Advertisement

Month: May 2024

ನನ್ನ ತಾಯಿಬೇರೇ ನನ್ನ ಕಥೆ

ಕಣ್ಣೀರ ಕಣ್ಣರೆಪ್ಪೆಗಳು ತಡೆಯದಾದವು. ತುಳುಕಿದವು. ಹೇಳಿದೆ. ‘ನಾನಲ್ಲ ಕಥೆ ಬರೆದದ್ದು. ಕಥೆಯ ನನ್ನ ತಾಯಿ ಹೇಳಿ ಬರೆಸಿದಳು. ನನ್ನ ತಾಯಿ ಈಗ ನನ್ನ ನೆತ್ತರಲ್ಲಿ ಮಾತ್ರ ಬದುಕಿ ಉಳಿದಿದ್ದಾಳೆ. ಅವಳ ಆತ್ಮ ನನ್ನ ಎದೆಗೂಡ ದೇಗುಲದಲ್ಲಿ ನನ್ನ ಚೈತನ್ಯವಾಗಿದೆ… ಅವಳ ಮೌನ ನನ್ನ ಭಾಷೆಯಾಗಿದೆ. ಅವಳ ಕಿಚ್ಚು ನನ್ನ ಬರೆಹದ ಬೆಳಕಾಗಿದೆ… ನಾನು ನೆಪದ ಕಥೆಗಾರ ಅಷ್ಟೇ… ಅವಳೇ ನನ್ನ ಬರೆಹದ ಬೇರು ಕಾಂಡ ರೆಂಬೆ ಕೊಂಬೆ ಚಿಗುರು ಎಲ್ಲ… ಎಲ್ಲ ಅವಳೇ… ನನ್ನದೇನಿದ್ದರೂ ಅವಳ ಕಥೆಯ ನೆರಳು ಅಷ್ಟೇ’ ಎಂದೆ.
ಮೊಗಳ್ಳಿ ಗಣೇಶ್‌ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆ ಸರಣಿಯ 34ನೇ ಕಂತು

Read More

ಜಗತ್ತಿನಾದ್ಯಂತ ಹರಡಿಕೊಂಡ ಗಾಂಧೀಜಿಯ ಅವಿನಾಶೀ ಆತ್ಮ

“ಅದ್ಯಾಕೆ ಗಾಂಧಿಯನ್ನು ಮಾತ್ರ ನೆಲದಲ್ಲಿ ನಿಲ್ಲಿಸಿದ್ದೀರ?” ಎಂದು ಕೇಳಲು ಬಾಯಿ ತೆರೆದೆ. ಆತನೇ ಹೇಳಿ ಬಿಟ್ಟ “ಅಲ್ಲಿ ನೋಡಿ ಗಾಂಧಿ ಮತ್ತು ಮಂಡೇಲಾ ಇಬ್ಬರು ಬರೀ ನೆಲದ ಮೇಲಿದ್ದಾರೆ. ಈ ಜಗತ್ತು ಕಂಡ ಅತ್ಯಂತ ಸರಳ ಜೀವಿಗಳು. ಅಬ್ಬರ, ಆಡಂಬರದಿಂದ ದೂರವೇ ಉಳಿದ ಇವರಿಬ್ಬರು ಎಲ್ಲರಿಗಿಂತ ಎತ್ತರದಲ್ಲಿ ನಿಲ್ಲಲು ಎಂದೂ ಬಯಸರು, ಆ ಕಾರಣಕ್ಕಾಗಿಯೇ ಹೀಗೆ ನಿಲ್ಲಿಸಲಾಗಿದೆ”. ಆತನ ಮಾತನ್ನು ಕೇಳಿ ದೇವರನ್ನೂ ವೈಭವದಲ್ಲಿ ಸ್ಥಾವರಗೊಳಿಸುವ ನನ್ನ ಅಲ್ಪಮತಿಯ ತಲೆಯ ಮೇಲೊಂದು ಮೊಟಕಿಕೊಂಡು ಮುಂದ್ಮುಂದೆ ನಡೆದೆ. ʼಕಂಡಷ್ಟೂ ಪ್ರಪಂಚʼ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ

Read More

ಡಾ. ಕೆ.ಎಸ್. ಗಂಗಾಧರ ಬರೆದ ಈ ದಿನ ಕವಿತೆ

“‘ಇಂತಿಷ್ಟೇ ಕಾಲದಲಿ ಇಂತಿಷ್ಟೇ ನೀರ ತರಲಿ’
ಎಂದೇನೂ ಕಡಲು ನಿಯಮ ಮಾಡಿಲ್ಲ.
ನೀ ನೀರ ತರದಿದ್ದರೂ
ಕಡಲಿಗೇನೂ ಮುನಿಸಿಲ್ಲ.
ಕಡಲೊಂದು; ನದಿಗಳು ನೂರಾರು.”- ಡಾ. ಕೆ.ಎಸ್. ಗಂಗಾಧರ ಬರೆದ ಈ ದಿನ ಕವಿತೆ

Read More

ನಾಳೆಗೆಂದು ತೆಗೆದಿರಿಸಿದ ಮುಷ್ಟಿ ಪೃಥುಕ

ನಾಳೆಯೆಂಬುದು ನಿಜವೋ ಸುಳ್ಳೋ ಬೇರೆ ಮಾತು. ಆದರೆ ಇಂದಿನ ಜೀವನವನ್ನು ದಾಟುವುದಕ್ಕಾಗಿ ಪ್ರೇರಣೆಯಾಗಿರುವುದು ಈ ʻನಾಳೆʼಗಳು ಅಲ್ಲವೇ. ಜಗತ್ತಿನ ಎಲ್ಲ ಜೀವಿಗಳೂ ನಾಳೆಗಳನ್ನು ಎಷ್ಟೊಂದು ಜತನ ಮಾಡುತ್ತವೆ. ಅದಕ್ಕಾಗಿ ಸದಾ ಶ್ರಮಿಸುತ್ತಲೇ ಇರುತ್ತವೆ. ಆದರೆ ಅದ್ಯಾಕೋ, ಈ ಜೀವಿಗಳ ಸಾಲಿನಲ್ಲಿ ಮನುಷ್ಯನ ಸ್ವಭಾವ ಮಾತ್ರ ವಿಭಿನ್ನವಾಗಿರುತ್ತವೆ. ಮನುಷ್ಯನೂ ನಾಳೆಗಳ ಬಗ್ಗೆ ಯೋಚಿಸಿದರೂ, ಅದಕ್ಕಾಗಿ ಮಾಡುವ ತಯಾರಿ ಮಾತ್ರ ತದ್ವಿರುದ್ಧವಾದುದು. ಸಂಪತ್ತನ್ನು ಜಮೆ ಮಾಡಿದಷ್ಟೂ ತಮ್ಮ ನಾಳೆಗಳು ಭದ್ರವಾಗಿರುತ್ತವೆ ಎಂದು ಭಾವಿಸುತ್ತ ಎಲ್ಲ ಜೀವಿಗಳಿಗೂ ತೊಂದರೆಯುಂಟು ಮಾಡುತ್ತಾನೆ ಎಂದು ಅನಿಸುತ್ತದೆ.
ಕೋಡಿಬೆಟ್ಟು ರಾಜಲಕ್ಷ್ಮಿಬರೆದ ಲೇಖನ

Read More

ಓದಿ ತಿಳಿ ಗಿಡವ ನೆಟ್ಟು ಕಲಿ

ಮಣ್ಣು ನಿರ್ಜೀವ ವಸ್ತು ಅಲ್ಲ ಅದು ಜೀವಂತ! ಅದರಲ್ಲಿ ಎಷ್ಟೋ ಕ್ರಿಮಿ ಕೀಟಗಳು, ಶಿಲೀಂದ್ರಗಳು, ಬಹುಮುಖ್ಯವಾಗಿ ಎರೆ ಹುಳುಗಳು ಇವೆಲ್ಲ ಇರಲೇಬೇಕು, ಅವುಗಳನ್ನು ಹೇಗೆ ಹೆಚ್ಚಿಸಬೇಕು, ಮಣ್ಣಿಗೆ ಹೊದಿಕೆ ಹೇಗೆ ಮಾಡಬೇಕು, ಸಸ್ಯಗಳನ್ನು ಸಹಜವಾಗಿ ಹೇಗೆ ಪೋಷಿಸಬೇಕು ಎಂಬೆಲ್ಲ ಹೊಸ ಹೊಸ ವಿಷಯಗಳ ಅರಿವು ನನಗೆ ಈ ಮಹಾನುಭಾವರು ಬರೆದ ಪುಸ್ತಕಗಳ ಮೂಲಕ ತಿಳಿದಿತ್ತು. ಇನ್ನೂ ಹಲವಾರು ಟಿಪ್ಪಣಿ ಮಾಡಿಟ್ಟುಕೊಂಡ ನನ್ನ ಹೊತ್ತಿಗೆಗಳು ಬೃಹದಾಕಾರವಾಗಿ ಬೆಳೆದಿದ್ದವು. ಈಗ ಗಿಡಗಳನ್ನು ಬೆಳೆಯುವ ಸಮಯ ಬಂದಿತ್ತು! ಇದು ಹೊಸದಾಗಿ ರೈತರಾಗುವವರಿಗೆ ಎದುರಾಗುವ ಸಮಸ್ಯೆ. ಸಿಕ್ಕಾಪಟ್ಟೆ ಮಾಹಿತಿಗಳ ಕೇಳಿ ತಬ್ಬಿಬ್ಬಾಗಿ ಬಿಡುತ್ತಾರೆ.  ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ಅಂಕಣ “ಗ್ರಾಮ ಡ್ರಾಮಾಯಣ”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ