Advertisement

Month: May 2024

ಕಲ್ಲೇಶ್ ಕುಂಬಾರ್ ಕಥಾಸಂಕಲನದ ಕುರಿತು ವೇದಾಂತ ಏಳಂಜಿ ಬರಹ

“ಗ್ರಾಮೀಣ ಭಾಗದ ಜನಜೀವನವನ್ನು ಆರಂಭದ ಎರಡು ಕಥೆಗಳಲ್ಲಿ ತೋರ್ಪಡಿಸುತ್ತಲೇ ಜಾಗತೀಕರಣದ ಸಮಸ್ಯೆಗಳಿಗೆ ಹಾರೊಗೇರಿ ತೆರೆದುಕೊಳ್ಳುವ ಕಥನಗಾರಿಕೆ ವಿಶಿಷ್ಟವಾದದ್ದು. ಆಧುನಿಕ ಕಾಲದಲ್ಲೂ ಊಳಿಗಮಾನ್ಯ ಪದ್ಧತಿಯನ್ನು ಅನುಸರಿಸುವ ‘ನಿಂದ ನಿಲುವಿನ ಘನ’ ಕಥೆಯ ಮಾನಿಂಗಯ್ಯನಂತವರು ದಲಿತ ಮಹಿಳೆಯರ ಮೇಲೆ ನೀರೆರೆಚುವ ಪದ್ಧತಿಯು ಆತನ ರಾಕ್ಷಸ ಸ್ವಭಾವ ತೋರುತ್ತದೆ. ಮೇಲ್ವರ್ಗದ ಈ ಸಂಪ್ರದಾಯವನ್ನು ರಮೇಶನ ಪ್ರಭಾವದಿಂದ ಕೆಂಚವ್ವಳು ನೀರೋಕುಳಿ ಆಚರಣೆಗೆ ವಿರೋಧಿಸುತ್ತಾಳೆ.”
ಕಲ್ಲೇಶ್ ಕುಂಬಾರ್ ಬರೆದ‌ ‘ನಿಂದ ನಿಲುವಿನ ಘನʼ ಕಥಾಸಂಕಲನದ ಕುರಿತು ಡಾ.ಎಂ.ವೇದಾಂತ ಏಳಂಜಿ ಬರಹ

Read More

ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕಥೆ “ಕಲಗಚ್ಚು”

“ಆಗಲೂ ಹೀಗೇ ಇದ್ದಳು. ಸಂಜೆಗತ್ತಲ ಹೊತ್ತಲ್ಲಿ ನೂರು ಆಶೆಗಳನ್ನು ಹುಟ್ಟಿಸುವವಳು ಒಂದು ಸಂಜೆ ಇರುಳು ತಲೆಯ ಮೇಲಿದ್ದ ಕಲಗಚ್ಚಿನ ಬಕೆಟ್ಟನ್ನು ನನ್ನ ಮೇಲೆ ಬಗ್ಗಿಸಿದ್ದಳು. ಆಮೇಲೆ ಎಂದೂ ಬಂದಿರಲಿಲ್ಲ. ಮಾತೂ ಬಿಟ್ಟಿದ್ದಳು. ಗುರುತೇ ಇಲ್ಲದವಳಂತೆ ದೂರವಾದಳು. ನಾನೂ ಊರು ಬಿಟ್ಟು ದೂರ ಎಲ್ಲೆಲ್ಲೋ ಹೋದೆ. ಏನೆಲ್ಲಾ ಆದೆ. ಅವಳ ಮೇಲೇ ಮೊದಲ ಕತೆ ಬರೆದು ಹರಿದು ಹಾಕಿದೆ. ಆಮೇಲೆಯೂ ಕಥೆಗಳನ್ನು ಬರೆದೆ. ಕವಿಯೂ ಆದೆ.”

Read More

ವಿತ್ತಮಂತ್ರಿಗಳ ಜೊತೆ ಸೃಜನಾತ್ಮಕ ತಲ್ಲಣಗಳು

“ನನ್ನ ನೇಮಕಾತಿಯ ರೀತಿ ಮತ್ತು ಹಿನ್ನೆಲೆಯಿಂದ ನನ್ನನ್ನು ಯಾವುದೇ ರಾಜಕೀಯ ವಿಚಾರಧಾರೆ ಅಥವಾ ಪಕ್ಷಕ್ಕೆ ಜೋಡಿಸುವುದು ಸಾಧ್ಯವಿರಲಿಲ್ಲ. ನೀತಿಯ ಘೋಷಣೆಯನ್ನೂ ಹಾಗೇ ನೋಡುವರೆನ್ನುವ ನಂಬಿಕೆಯಿತ್ತು. ನಿರ್ಗಮಿಸುತ್ತಿರುವ ಸರ್ಕಾರದೊಂದಿಗೆ ಇದ್ದ ಸತ್ಸಂಬಂಧಗಳು ಹೊಸ ಸರ್ಕಾರದೊಂದಿಗೂ ಮುಂದುವರೆಯುವ ನಂಬಿಕೆಯಿತ್ತು.”
ಎಂ.ಎಸ್. ಶ್ರೀರಾಮ್‌ ಅನುವಾದಿಸಿದ ವೈ.ವಿ. ರೆಡ್ಡಿಯವರ ಆತ್ಮಕಥನದ ಆಯ್ದ ಭಾಗದ ಕೊನೆಯ ಕಂತು

Read More

ಸೀಮಾರೇಖೆಯಿಲ್ಲದ ಮೂಢನಂಬಿಕೆಗಳು……!

“ಏವ್‌ಬರಿ ಸುತ್ತಮುತ್ತ ಕ್ರೈಸ್ತ ಜನಾಂಗದವರೆ ಬದುಕುತ್ತಿದ್ದರು, ಯಾರಾದರು ಸತ್ತಾಗ ಅವರ ಮನೆಯವರು ಅಂತ್ಯಸಂಸ್ಕಾರವನ್ನು ಮುಗಿಸಿ ಏವ್‌ಬರಿಯ ಚರ್ಚಿಗೆ ಬಂದು ಪೂಜೆ ಸಲ್ಲಿಸುತ್ತಿದ್ದರು. ಕೆಲವರ ಮನೆಯಲ್ಲಿ ಸತ್ತವರ ಹೆಸರಿನ ಪೂಜೆ ಸಲ್ಲಿಸಿದ ಮೇಲೆಯೂ ಕೂಡ ಆತ್ಮ ಕಾಣಿಸಿದ ಅನುಭವವಾಗಿದೆ. ಅಂಥಹ ಸಮಯದಲ್ಲಿ ಚರ್ಚಿನ ಪಾದ್ರಿಯ ಸಲಹೆಯ ಮೇರೆಗೆ ಒಂದು ಪೂಜಿಸಿದ ಯಂತ್ರವನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಅದಾಗಿಯೂ ಸುತ್ತ ಮುತ್ತಲಿನ ಕೆಲವು ಊರುಗಳಲ್ಲಿ ಆತ್ಮಗಳು…”

Read More

ವಿಕ್ರಮ ವಿಸಾಜಿ ಬರೆದ ಈ ದಿನದ ಕವಿತೆ: ಅಯ್ಯಪ್ಪ ಪಣಿಕ್ಕರರ ಓದುವ ಕೋಣೆ

“ತೆರೆದ ಹಾಳೆಗಳಲ್ಲಿ ಜೀವದ ಬಸಿರು
ಚಿತ್ತ ಕಾಟು ಕೂಟುಗಳ ಲೋಕದಲ್ಲೆ
ಊರ್ವಶಿ ಪುರೂರವರ ಬೇಟದಾಟ
ಟೈಪರೈಟರಿನ ಚಿಕ್ಕ ಚಿಕ್ಕ ಕೊರಕಲುಗಳಲ್ಲಿ
ಭಾವ ವಿಭಾವ ಅನುಭಾವದ ನೀರ ನೆಲೆ.”- ವಿಕ್ರಮ ವಿಸಾಜಿ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ