Advertisement

Month: May 2024

“ದೀಡೆಕರೆ ಜಮೀನು”ನಲ್ಲಿರುವ ಸಂಕಟದ ಕಥೆಗಳು

ನಾನು ಈ ಮೊದಲು ಇವರ “ಆಲದ ಮರ” ಎಂಬ ಕತೆಯನ್ನು ಮಯೂರ ಪತ್ರಿಕೆಯಲ್ಲಿ ಓದಿದ್ದೆ. ಆವಾಗಲೇ ಓಹ್! ಸರ್ ಚೆನ್ನಾಗಿ ಕಥೆ ಬರೀತಾರಲ್ಲ ಎಂದು ಉದ್ಗರಿಸಿದ್ದೆ. “ಭಜಿ ಅಂಗಡಿ ಮಲ್ಲಕ್ಕ” ಮತ್ತು “ತಪ್ದಂಡ” ಇವೆರಡು ಕಥೆಗಳನ್ನು ಬಿಟ್ಟರೆ ಉಳಿದೆಲ್ಲವೂ ನೋವು, ಹತಾಶೆ ಅಸಹಾಯಕತೆಯಿಂದ ಕೂಡಿವೆ. ಕೊನೆವರೆಗೂ ಹೋರಾಡುವ “ಆಲದ ಮರ”ದ ಅಜ್ಜ, “ತಲ್ಲಣ”ದಲ್ಲಿರುವ ಮಕ್ಕಳ ಸಾವು, “ಮಹಾಪೂರ”ದಲ್ಲಿಯ ರಾಜಕೀಯ ನಾಟಕ, “ದಿವ್ಯ ಮೌನದ ಸಂತ”ನಲ್ಲಿ ಅಮಾಯಕನ ಕೊಲೆ, “ಋಣಮುಕ್ತ”ದಲ್ಲಿಯ ವ್ಯಕ್ತಿ ಅನ್ಯಾಯವಾಗಿ ನೋವು ಪಡುವ ದೃಶ್ಯಗಳು ಓದುಗನನ್ನು ಹಿಂಸಿಸುತ್ತವೆ.
ಮಲ್ಲಿಕಾರ್ಜುನ್ ಶೆಲ್ಲಿಕೇರಿಯವರ “ದೀಡೆಕರೆ ಜಮೀನು” ಕಥಾ ಸಂಕಲನದ ಕುರಿತು ಮಾಲಾ ಮ. ಅಕ್ಕಿಶೆಟ್ಟಿ ಬರಹ

Read More

ನಾನೇಕೆ ಪಾತ್ರವಾಗುವುದಿಲ್ಲ

ತಪ್ಪು ತಿಳಿಯಬೇಡಿ! ನನಗೆ ಪಾತ್ರಗಳನ್ನು ಸೃಷ್ಟಿಸುವುದಕ್ಕಿಂತ ಹೆಚ್ಚಾಗಿ ಅವುಗಳ ಜೊತೆಗೇ ಇದ್ದುಬಿಡುವುದು, ಅವುಗಳ ಜೊತೆ ಹೋಗಿಬಿಡುವುದೇ ಇಷ್ಟ. ನಾಲ್ಕು ಜನರ ಮಧ್ಯೆ, ಜನಸಂದಣಿಯ ನಡುವೆ ಇದ್ದೂ ಕೂಡ ನಾನು ಪಾತ್ರಗಳ ಜೊತೆ ಇದ್ದುಬಿಡಬಲ್ಲೆ. ಕುಟುಂಬದ ಸದಸ್ಯರು ಆಗಾಗ್ಗೆ ಆಕ್ಷೇಪಣೆ ತೆಗೆಯುವುದುಂಟು. ನೀವು ಮನೆಯಲ್ಲಿದ್ದರೂ, ನಮ್ಮೊಡನೆಯೇ ಇರುವಂತೆ ಕಂಡರೂ, ಇನ್ನೊಂದು ಲೋಕದಲ್ಲಿರುತ್ತೀರಿ. ಯಾರ ಮಾತನ್ನೋ ಕೇಳಿಸಿಕೊಳ್ಳುತ್ತಿರುತ್ತೀರಿ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಹನ್ನೊಂದನೆಯ ಪ್ರಬಂಧ ನಿಮ್ಮ ಓದಿಗೆ

Read More

ಆಡಿಕೊಳ್ಳುವ ಬಾಯಿಗೊಂದು ಬೀಗ…

ಯಾವ ಯಾವ ಕಾರಣಕ್ಕೆ ದಾಂಪತ್ಯಗಳು ಮುರಿದು ಬೀಳ್ತಿವೆ ಎಂಬುದು ಚರ್ಚೆಗೆ ನಿಲುಕುವ ವಿಷಯವೇ ಅಲ್ಲ. ಈಗ ಪ್ರತಿಮನೆಯಲ್ಲೂ ವಿಚ್ಚೇದನದ ಕೇಸ್‌ಗಳು, ಹೆಣ್ಣು-ಗಂಡಿನ ವರ್ತನೆ, ಮನಃಸ್ಥಿತಿಯ ಕುರಿತಾದ ದೂರುಗಳು, ಸ್ತ್ರೀವಾದ, ನೊಂದಗಂಡಂದಿರ ಸಂಘದ ಅಳಲುಗಳು ಯಥೇಚ್ಛವಾಗಿವೆ. ಯಾರ ಪರವೂ, ವಿರುದ್ಧವೂ ನಿಲ್ಲಲಾಗದ, ನಿಂತು ಸಾಧಿಸಲಾಗದ ಸಿಕ್ಕಾಗಿ ಉಳಿದಿವೆ. ಆದರೆ ಮಕ್ಕಳು ಬೇಕು ಅಥವಾ ಬೇಡ ಎಂಬ ಕಾರಣಕ್ಕಾಗಿ ನಡೆಯುತ್ತಿರುವ ದಾಂಪತ್ಯ ಸಮರಗಳ ಬಗ್ಗೆ ಸ್ವಲ್ಪ ಗಮನಹರಿಸಬಹುದು.
ಎಸ್. ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ ನಿಮ್ಮ ಓದಿಗೆ

Read More

ಸಿಹಿ ಕೊಟ್ಟರೆ ಅಳುತ್ತಿದ್ದ ಮಂದಿ…

ಸುತ್ತ ಎತ್ತ ನೋಡಿದರೂ ರಾಕ್ಷಸಾಕಾರದ ಗುಡ್ಡಗಳು, ತುಂಬಿ ಹರಿಯುತ್ತಿದ್ದ ನದಿಗಳು. ಅಲ್ಲಿ ನಮ್ಮಂತೆ ಗುಂಪು ಗುಂಪು ಮನೆಗಳಾಗಲಿ ಹಳ್ಳಿಗಳಾಗಲಿ ಇಲ್ಲ. ಗುಡ್ಡಗಳಲ್ಲಿಯೇ ಹಳ್ಳಿಗಳು. ಅರ್ಧ ಕಿಲೋಮೀಟರ್ ಒಂದು, ಕಿಲೋಮೀಟರ್ ಅಂತರದಲ್ಲಿ ಒಂದೊಂದು ಮನೆಗಳು. ವಾಹನಗಳಿಗಿಂತ ಕುದುರೆಗಳೆ ಸಂಚಾರಕ್ಕೆ ಆಸರೆಗಳು. ನಮ್ಮ ತಂಡ ಮೊದಲೆ ತಯಾರಿಸಿ ಇಟ್ಟ ಅಡುಗೆ ಸಾಮಗ್ರಿಗಳ, ಬಟ್ಟೆ, ಹಾಸಿಗೆ ಹೊದಿಕೆಗಳ ಕಿಟ್ಟನ್ನು ಪ್ರತಿ ಮನೆಗೂ ತಲುಪಿಸಿ ಅವರಿಗೊಂದಿಷ್ಟು ಸಾಂತ್ವಾನ ಹೇಳಿ ಬರುತ್ತಿತ್ತು. ಶಾಲೆಗೆ, ದುಡಿಯಲು, ಕೊಂಡಕೊಳ್ಳಲು ಹೊರಗೆ ಹೋದವರು ಮರಳಿ ಹೆಣವಾಗಿ ಸಿಗುತ್ತಿದ್ದರು.
ಇಸ್ಮಾಯಿಲ್‌ ತಳಕಲ್‌ ಬರೆಯುವ ‘ತಳಕಲ್‌ ಡೈರಿ’ಯಲ್ಲಿ ಹೊಸ ಬರಹ ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ