಾಗಿದ್ದವು, ನೀರು ಚೆಲ್ಲಿ ವದ್ದೆಯಾಗಿದ್ದವು. ಎಲ್ಲ ಅಪಾರ್ಟ್ಮೆಂಟುಗಳ ಅಡುಗೆಮನೆಗಳೂ ಮೆಟ್ಟಿಲಿಗೆ ಮುಖ ಮಾಡಿಕೊಂಡು ಸುಮಾರಾಗಿ ಇಡೀ ದಿನ ಬಾಗಿಲು ತೆರೆದೇ ಇರುತಿದ್ದವು. ಹಾಗಾಗಿ ಯಾವಾಗಲೂ ಬಿಸಿ ಹಬೆಗೆ, ವಾಸನೆಗೆ ಉಸಿರು ಕಟ್ಟುತಿತ್ತು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

“ಚದುರಂಗ”ದ ಕುರಿತು ತೇಜಸ್ವಿನಿ ಹೆಗಡೆ ಬರಹ

ಹೀಗೇ ಎಲ್ಲವನ್ನೂ ಓದುತ್ತಾ, ಮಥಿಸುತ್ತಾ ಹೋದರೆ, ಆ ಕಾಲಕ್ಕೆ ಹುಟ್ಟಿದ್ದ ಉತ್ತಮ ಗುರಿಯುಳ್ಳ ಸಿದ್ಧಾಂತಗಳು ಕ್ರಮೇಣ ಅಧಿಕಾರದ ಲಾಲಸೆ ಹೇಗೆ ಬದಲಾದವು, ಹೋರಾಟವೇ ಬದುಕಾಗಿದ್ದ ಒಂದು ಪರ್ವ…

Read More

ಬರಹ ಭಂಡಾರ