Advertisement

Month: May 2024

ಎನ್ ಎ ಎಂ ಇಸ್ಮಾಯಿಲ್ ಕವಿತೆ: ಸಂಭಾಷಣೆ

“ಅವನಂದ; ನಾನಿಲ್ಲೇ ಇರಲೇ
ಅದೆಲ್ಲಿರುವೆ ಎಂದವಳ ಕೇಳ್ವಿ
ಪಕ್ಕದಲ್ಲಿ ಎಂಬುದವನ ಹೇಳಿಕೆ
ನೀ ಚುಂಬಿಸಿದರೆ ಎಂದವಳ ಸಂಶಯ”- ಎನ್ ಎ ಎಂ ಇಸ್ಮಾಯಿಲ್ ಕವಿತೆ: ಸಂಭಾಷಣೆ

Read More

ಸ್ವಾಯತ್ತತೆಯೆಡೆಗೆ ತುಡಿಯುವ ದಾಕ್ಷಾಯಿಣಿಯ ಪಾತ್ರ

ಸಂಸಾರಕ್ಕೆ ಯೋಗ್ಯವೆನಿಸುವ ಲಕ್ಷಣಗಳಾವುವೂ ಶಿವನಲ್ಲಿ ಇರುವಂತೆ ನಮಗೆ ಕಾಣಿಸುವುದಿಲ್ಲ. ಅವಳ ಅಪ್ಪನಾದ ದಕ್ಷನಿಗೂ ಹಾಗೆ ಕಂಡಿರಬೇಕು. ಇಲ್ಲಿ ನಾವು ಗಮನಿಸಬೇಕಾದ್ದು, ಶಿವನ ಅಲೆಮಾರಿತನ, ಒರಟುತನವು ‘ಗೃಹಸ್ಥ’ ನ ಲಕ್ಷಣಕ್ಕೆ ತೀರಾ ವಿರುದ್ಧವಾದುದು ಎನ್ನುವುದನ್ನು. ಲಹರಿಯಲ್ಲಿ ಯೋಚಿಸುತ್ತಾ ಹೋದರೆ, ಇದು ಹಲವು ಉತ್ತರಗಳನ್ನು ಮೇಲಿನ ಪ್ರಶ್ನೆಗಳಿಗೆ ಕೊಡುತ್ತಾ ಹೋಗುತ್ತದೆ.

Read More

ನದಿಯಂತೆ ಹರಿದವಳು: ಆತ್ಮಕತೆಯ ಒಂದೆರಡು ಪುಟಗಳು

ಶರಾವತಿ ನದಿಗೆ ಅಣೆಕಟ್ಟು ಕಟ್ಟುತ್ತಾರಂತೆ, ನಮ್ಮೂರು ಮುಳುಗುತ್ತದಂತೆ, ನಾಡಿಗೇ ಬೆಳಕು ದೊರೆಯಲಿದೆಯಂತೆ ಎಂಬೆಲ್ಲ ಸುದ್ದಿಗಳನ್ನು ಕೇಳುವಾಗ, ಮೀನಾಕ್ಷಿಯವರಿಗಿನ್ನೂ ಸಣ್ಣ ಹರೆಯ. ಈ ಎಲ್ಲ ಹೇಳಿಕೆಗಳ ನಡುವೆ ಒಂದಕ್ಕೊಂದು ಸಂಬಂಧವಿಲ್ಲ ಎಂದೆನಿಸುತ್ತಿತ್ತು.  ಆದರೆ ಹುಟ್ಟಿದೂರು ತೊರೆಯಲೇಬೇಕಾಯಿತು. ಮುಂದಕ್ಕೆ ಎಷ್ಟೊಂದು ಊರುಗಳಲ್ಲಿ, ಕಷ್ಟಗಳ ಮೆಟ್ಟಿಲೇರಿ ಬದುಕನ್ನು ಕಟ್ಟಿಕೊಳ್ಳಬೇಕಾಯಿತು ಎಂಬುದೇ ‘ಹರಿವ ನದಿ’ಯಲ್ಲಿರುವ ಜೀವನಗಾಥೆ. ಅಮ್ಮ ಮೀನಾಕ್ಷಿ ಭಟ್ಟರ ಜೀವನದಲ್ಲಿ ಎದುರಾದ ಸವಾಲುಗಳು ಮಗಳು ಭಾರತಿ ಹೆಗಡೆಗೆ ಇಂದಿಗೂ ಸ್ಫೂರ್ತಿ. ಲೇಖಕಿಯೂ ಆಗಿರುವ ಅವರು ಅಮ್ಮನ ದನಿಗೆ ಅಕ್ಷರ ರೂಪ ನೀಡಿದ್ದಾರೆ. ಈ ಆತ್ಮಕತೆಯ ಒಂದು  ಅಧ್ಯಾಯ ಕೆಂಡಸಂಪಿಗೆ ಓದುಗರಿಗಾಗಿ ಇಲ್ಲಿದೆ.

Read More

ಇರುಳಿನ ಹೊಸ ಬಣ್ಣ

ಆಗಾಗ ಊರಿನ ಬಂಧುಗಳು ತಂದು ಕೊಡುವ ಕುರ್ಲಿ ಸರಿಯಾಗಿ ಸ್ವಚ್ಛಗೊಳಿಸಿ ಹದವಾದ ಮಸಾಲೆಯೊಂದಿಗೆ ಬೇಯಿಸುವ ಕೆಲಸವು ರಾತ್ರಿಯಾದೊಡನೆ ಶುರುವಾಗುತ್ತದೆ. ಜೋರು ಮಳೆ ಬೀಳುವಾಗ, ಚಳಿ ತನ್ನ ಚಹರೆಯ ತೋರಿಸುತ್ತಿರುವಾಗ ಕಾಜುವಾಡಾದ ಯಾವುದೋ ಓಣಿಯ ಮನೆಯ ಬೆಂಕಿ ಒಲೆಯಲ್ಲಿ ತನ್ನ ತಾ ಹಸಿಯಾಗಿಯೆ ಕೆಂಡದಲ್ಲಿ ಸುಟ್ಟುಕೊಳ್ಳುವ ಏಡಿ ತನ್ನ ಅಮೋಘ ಪರಿಮಳವನ್ನು ಸುತ್ತಲಿನ ಲೋಕಕ್ಕೂ ಹರಡುತ್ತದೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ