Advertisement

Month: May 2024

ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ

“ನನ್ನ ಬೈಕ್ ಸೀಟಿನಲಿ ಅವಳ ಜಾಗದಲಿ
ಈಗ ಮಗಳು ಕುಳಿತಿದ್ದಾಳೆ
ಬಾಯಿ ಬಿಡುವಂತಿಲ್ಲ ಅದು
ನನ್ನ ಹಳೆ ಗೆಳತಿಯ
ಮೀಸಲು ಸ್ಥಾನವೆಂದು”- ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ

Read More

ಇರುವ ಶಾಂತಿಯನ್ನು ಉಳಿಸಿಕೊಳ್ಳೋಣ

ಸ್ವರ್ಗದ ಹಕ್ಕಿಯಾದ ನವಿಲು ತನ್ನ ಒಂದು ಸಣ್ಣತಪ್ಪಿನಿಂದ ಅಲ್ಲಾನ ಶಾಪಕ್ಕೆ ಗುರಿಯಾಗಿ ಭೂಮಿಗೆ ಬಂದರೂ ಅವುಗಳು ನೆಲೆಸಿರುವಲ್ಲಿ ಶಾಂತಿ ಸಮಾಧಾನ ನೆಲೆಯೂರುತ್ತದೆ. ಭಾರತ ಮೊದಲನೆಯ ಅಣುಬಾಂಬಿನ ಪರೀಕ್ಷೆಯನ್ನು ಪ್ರೋಖರಾನಿನಲ್ಲಿ ನಡೆಸಿದಾಗ ಅವುಗಳೆಲ್ಲವೂ ಬೆಚ್ಚಿಬೀಳುತ್ತವೆ. ಅಲ್ಲಿ ಅವುಗಳು ಕಾಣಸಿಗುವುದಿಲ್ಲ. ಕಾಣೆಯಾಗಿರುವ ನವಿಲುಗಳಿಗಾಗಿ ನಾಟಕಕಾರ ಪತ್ರಿಕೆಯಲ್ಲಿ ಬರೆದು ಜಾಗೃತಿ ಮೂಡಿಸುವ ಪ್ರಯತ್ನಮಾಡಿತ್ತಾನೆ. ಶಾಂತಿನೆಲೆಸುವುದು ಆತನ ಹಂಬಲ.
ಪ್ರೊ. ಕೆ. ಇ. ರಾಧಾಕೃಷ್ಣ ಅನುವಾದಿತ ಸುರೇಶ ಆನಗಳ್ಳಿ ನಿರ್ದೇಶನದ “ನವಿಲು ಪುರಾಣ” ನಾಟಕದ ಕುರಿತು ನಾರಾಯಣ ಯಾಜಿ ಬರಹ

Read More

ದ್ರಾವಿಡ್ ಮತ್ತು ಗಂಗೂಲಿ: ಒಂದು ಅಪೂರ್ವ ಜೋಡಿ

ಅವರ ಕ್ರಿಕೆಟ್ಟನ್ನು ಸದಾಕಾಲ ಸ್ಮರಿಸಲು ಕರ್ನಾಟಕದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ‘ದ ವಾಲ್‌ʼಗೆ ಒಂದು ಗೋಡೆ ಮೀಸಲಿಟ್ಟು ಅವರ ಚಿತ್ರವನ್ನು ಮಾಡಿಸಿದ್ದಾರೆ. ಇದು ಒಂದು ರೀತಿ ಜನಗಳು, ಕ್ರೀಡಾಭಿಮಾನಿಗಳು, ಮುಂದಿನ ಪೀಳಿಗೆಯವರು ರಾಹುಲ್ ದ್ರಾವಿಡ್‌ರ ಆಟವನ್ನು ಇಲ್ಲಿ ಬಂದು ನೋಡಿ ಅವರ ಆಟವನ್ನು ಸ್ಮರಿಸುವುದಕ್ಕೆ ಅವಕಾಶ. ಅದರ ಮೇಲೆ ಕನ್ಸಿಸ್ಟೆನ್ಸಿ, ಕಮಿಟ್ಮೆಂಟ್, ಕ್ಲಾಸ್ ಎಂದು ಬರೆಸಿದ್ದಾರೆ. ಅರ್ಥಾತ್‌ ಸ್ಥಿರತೆ, ಭದ್ಧತೆ ಮತ್ತು ಆಡುವ ಶಿಸ್ತು ಅನ್ನುವ ಅರ್ಥ ಕೊಡುತ್ತೆ. ಇದೆಲ್ಲವೂ ಅವರ ಆಟಗಾರಿಕೆಯಲ್ಲಿ ನೋಡಬಹುದು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ

Read More

ಶಾಂತಿನಾಥರೊಂದಿಗೆ ಸ್ಕಾಚ್…

ಶಾಂತಿನಾಥರ ಸಾಹಿತ್ಯ ಆಗಿನ ಕಾಲಕ್ಕೂ ಹೊಸ ಮತ್ತು ಯಾರೂ ಪ್ರಯತ್ನಿಸಿರದ ಆಯಾಮಗಳನ್ನು ತೆರೆದಿಡುತ್ತಿತ್ತು ಎನ್ನುವುದು ನಿಜ. ಹೀಗೆ ಮಡಿವಂತಿಕೆಯೇ ಇಲ್ಲದೇ ಬರೆಯುತ್ತಿದ್ದ ಶಾಂತಿನಾಥರು ಯಾವುದೇ ವಿವಾದಕ್ಕೆ ಒಳಗಾಗಲಿಲ್ಲ. ತಮ್ಮಷ್ಟಕ್ಕೆ ತಾವು ನಿರ್ಭಿಢೆಯಿಂದ ಬರೆದರು. ತಮ್ಮ ವಿಸ್ತಾರವಾದ ಸಾಹಿತ್ಯ- ಮಾನಸಶಾಸ್ತ್ರ – ಸಮಾಜಶಾಸ್ತ್ರ – ರಾಜಕೀಯದ ಓದು ಮತ್ತು ಒಳನೋಟಗಳ ಹಿನ್ನೆಲೆ ಅವರ ಕಥೆಯ ಕಟ್ಟುವಿಕೆಯಲ್ಲಿದೆ.
“ಶಾಂತಿನಾಥ ದೇಸಾಯಿ ಸಾಹಿತ್ಯ-ವ್ಯಕ್ತಿತ್ವ” ಕೃತಿಯಲ್ಲಿ ಎಂ.ಎಸ್.ಶ್ರೀರಾಮ್ ಬರೆದ ಲೇಖನ ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ