Advertisement

Month: May 2024

ಟೇಪ್‌ ರೆಕಾರ್ಡರ್ ವಿಥ್ ರೇಡಿಯೋ ಎಂಬ ಮಾಯಾಪೆಟ್ಟಿಗೆ: ಸುಧಾ ಆಡುಕಳ ಬರಹ

ಎಲ್ಲರ ಒಕ್ಕೊರಲ ಒತ್ತಾಯಕ್ಕೆ ಅಪ್ಪನೂ ಇಲ್ಲವೆನ್ನಲಾರದೇ ನಡುಅಂಗಳದಲ್ಲಿಯೇ ಚಾಪೆ ಹಾಸಿ, ಮದ್ದಲೆಯೊಂದಿಗೆ ಸಜ್ಜಾಗಿಯೇಬಿಟ್ಟರು. ಸುತ್ತ ಮುತ್ತಿದ ನೀರವ ಮೌನದ ನಡುವೆ ಅಪ್ಪ ಮದ್ದಲೆ ಬಡಿಯುತ್ತಾ, ದೊಡ್ಡ ದನಿಯಲ್ಲಿ “ವಿಘ್ನೇಶಾಯ ಸರಸ್ವತೈ ಪರ‍್ವತೈ ಗುರುವೇ ನಮಃ” ಎಂದು ಗಣಪತಿ ಪೂಜೆಯೊಂದಿಗೆ ಆರಂಭಿಸಿ, “ಸರಸಿಜಾಂಬಕಿಯರೇ ಕೇಳಿ” ಎಂಬ ಭೀಷ್ಮಪರ್ವದ ನಾಲ್ಕು ಹಾಡುಗಳನ್ನು ಹಾಡಿ ಇನ್ನು ಸಾಕು ಎಂಬಂತೆ ಕೈಸನ್ನೆ ಮಾಡಿದರು. ಇದನ್ನೇ ಕಾಯುತ್ತಿದ್ದ ಸಾಹೇಬರು ಟಕ್ ಎಂದು ರೆಕಾರ್ಡಿಂಗನ್ನು ಬಂದ್ ಮಾಡಿದರು.
ಸುಧಾ ಆಡುಕಳ ಬರಹ ನಿಮ್ಮ ಓದಿಗೆ

Read More

ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್: ಇ.ಆರ್. ರಾಮಚಂದ್ರನ್ ಅಂಕಣ

ಟೆಸ್ಟ್ ಕ್ರಿಕೆಟ್ ಚೆನ್ನಾಗಿ ಆಡದಿದ್ದರೆ, ಬಿಸಿಸಿಐಅನ್ನು ಬಹಳ ಭಾರತೀಯರೇ ದೂರುತ್ತಾರೆ. ಒಂದು ರೀತಿಯಲ್ಲಿ ಇದು ಸಹಜ. ಭಾರತ ಟೆಸ್ಟ್ ಮ್ಯಾಚ್‌ಗಳನ್ನು ಚೆನ್ನಾಗಿ ಆಡುತ್ತಿಲ್ಲ ಅದಕ್ಕೆ ಹಣದ ವಾಸನೆ ಬಂದಿದೆ, ಅಲ್ಲಿ ಆಡುವವರೆಲ್ಲಾ ಹಣದಾಸೆಯಿಂದ ಟೆಸ್ಟ್ ಚೆನ್ನಾಗಿ ಆಡುತ್ತಿಲ್ಲ ಎಂಬ ಮಾತೂ ಈಗೀಗ ಕೇಳಿಬರುತ್ತಿದೆ. ಈ ಮಧ್ಯೆ ಭಾರತ ಯಾವ ಕಪ್ /ಟ್ರೋಫಿ, ಅದರಲ್ಲೂ ಐಸಿಸಿ ಟ್ರೋಫಿಯನ್ನು ಕಳೆದ 10 ವರ್ಷದಿಂದ ಗೆದ್ದಿಲ್ಲ. ಅದಕ್ಕೆ ಎಷ್ಟೋ ಅಭಿಮಾನಿಗಳೂ ಐಪಿಎಲ್‌ನ ಜರಿಯುತ್ತಾರೆ!
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ

Read More

ಡೋ.ರ. ಬರೆದ ಈ ದಿನದ ಕವಿತೆ

“ಇದ್ದರು ಇರದ೦ತಿರುವವರು
ಕೂಡಿಟ್ಟರು ಕೊಡದವರು
ಬೆಳೆದರೆ ಬುಡ ಕಡಿಯುವವರು
ಗೆದ್ದಾಗ ಗುಮ್ಮನಂತೆ
ಬೆನ್ನ ಹತ್ತಿ ಬರುವವರು
ಹೆಣದ ಮೇಲಿನ ಶೃಂಗಾರದಷ್ಟೆ ನಿಗೂಢವಾಗಿ ಕಾಣುವರೇಕೆ?”- ಡೋ.ರ. ಬರೆದ ಈ ದಿನದ ಕವಿತೆ

Read More

ಬರವಣಿಗೆಯ ಶಿಸ್ತನ್ನು ಕಲಿಸಿದ ಸಿಸ್ಟರ್ ಲಾರೆನ್ಸಿಯಾ: ಸುಮಾವೀಣಾ ಸರಣಿ

ಸಿಸ್ಟರ್ ಲಾರೆನ್ಸಿಯ ಅವರಿಗೆ ಗಾರ್ಡೆನಿಂಗ್ ಅಂದರೂ ಇವರಿಗೆ ಬಹಳ ಇಷ್ಟವಿತ್ತು. ನಮ್ಮ ತರಗತಿಯ ಮುಂದೆ ಇದ್ದ ಹೂತೋಟದಲ್ಲಿ ಚಂದದ ಗಿಡಗಳನ್ನು ಬೆಳೆಸಿದ್ದರು. ಅದರಲ್ಲಿ ದಾಳಿಂಬೆ ಬಣ್ಣದ ಪಾಪಿ ಹೂಗಳು ಅರಳುತ್ತಿದ್ದುದನ್ನು ಅದರ ನಯವಾದ ಎಸಳುಗಳನ್ನು ಇವತ್ತಿಗೂ ಮರೆಯಲಾಗುತ್ತಿಲ್ಲ. ತಮ್ಮ ತಲೆಯ ವಸ್ತ್ರವನ್ನು ಸರಿ ಮಾಡಿಕೊಂಡು ಬಗ್ಗಿ ಕೆಲಸ ಮಾಡುತ್ತಿದ್ದರು. “ಮುಂದೆ ಮಿಡ್ಲ್ ಸ್ಕೂಲಿಗೆ ಹೋಗುತ್ತೀರ ಚಂದ ಕಲಿತು ಹೋಗಬೇಕು” ಎಂದು ಪದೇ ಪದೇ ಹೇಳುತ್ತಿದ್ದರು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ನಾಲ್ಕನೆಯ ಬರಹ

Read More

ಸಾವಿರ ಕಥೆಗಳ ಸಂಸಾರ: ಎಸ್‌. ನಾಗಶ್ರೀ ಅಜಯ್‌ ಅಂಕಣ

ಎಷ್ಟೋ ಕಥೆಗಳಲ್ಲಿ ನಾವೇ ಮುಖ್ಯವೋ, ಅಮುಖ್ಯವೋ ಒಂದು ಪಾತ್ರವಾಗಿ ಚಲಿಸುತ್ತಿರುತ್ತೇವೆ. ಅಸಲಿಗೆ ನಮ್ಮ ಸತ್ವಪರೀಕ್ಷೆಯಾಗುವುದು, ಇಂತಹ ದ್ವಂದ್ವಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಜವಾಬ್ದಾರಿ ನಮ್ಮ ಹೆಗಲೇರಿದಾಗ. ಹಾವು ಸಾಯಬಾರದು. ಕೋಲು ಮುರಿಯಬಾರದು ಎನ್ನುವ ನಾಜೂಕಯ್ಯರು ಹೇಗೋ ಬಚಾವಾಗುತ್ತಾರೆ. ಇದ್ದರೆ ಒಂದು ಕಡೆ. ಎರಡು ದೋಣಿಯ ಪಯಣ ನಮಗಲ್ಲ ಎನ್ನುವವರಿಗೆ ಸವಾಲು ಹೆಚ್ಚಿನದು. ಆದರೆ ಬಹಳಷ್ಟು ಸಲ ನಮ್ಮ ಪ್ರಯತ್ನಕ್ಕಿಂತ ಆ ಕ್ಷಣದ ಬಲವೇ ಹೆಚ್ಚಾಗಿ, ತುರ್ತು ಪರಿಸ್ಥಿತಿಯಲ್ಲಿ ಎರಡರಲ್ಲೊಂದು ತೀರ್ಮಾನವಾಗಿಬಿಟ್ಟಿರುತ್ತದೆ.
ಎಸ್‌. ನಾಗಶ್ರೀ ಅಜಯ್‌ ಬರೆಯುವ “ಲೋಕ ಏಕಾಂತ” ಅಂಕಣ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ