Advertisement

Month: April 2026

ಧರ್ಮ ಮತ್ತು ಮೃತ್ಯು: ಸುಮಾವೀಣಾ ಸರಣಿ

‘ವಾಲ್ಪರೈ ಅಭಿವೃದ್ಧಿ ತಂದ ದುರಂತ’ ಈ ಬರಹವನ್ನು ಓದಿದಾಗ ದಿಗ್ಭ್ರಾಂತವಾಯಿತು. ಸಿಂಹಬಾಲದ ಕೋತಿಗಳನ್ನು ಮೊದಲುಗೊಂಡಂತೆ ಅನೇಕ ಪಕ್ಷಿ ಪ್ರಭೇದಗಳು ಅಳಿವಿನಂಚಿಗೆ ಸರಿದದ್ದು. ತಮ್ಮದಲ್ಲದ ಜೀವನ ಶೈಲಿಗೆ ಹೊಂದಿಕೊಳ್ಳಹೋಗಿ ಸಿಂಹ ಬಾಲದ ಕೋತಿಗಳು ಶಾಶ್ವತ ಅಂಗವಿಕಲತೆಯನ್ನು ಪಡೆದಿದ್ದವು ಎಂದು ಅವುಗಳ ನರಳಾಟ ನೋಡದೆ ದಯಾಮರಣ ನೀಡುವ ಬಗ್ಗೆ ಮಾತನಾಡಿದರೂ ಸರಕಾರ ಅಳಿವಿನಂಚಿನಲ್ಲಿರುವ ಪ್ರಭೇದ ಎನ್ನುವ ಕಾರಣಕ್ಕೆ. ದಯಾಮೃತ್ಯು ಕೋಟಿ ಗಳಿಸಿದರು ಅಳಿದ ಸಿಂಹಬಾಲದ ಕೋತಿ ಸಂತತಿಯನ್ನು ಗಳಿಸಲಾಗುವುದಿಲ್ಲ ಅಲ್ವೆ! ಈ ದಯಾಮರಣಕ್ಕೂ ಕರ್ನಾಟಕಕ್ಕೂ ಬಿಡದ ನಂಟು ಅನ್ನಿಸುತ್ತದೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಇಪ್ಪತ್ಮೂರನೆಯ ಬರಹ ನಿಮ್ಮ ಓದಿಗೆ

Read More

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ಭಾನುವಾರದ ಕತೆ “ಲೋಕದ ಭಾರ”

ಅರೆ! ಎಲ್ಲರೂ ಅವರವರ ಕೆಲಸಗಳಲ್ಲಿಯೇ ಕಳೆದುಹೋಗಿದ್ದಾರೆ ಇಲ್ಲಿ. ಯಾರಿಗೂ ಹೊರಗಡೆ ಏನು ನಡೆಯುತ್ತಿದೆ ಅನ್ನುವುದರ ಪರಿವೇ ಇಲ್ಲ. ಅದರ ಅಗತ್ಯವೇ ಇಲ್ಲ ಅನ್ನುವಷ್ಟೂ ಕ್ಷುಲ್ಲಕ ಸಂಗತಿಗಳೆ ಅವೆಲ್ಲಾ? ರಸ್ತೆಯ ತುಂಬಾ ಬದುಕಿನ ನಿತ್ಯ ವ್ಯಾಪಾರ ಅದೆಷ್ಟು ಸಹಜ ಅನ್ನುವ ರೀತಿಯಲ್ಲಿ ನಡೆಯುತ್ತಿದೆ. ಪಕ್ಕದಲ್ಲಿ ಬಾಂಬ್ ಬಿದ್ದರೂ ನಮ್ಮ ಮನಗೆ ಬಿದ್ದಿಲ್ಲ ತಾನೇ ಅನ್ನುವ ಹಾಗೆ ತಮ್ಮತಮ್ಮ ಕೆಲಸಗಳಲ್ಲಿ ತೊಡಗುತ್ತಾರಂದ್ರೆ?
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ಭಾನುವಾರದ ಕತೆ “ಲೋಕದ ಭಾರ” ನಿಮ್ಮ ಓದಿಗೆ

Read More

ಮಕ್ಕಳ ಶೋಷಣೆಯ ಪಾಪಿಷ್ಟರು: ಡಾ. ವಿನತೆ ಶರ್ಮಾ ಅಂಕಣ

ಹದಿನೆಂಟು ವರ್ಷವಾದಾಗ ಒಬ್ಬ ವ್ಯಕ್ತಿ ‘adult’ ಎಂದು ಸರ್ಕಾರ ಹೇಳುತ್ತದೆ. ಇವರು ತಮ್ಮ ಜೀವನಕ್ಕೆ ತಾವೇ ಸಂಪೂರ್ಣವಾಗಿ ಜವಾಬ್ದಾರರು. ಪೂರ್ಣಾವಧಿ ಉದ್ಯೋಗದಲ್ಲಿದ್ದು ಮುಂದೆ ತಮ್ಮದೇ ಕುಟುಂಬ ಆರಂಭಿಸಿದಾಗ ಇವರ ಮಕ್ಕಳು ಚೈಲ್ಡ್ ಕೇರ್ ಸೆಂಟರ್‌ಗೆ ಹೋಗುವುದು ಅನಿವಾರ್ಯವಾಗುತ್ತದೆ. ಪಾರ್ಟ್ ಟೈಮ್ ಕೆಲಸ ಮಾಡುತ್ತಾ ಮಕ್ಕಳನ್ನು ಪೋಷಿಸುತ್ತೀವಿ ಎಂದರೆ ಅವರ ಕೆರಿಯರ್‌ಗೆ ದೊಡ್ಡ ಹೊಡೆತ. ಅಲ್ಲದೆ ಒಂದೂವರೆ ಸಂಬಳವಿದ್ದರೆ ಇತ್ತ ಕಡೆ ಕುಟುಂಬದ ಖರ್ಚುಗಳನ್ನು ತೂಗಿಸಲು ಕಷ್ಟ. ಅತ್ತ ಕಡೆ ಸರಕಾರದಿಂದ welfare ಸಹಾಯ ಸಿಗುವುದಿಲ್ಲ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ದುಡ್ಡು ಬರ್ಲಿ ಐಸಾ… ಇನ್ನೂ ಕೊಡಿ ಐಸಾ…!: ಎಚ್. ಗೋಪಾಲಕೃಷ್ಣ ಸರಣಿ

ಅದರ ಮಾರನೇ ದಿವಸ ಹೋಗಿ ಭರಮಪ್ಪನ ಎದುರು ನಿಂತೆ. ಒಂದು ಗಂಟೆ ಕಾದೆ. ನನ್ನ ಕಡೆ ತಿರುಗಿ ನೋಡಲು ಸಹ ಅವರಿಗೆ ಪುರುಸೊತ್ತು ಇಲ್ಲರ. ಐದನೇ ದಿವಸವೂ ಇದೇ ರಿಪೀಟ್ ಆಯ್ತು. ಆರನೇ ದಿವಸ ಭಾನುವಾರ. ತೆಪ್ಪಗೆ ಮನೇಲೆ ಇದ್ದು ನನ್ನ ಅದೃಷ್ಟಕ್ಕೆ ಗಂಟೆ ಗಂಟೆಗೂ ಕೋಲಿನಿಂದ ಬಾರಿಸುತ್ತಾ ಕಳೆದೆ. ಸೋಮವಾರ ಬೆಳಿಗ್ಗೆ ಮತ್ತೆ ಕೆಇಬಿ ಆಫೀಸಿಗೆ ದಂಡ ಯಾತ್ರೆ ಮಾಡಿದೆ. ಜಗನ್ನಾಥ, ಅದೇ ಲೈನ್ ಮ್ಯಾನ್ ದಾರೀಲಿ ಸಿಕ್ಕಿದ. ನನ್ನನ್ನು ನೋಡಿ ಅವನ ಲೂನಾ ನಿಲ್ಲಿಸಿದ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತೈದನೆಯ ಕಂತು

Read More

ಕಾಡು, ಪುಸ್ತಕ, ಅಭಿಮಾನ ಹಾಗೂ ಅಂತರ್ಜಾಲ ಸಮುದಾಯಗಳ ಆಹ್ಲಾದಕರ ಲೋಕ: ಎಲ್.ಜಿ.ಮೀರಾ ಅಂಕಣ

ಮನುಷ್ಯ ಎಂಬ ಜೀವಿ ಈ ಭೂಮಿಯ ಮೇಲೆ ವಿಕಾಸಗೊಂಡಾಗಿನಿಂದ ಒಂದಲ್ಲ ಒಂದು ರೀತಿಯ ಸಮುದಾಯಗಳನ್ನು ಕಟ್ಟಿಕೊಂಡು ಬದುಕುತ್ತಿದ್ದಾನೆ. ಎಷ್ಟೇ ಜಗಳ, ಭಿನ್ನಾಭಿಪ್ರಾಯ, ಇರಿಸುಮುರಿಸು, ವೈಯಕ್ತಿಕ ಇಚ್ಛೆಗಳ ಬಲ್ಮೆ ಇದ್ದರೂ ನೆರೆಹೊರೆಯೋ, ವೃತ್ತಿ ಸಮುದಾಯವೋ, ಸ್ನೇಹಿತರ ಬಳಗವೋ, ನೆಂಟರಿಷ್ಟರ ಜೊತೆಗಾರಿಕೆಯೋ, ವಠಾರವೋ, ಅನೇಕ ಮನೆಘಟಕಗಳಿರುವ ಸಮುಚ್ಚಯಗಳೋ(ಅಪಾರ್ಟ್ಮೆಂಟ್)… ಒಟ್ಟಿನಲ್ಲಿ ಮನುಷ್ಯರಿಗೆ ಮನುಷ್ಯರ ಸಂಗ-ಸಹವಾಸ ಬೇಕು ಅಷ್ಟೆ. ಇದನ್ನು ಹೆಚ್ಚು ವಿವರಿಸುವ ಅಗತ್ಯ ಇಲ್ಲ ಅನ್ನಿಸುತ್ತೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಇಪ್ಪತ್ನಾಲ್ಕನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ