Advertisement

Month: May 2024

ಜಿ.ಕೆ. ಹೆಗಡೆ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ಜಿ.ಕೆ. ಹೆಗಡೆ. ಮೂಲತಃ ಉತ್ತರ ಕನ್ನಡದ ಮೂರೂರಿನವವಾರ ಜಿ.ಕೆ. ಹೆಗಡೆ ಪ್ರಸ್ತುತ ಮೈಸೂರಿನಲ್ಲಿದ್ದಾರೆ. ಛಾಯಾಗ್ರಹಣವು ಅವರ ವೃತ್ತಿಯೂ ಹೌದು ಪ್ರವೃತ್ತಿಯೂ ಹೌದು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಪಿ.ಆರ್.ರಾಮಯ್ಯನವರ ರಾಜಕೀಯ ನಡವಳಿಕೆಗಳು

ಆ 74 ಜನರಲ್ಲಿ ಒಬ್ಬರಾದ ನಮ್ಮ ತಂದೆ ವಿಧಾನಸಭೆಯಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದರು ಎನ್ನುವ ಕುತೂಹಲ ನನಗೆ ಮೊದಲಿಂದಲೂ ಇತ್ತು. ಮನೆಯಲ್ಲಿ ಹೆಚ್ಚು ಮಾತನಾಡದವರು ಅಲ್ಲಿ ಮಾತಾಡುತ್ತಿದ್ದರೇ? ಏನು ಮಾತನಾಡುತ್ತಿದ್ದರು? ಅಥವಾ ‘ಸೈಲೆಂಟ್ ಮೆಂಬರ್ʼ ಆಗಿದ್ದರೋ? ಕಳೆದ ಹತ್ತು ವರ್ಷಗಳಲ್ಲಿ ಈ ಕುತೂಹಲ ಇನ್ನೂ ಹೆಚ್ಚಾಯಿತು. ವಿಧಾನಸೌಧದ ಗ್ರಂಥಾಲಯದಲ್ಲಿ ನನ್ನ ಹಳೆಯ ಎಂ ಎಸ್ ಸಿ ಸಹಪಾಠಿ…

Read More

ಯೋಗೀಂದ್ರ ಮರವಂತೆ ಪ್ರಬಂಧ ಸಂಕಲನಕ್ಕೆ ಎಸ್.ದಿವಾಕರ್ ಬರೆದ ಮುನ್ನುಡಿ

ಯೋಗೀಂದ್ರರ ಬರವಣಿಗೆಗಿರುವ ಒಂದು ವಿಶೇಷ ಗುಣವೆಂದರೆ ಅದರ ಇಂದ್ರಿಯಗಮ್ಯತೆ. ಸೃಜನಶೀಲವಾದ ಎಲ್ಲ ಉತ್ತಮ ಬರವಣಿಗೆಯಲ್ಲೂ ಓದುಗರ ಇಂದ್ರಿಯಗಳ ಮೂಲಕವೇ ಅವರನ್ನು ತಟ್ಟಿ ಪ್ರಚೋದಿಸುವ, ಹಾಗೆ ಪ್ರಚೋದಿಸುವ ಮೂಲಕವೇ ಅವರಿಗೆ ಅನುಭವವೊಂದನ್ನು ನಿಜಗೊಳಿಸಿಕೊಡುವ ಹಂಬಲವಿರುತ್ತದೆ. ಯೋಗೀಂದ್ರರ ಬರವಣಿಗೆ ಈ ಬಗೆಯದು.  ಈ ಪುಸ್ತಕದ ಶೀರ್ಷಿಕೆಯಾಗಿರುವ ‘ಮುರಿದ ಸೈಕಲ್ ಮತ್ತು ಹುಲಾಹೂಪ್ ಹುಡುಗಿ’ ನನ್ನ ದೃಷ್ಟಿಯಲ್ಲಿ ಒಂದು ಅತ್ಯುತ್ತಮ ಪ್ರಬಂಧ. -ಯೋಗೀಂದ್ರ ಮರವಂತೆ ಅವರ ‘ಮುರಿದ ಸೈಕಲ್, ಹುಲಾಹೂಪ್ ಹುಡುಗಿ’ ಎಂಬ ಕೃತಿಗೆ ಹಿರಿಯ ಲೇಖಕ ಎಸ್. ದಿವಾಕರ್ ಬರೆದ ಮುನ್ನುಡಿ ಇಲ್ಲಿದೆ.

Read More

ಪ್ರತಿಭಟನೆಯ ದೃಷ್ಟಿಕೋನ ಮೀರಿ ಯೋಚಿಸುವ ಕೊಡಗಿನ ಗೌರಮ್ಮ

ಮೊದಲ ತಲೆಮಾರಿನ ಲೇಖಕಿಯರು ವಿಧವಾವಿವಾಹ, ಶೋಷಣೆ, ಸ್ತ್ರೀ ಸ್ವಾತಂತ್ರ್ಯ ಮೊದಲಾದ ವಿಷಯಗಳನ್ನು ಕುರಿತು ಬಹಳ ದಿಟ್ಟವಾಗಿ ಬರೆದಿದ್ದರೂ ಸ್ತ್ರೀ ವ್ಯಕ್ತಿತ್ವವನ್ನು ಕೇವಲ ಶೋಷಣೆ ಹಾಗೂ ಅದರ ವಿರುದ್ಧ ಪ್ರತಿಭಟಿಸುವ ಹೆಣ್ಣಿನ ಮಾದರಿಯನ್ನು ಹೊರತುಪಡಿಸಿ ನೋಡಲು ಸಾಧ್ಯವಾದರೆ ಅವಳನ್ನು ಹೊಸದಾದ ದೃಷ್ಟಿಕೋನದಲ್ಲಿ ಅರಿಯಲು ಸಾಧ್ಯವಾಗುತ್ತದೆ ಎಂಬುದು  ಕೊಡಗಿನ ಗೌರಮ್ಮ ಅವರ ನಿಲುವಾಗಿತ್ತು. ಈ ಕಾರಣಕ್ಕಾಗಿ ಹೆಣ್ಣೊಬ್ಬಳು ಬದುಕಿದ, ಭಾವಿಸಿದ ಅನುಭವಗಳನ್ನು ಕುರಿತು ಬರೆದು…

Read More

ಸೌತ್‌ ಕೊರಿಯಾದ ʻಓಲ್ಡ್‌ಬಾಯ್’: ಚುರುಕು ನಿರೂಪಣೆಯ ಚೌಕಟ್ಟುಗಳು

ಕೋಣೆಯೊಳಗೆ ಅತ್ತಿಂದಿತ್ತ ಓಡಾಡಲು ಒಂದಿಷ್ಟು ಜಾಗ ಮತ್ತು ಹೊರಗಿನಿಂದ ಊಟ ಕೊಡಲು ಉಕ್ಕಿನ ಬಾಗಿಲಿನಲ್ಲಿ ಅಂಗೈ ಅಗಲದ ಕಿಂಡಿ. ಇಷ್ಟಲ್ಲದೆ ಉರುಳುವ ಗಂಟೆಗಳು ಸುಮ್ಮನೆ ಅವನನ್ನು ಸುತ್ತಿ ಚಿಂದಿ ಮಾಡುವುದನ್ನು ತಪ್ಪಿಸಿ, ಬೇರೆ ಕಡೆ ದೃಷ್ಟಿ ಹರಿಸುವಂತೆ ಮಾಡಲು ಸದಾ ಕಾಲ ಆನ್‌ ಆಗಿಯೇ ಇರುವ ಟೀವಿ. ಅದೇ ಅವನ ಸಂಗಾತಿ. ಉಳಿದಂತೆ ಆಗಾಗ ಹೊರಗೆಲ್ಲೋ ದೂರದಿಂದ ಅವನಿಗೆ ಆಗಾಗ ವಾಹನಗಳ ಓಡಾಟ ಇತ್ಯಾದಿಗಳ ಶಬ್ದ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ