ಮಧು ವೈ.ಎನ್. ಹೊಸ ಕಾದಂಬರಿ “ಇಂತಿ, ಪೂರ್ವಿ”ಯ ಕೆಲವು ಪುಟಗಳು
ಆ ಪದ ಕಿವಿಗೆ ಬೀಳುತ್ತಿದ್ದಂತೆ ಸೈಫೈ ಸಿನಿಮಾಗಳಲ್ಲಿ ರೋಬೋಗಳು ಬ್ಯಾಟರಿ ಡೌನಾಗಿ ತಾನಾಗೆ ಕುಸಿದಂತೆ ಶರತ್ ಕುಸಿದ. ಅವಳು ಹಂಗೇ, ಹಿಂದೆ ಮುಂದೆ ನೋಡದೇ ಅಂದುಬಿಡ್ತಿದ್ದಳು. ಜ್ಯಾಮಿಟ್ರಿ ಬಾಕ್ಸ್ ಮುಚ್ಚಳವನ್ನು ಹಲ್ಲುಗಳನ್ನೆಟ್ಟಿ ತೆಗೆಯುತ್ತಿದ್ದಳು. ಅಸೆಂಬ್ಲಿನಲ್ಲಿ ಆಕಳಿಸುವಾಗ ತುಟಿ ಹರಿಯುವಷ್ಟು ಅಗಲ ಬಾಯಿ ತೆರೆಯುತ್ತಿದ್ದಳು. ಕಿರುನಾಲಗೆಯಿಂದ ಎಂಜಲನ್ನು ಮೋಟಾರಿನಂತೆ ಹಾರಿಸುತ್ತಿದ್ದಳು. ಇಡೀ ಕ್ಲಾಸಿಗೆ ರಾಣಿ, ರೌಡಿ ಎರಡೂ ಆಗಿದ್ದಳು. ಶರತ್‌ಗೆ ಆಳದಲ್ಲಿ ಅವಳೆಂದರೆ ಭಯ. ತಾನು ಸುಮ್ಮನಿದ್ದರೂ ಆಗಿತ್ತು; ಇಂಥಾ ಬಜಾರ್‌ಗಿತ್ತಿಯನ್ನು ಕೆಣಕಿ ʼಕಳ್ಳʼ ಅನ್ನಿಸ್ಕೊಳಂಗಾಯ್ತಲ್ಲ ಎಂದು ಕೈಹಿಸುಕಿಕೊಂಡ.
ಮಧು ವೈ.ಎನ್. ಹೊಸ ಕಾದಂಬರಿ “ಇಂತಿ, ಪೂರ್ವಿ”ಯ ಒಂದು ಅಧ್ಯಾಯ ನಿಮ್ಮ ಓದಿಗೆ
ತಾಂತ್ರಿಕ ಕವಿಯ ಮಾಂತ್ರಿಕ ಕವಿತೆಗಳು….: ದೇವರಾಜ್ ಹುಣಸಿಕಟ್ಟಿ ಬರಹ
ಪ್ರೇಮ, ಪ್ರೇಮ ವೈಫಲ್ಯದ ಕುರಿತು ಕವಿತೆಗಳು ನಿಮಗೆ ಈ ಸಂಕಲದಲ್ಲಿ ಢಾಳವಾಗಿಯೇ ಸಿಗುತ್ತವೆ. ಉದಾಹರಣೆಗೆ “ಕಾಳಜಿ”, ಕಟ್ಟಳೆಯೊಳಗೆ “ಗೋರಿ ಅಲ್ಲ ರೆಂಜಿ ಗಿಡ” ಹೀಗೆ ಅನೇಕ ಕವಿತೆಗಳು ನಿಮ್ಮ ವೈಯುಕ್ತಿಕ ಪ್ರೇಮ, ವೈಫಲ್ಯದ ನೋವು ಸುಖ ಎರಡಕ್ಕೂ ಜೊತೆಯಾಗಿ ರಮಿಸುತ್ತವೆ. ಹೀಗೆ ಕವಿಯೊಬ್ಬ ಆಪ್ತವಾಗುತ್ತಲೇ ಹೋಗುತ್ತಾನೆ. ಇಲ್ಲಿ ವೈನು, ವೇಶ್ಯೆ, ಮೆಟ್ಟು, ಪದ, ಕವಿ, ಕವಿತೆ ಹೀಗೆ ಅನೇಕ ವಿಷಯಗಳ ಕವಿತೆಗಳು ನಿಮ್ಮನ್ನ ಮಾಂತ್ರಿಕ ಸ್ಪರ್ಶದಿಂದ ಎದೆ ನೆಲವ ತೇವಗೊಳಿಸದೇ ಇರುವುದಿಲ್ಲ.
ಸದಾಶಿವ ಸೊರಟೂರು ಅವರ “ಗಾಯಗೊಂಡ ಸಾಲುಗಳು” ಕವನ ಸಂಕಲನದ ಕುರಿತು ದೇವರಾಜ್ ಹುಣಸಿಕಟ್ಟಿ ಬರಹ, ನಿಮ್ಮ ಓದಿಗೆ
ಅಮ್ಮಮ್ಮನಾದ ಹೊತ್ತು…: ಡಾ. ಎಚ್.ಎಸ್. ಅನುಪಮಾ ಮಾತುಗಳು
ಅಲ್ಲಿಂದ ಇಲ್ಲಿಯವರೆಗೆ ಅನುದಿನ ಪುಟ್ಟನ ಸುದ್ದಿ, ನೆನಪುಗಳಿಂದಲೇ ಬೆಳಕು ಹರಿಯುತ್ತದೆ, ಕತ್ತಲಾಗುತ್ತದೆ. ಅವ ಮಗುಚಿದ, ಕೂತ, ತೊದಲು ಮಾತನಾಡಿದ, ಎದ್ದ, ನಿಂತ ಎನ್ನುವುದೆಲ್ಲ ನಮ್ಮದೇ ಸಾಧನೆ ಎಂಬಂತಾಗಿದೆ. ಹಲ್ಲು ಕಡಿದು ಮುದ್ದು ಮಾಡುತ್ತ ಮಾಡುತ್ತ ಮುಂದಿನ ಹಲ್ಲು ಸವೆದೇ ಹೋದಂತಿದೆ! ಸಣ್ಣ ಅವಕಾಶ, ಪುರುಸೊತ್ತು ಸಿಕ್ಕರೂ ಬೆಂಗಳೂರಿಗೆ ಹೋಗಿ ಪುಟ್ಟನ ಕಂಡುಬರುವಾ ಅನಿಸುತ್ತದೆ. ಈ ಅಮ್ಮ ತಮ್ಮನ್ನಿಷ್ಟು ಪ್ರೀತಿಸಿದ್ದಳೋ ಇಲ್ಲವೋ ಎಂದು ನಮ್ಮ ಮಕ್ಕಳು ಶಂಕಿಸಬಹುದಾದಷ್ಟು ಬದುಕು ಸೂರ್ಯಮಯವಾಗಿದೆ!
ಡಾ. ಎಚ್.ಎಸ್. ಅನುಪಮಾ ಕವನ ಸಂಕಲನ “ಅಮ್ಮಮ್ಮನ ಕವಿತೆಗಳು” ಕೃತಿಯ ಕುರಿತು ಅವರ ಬರಹ ನಿಮ್ಮ ಓದಿಗೆ
ಕಾಣದ್ದು ಕಾಣಿಸಿದ್ದು…!: ಸುಭಾಷ್ ರಾಜಮಾನೆ ವಿಮರ್ಶಾ ಕೃತಿಯ ಕುರಿತು ಕಲ್ಲೇಶ್ ಕುಂಬಾರ್ ಬರಹ
ಜಗತ್ತಿನ ಬಹುಮುಖ್ಯ ಕೃತಿಗಳನ್ನು ಗುರುತಿಸುವ, ಪರಿಚಯಿಸುವ, ಆ ಮೂಲಕ ಓದುಗರಿಗೆ ದಾಟಿಸುವಂಥ ಪ್ರಾಮಾಣಿಕ ಕೆಲಸವನ್ನು ಸುಭಾಷ್ ರಾಜಮಾನೆ ಅವರು ಮಾಡುತ್ತಿದ್ದಾರೆ. ಅವರ ಈ ಬರಹಗಳನ್ನು ಓದುವುದರ ಮೂಲಕ ಓದುಗನು ಸ್ವಯಂ ಮರಳಿ ಮೂಲ ಕೃತಿಗಳನ್ನು ಓದುವುದಕ್ಕೆ ಉತ್ಸುಕನಾಗುತ್ತಾನೆ ಎಂಬುದರಲ್ಲಿ ಸಂಶಯವೇ ಇಲ್ಲ! ಇನ್ನೂ ಹೇಳಬೇಕೆಂದರೆ, ಕೃತಿಕಾರ ಮರೆಯಾಗಿ ಕೃತಿಯೇ ಮುಖ್ಯವಾಗುವುದು, ಹಾಗೂ ಆ ಕೃತಿಯ ಮೂಲಕವೇ ಕೃತಿಕಾರ ಗುರುತಿಸಿಕೊಳ್ಳುವಂತಾಗುವುದು ಒಂದು ಕ್ರಿಯೆ. ಅಂಥ ಲೇಖಕ ಮತ್ತು ಆ ಲೇಖಕನ ಕೃತಿಗಳು ಶಾಶ್ವತವಾಗಿ ನಿಲ್ಲುತ್ತವೆ! ಹಾಗೆ ನಿಲ್ಲಬಹುದಾದ ಲೇಖಕರ ಕೃತಿಗಳನ್ನು ಓದುಗರಿಗೆ ಸುಭಾಷ್ ರಾಜಮಾನೆ ಅವರು ಪರಿಚಯಿಸಿದ್ದಾರೆ.
ಸುಭಾಷ್ ರಾಜಮಾನೆ ವಿಮರ್ಶಾ ಕೃತಿ “ಕಂಡದ್ದು ಕಾಣದ್ದು” ಕುರಿತು ಕಲ್ಲೇಶ್ ಕುಂಬಾರ್ ಬರಹ
ರೂಪಿಸಿದ ಮುಂಬೈ, ರೂಪುಗೊಂಡ ಮುಂಬೈ: ಕೆ. ಸತ್ಯನಾರಾಯಣ ಕೃತಿಯ ಪುಟಗಳು
ನವರೋಜಿ ಶಾಲೆಗೆ ಸೇರಿದ ಕಾಲಾವಧಿ ಎಂತಹುದೆಂದರೆ, ಮುಂಬೈ, ನಗರವಾಗಿ, ಪ್ರಾಂತ್ಯವಾಗಿ, ಶಿಕ್ಷಣ ಕ್ಷೇತ್ರದಲ್ಲಿ ನಾನಾ ರೀತಿಯ ಪ್ರಯೋಗ, ಪರಿವರ್ತನೆಗಳನ್ನು ಕಾಣುತ್ತಿದ್ದ ದಿನಗಳವು. ನೂರಾರು ಕನಸಿಗರು, ಪ್ರಯೋಗಶೀಲರು, ವಿಶಾಲ ಹೃದಯದ ಪಾಶ್ಚಿಮಾತ್ಯರು, ಎಲ್ಲರಿಗೂ ಶಿಕ್ಷಣದ ಬಗ್ಗೆ ಆಸಕ್ತಿ. ಭಾರತೀಯರನ್ನು ಹೊಸ ವಿಚಾರಗಳಿಗೆ, ಕಲಿಯುವ ಪದ್ಧತಿಗಳಿಗೆ ತೆರೆಯುವ ಹುಮ್ಮಸ್ಸು. ನವರೋಜಿ ಈ ಎಲ್ಲ ಕನಸು, ಪ್ರಯೋಗಗಳ ಫಲಾನುಭವಿ. ಮೊದಲನೆಯ ತಲೆಮಾರಿನ ಫಲಾನುಭವಿ.
ಕೆ. ಸತ್ಯನಾರಾಯಣ ಹೊಸ ಕೃತಿ “ದಾದಾಭಾಯಿ ನವರೋಜಿ” ಕೆಲವು ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಇಂದು ನವರೋಜಿ ಅವರ ೨೦೦ನೇ ಹುಟ್ಟುಹಬ್ಬ, ಅದರ ಪ್ರಯುಕ್ತ ಈ ಕೃತಿಯ ಒಂದು ಬರಹ ನಿಮ್ಮ ಓದಿಗೆ
ಮಹಾದೇವಿಯಕ್ಕನೆಂಬ ಬೆಳಕು…: ಸುಭದ್ರಾ ಹೆಗಡೆ ಬರಹ
ಅಕ್ಕನ ವಚನಗಳನ್ನು ಉದಾರಿಸುತ್ತ, ಆ ಘಟನೆಗಳಿಗೆ ಪೂರಕವಾಗುವಂತೆ ಕತೆಗಳನ್ನು ಹೇಳುವುದು ಈ ಕೃತಿಯ ಮತ್ತೊಂದು ವಿಶೇಷತೆ. ರಾಜ ಮನೆತನದ ರೀತಿ-ರಿವಾಜುಗಳನ್ನು ಸ್ವತಂತ್ರ ಮನೋಭಾವದ ಅಕ್ಕನಿಗೆ ಸಹಿಸುವುದು ಸಹಜವಾಗಿಯೇ ಕಷ್ಟವಾಗಿ, ಆ ರಾಜ ವೈಭೋಗವನ್ನೆಲ್ಲ ಧಿಕ್ಕರಿಸಿ ಹೊರ ನಡೆಯುತ್ತಾಳೆ. ಅಲ್ಲಿಂದ ಅಕ್ಕನ ಅಪರಿಮಿತ ಹುಡುಕಾಟ ನಿರಂತರವಾಗಿ ಸಾಗುತ್ತದೆ. ಒಂಟಿ ಹೆಣ್ಣು ಅರೆವಸ್ತ್ರ ಧರಿಸಿ ನಡೆವ ದಾರಿಯಲ್ಲಿ ಬರುವ ಅನೇಕ ಸಂಕಷ್ಟಗಳನ್ನು ಮೆಟ್ಟಿ ನಿಲ್ಲುವ ಧೀರೋದ್ಧಾತ ಮನಸ್ಸುಳ್ಳ ಛಲಗಾತಿ ಅಕ್ಕನ ಮೇರು ವ್ಯಕ್ತಿತ್ವವನ್ನು ಅದ್ಭುತವಾಗಿ ಕೆತ್ತಿದ್ದಾರೆ ಲೇಖಕಿಯವರು. ಅಕ್ಕನ ವ್ಯಕ್ತಿತ್ವದ ಅನಾವರಣವಾದ ರೀತಿ ಅಸದೃಶ್ಯವಾಗಿದೆ.
ಡಾ. ಎಚ್.ಎಸ್. ಅನುಪಮಾ ಅವರ “ಬೆಳಗಿನೊಳಗು ಮಹಾದೇವಿಯಕ್ಕ” ಕಾದಂಬರಿಯ ಕುರಿತು ಸುಭದ್ರಾ ಹೆಗಡೆ ಬರಹ
ಕನಸಾಗೇ ಉಳಿದ ಕನಸು: ಫಾತಿಮಾ ರಲಿಯಾ ಅನುಭವ ಕಥನದ ಕೆಲವು ಪುಟಗಳು
ನನ್ನ ಮಾತಲ್ಲಿ ಆತ್ಮವಿಶ್ವಾಸ, ಸತ್ಯ ಇಲ್ಲ ಅನ್ನುವುದು ತುಂಬಾ ಸ್ಪಷ್ಟವಾಗಿ ನನಗೇ ಗೊತ್ತಾಗುತ್ತಿತ್ತು, ಬಹುಶಃ ಅಮ್ಮನಿಗೂ ಗೊತ್ತಾಗಿದೆ. ನಾನು ಮಾತು ಮುಂದುವರೆಸಲಿಲ್ಲ, ಅಮ್ಮನೂ ಮುಂದುವರೆಸಲಿಲ್ಲ. ಇಬ್ಬರ ಮನದೊಳಗೂ ದುಃಖವೊಂದು ಹೊಯ್ದಾಡುತ್ತಿತ್ತು. ಅಲ್ಲಿ ನೆಲೆ ನಿಂತಿದ್ದ ಮೌನ ನಮ್ಮಬ್ಬರಲ್ಲೂ ಉಸಿರುಗಟ್ಟಿಸುವ ಭಾವ ಹುಟ್ಟಿಸುತ್ತಿತ್ತು. ಅಮ್ಮನ ಕಣ್ಣು ತುಂಬಿಕೊಳ್ಳುತ್ತಿತ್ತು. ನಾನು ತೀರಾ ನಿರ್ಭಾವುಕಳಂತೆ ಅಲ್ಲಿಂದ ಎದ್ದು ಹೋದೆ, ನನಗೆ ಹಾಗೆ ಹೋಗದೆ ಬೇರೆ ದಾರಿಯೇ ಇರಲಿಲ್ಲ. ಯಾಕೆಂದರೆ ಇನ್ನೆರಡೇ ಎರಡು ನಿಮಿಷ ನಾನಲ್ಲಿ ನಿಂತಿದ್ದರೂ ಅಳು ಭೋರ್ಗರೆಯುತ್ತಿತ್ತು.
ಫಾತಿಮಾ ರಲಿಯಾ ಅನುಭವ ಕಥನ “ಕೀಮೋ” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ
ನೇತಾಜಿ ಸುಭಾಷರ ಲೋಕದಲ್ಲಿ ನಮ್ಮದೊಂದು ಹೆಜ್ಜೆ: ನಾರಾಯಣ ಯಾಜಿ ಬರಹ
ರಾಮಾಯಣವನ್ನು ಹೊಸ ಇತಿಹಾಸದೊಂದಿಗೆ ನೇತಾಜಿ ಸುಭಾಶ್‌ಚಂದ್ರ ಬೋಸ್ ಅವರು ಇಂಗ್ಲೀಷಿನಲ್ಲಿ ಬರೆದ ಆತ್ಮಕಥೆಯನ್ನು “ಭಾರತೀಯ ಹೋರಾಟ” ಎನ್ನುವ ಹೆಸರಿನಲ್ಲಿ ಹೊರತಂದಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ, ಗಾಂಧಿ ಒಂದು ಕಡೆ, ಅದಕ್ಕೆ ಪ್ರತಿಯಾಗಿ ನೇತಾಜಿ ಸುಭಾಶ್ ಬಾಬು ಎನ್ನುವ ಸುದ್ದಿ ಯಾವತ್ತಿನಿಂದಲೂ ಕೇಳುತ್ತಲೇ ಇದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ 1915 ರಿಂದ 1921ರ ತನಕ ಮಹತ್ವದ ತಿರುವು ಕಂಡ ದಿನಗಳು.
ಪ್ರೊ. ಕೆ.ಇ. ರಾಧಾಕೃಷ್ಣ ಅನುವಾದಿಸಿರುವ ಸುಭಾಶ್‌ಚಂದ್ರ ಬೋಸರ ಕೃತಿ “ಭಾರತೀಯ ಹೋರಾಟ”ದ ಕುರಿತು ನಾರಾಯಣ ಯಾಜಿ ಬರಹ, ನಿಮ್ಮ ಓದಿಗೆ
ಮುದಿರಾಜ್ ಬಾಣದ್ ಕಾದಂಬರಿ “ಸಿಕ್ಕು” ಕೃತಿಯ ಆಯ್ದ ಭಾಗ
ಅಡಿಗೆಮನೆಯಲ್ಲಿ ಇದ್ದ ಕಾಶಿಬಾಯಿ ಒಮ್ಮೆ ಸೂಕ್ಷ್ಮವಾಗಿ ಲಂಕ್ಯಾನನ್ನು ದಿಟ್ಟಿಸಿದಳು. ಆ ನೋಟಕ್ಕೆ ವಶೀಕರಣಗೊಂಡವನಂತೆ ಎದ್ದವನೇ ಮಗ ಹಾಗೂ ಮಗಳನ್ನು ಎಳೆದೆಳೆದು ಸಿಕ್ಕಸಿಕ್ಕಲ್ಲಿ ಮೈಮೇಲೆ ದೆವ್ವ ಬಂದವನಂತೆ ಬಡಿಯತೊಡಗಿದ. ಆ ಇಬ್ಬರೂ ಮಕ್ಕಳು ಬೆನ್ನನ್ನು ಸವರಿಕೊಳ್ಳುತ್ತ ತನ್ನ ತಂದೆ ಯಾಕೆ ಹೊಡೆಯುತ್ತಿದ್ದಾನೆ ಅನ್ನುವ ಅರಿವಿಲ್ಲದೆ ಅಳುತ್ತ ದಿಕ್ಕಿಗೊಂದು ಓಡತೊಡಗಿದರೆ ಹಿಂದೆ ಹಿಂದೆ ಹೋಗಿ ಮನಸ್ಸೋ ಇಚ್ಛೆ ಬೈಯುತ್ತ ಹೊಡೆಯತೊಡಗಿದ. ತಮ್ಮ ಅಜ್ಜಿಯಾಗಲಿ ಇಲ್ಲ ತಮ್ಮ ತಾಯಿಯಾಗಲಿ ಆ ಮಕ್ಕಳ ಸಹಾಯಕ್ಕೆ ಬರದೆ ಸುಮ್ಮನೆ ತಮ್ಮ ಪಾಡಿಗೆ ತಾವಿದ್ದದು, ತಂದೆಯ ಕೈಯಲ್ಲಿ ಅನಾಮತ್ತಾಗಿ ಸಿಕ್ಕಿ ಹೊಡೆಸಿಕೊಂಡಿದ್ದು ನೆನೆಸಿಕೊಂಡು ದುಃಖಿಸುತ್ತ ಮತ್ತಷ್ಟೂ ಅಳತೊಡಗಿದವು.
ಮುದಿರಾಜ್ ಬಾಣದ್ ಕಾದಂಬರಿ “ಸಿಕ್ಕು” ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ









