Advertisement
ಅಂಬಮ್ಮ ಪ್ರತಾಪ್ ಸಿಂಗ್ ಮಾನ್ವಿ ಬರೆದ ಗಜಲ್

ಅಂಬಮ್ಮ ಪ್ರತಾಪ್ ಸಿಂಗ್ ಮಾನ್ವಿ ಬರೆದ ಗಜಲ್

ಗಜಲ್

ನಿನ್ನ ಬರುವಿಕೆಗಾಗಿ ಶಬರಿಯಂತೆ ಕಾಯುತಿರುವೆ
ನನ್ನ ದುಃಖದ ಕಣ್ಣೀರು ನದಿಯಂತೆ ಹರಿಸುತಿರುವೆ

ಕಾರಣ ಹೇಳದೆ ಮುನಿಸನು ತೋರುತ್ತಿರುವೆ ಏಕೆ
ದುಗುಡದಿ ಮುಗುಳ್ನಗೆ ಸೀತೆಯಂತೆ ಬೀರುತಿರುವೆ

ಕೃಷ್ಣನ ಕೊಳಲಿನಂತೆ ಸವಿನುಡಿ ಮೋಡಿ ಮಾಡಿಹುದು
ನಿನಗಾಗಿ ವಿರಹ ಲೋಕದಿ ರಾಧೆಯಂತೆ ದುಃಖಿಸುತಿರುವೆ

ಮೀನಿನ ಹೆಜ್ಜೆ ಹೆಣ್ಣಿನ ಮನದಂತೆ ನಲ್ಲನ ಅರಿತವರಿಲ್ಲ
ನಿನ್ನೊಲುಮೆ ಕನಸಲಿ ಮಹಾದೇವಿಯಂತೆ ಕನವರಿಸುತಿರುವೆ

ವನಿತಾಳ ಪ್ರೀತಿಯ ಒರತೆ ಬತ್ತುವುದಿಲ್ಲ ಕೊನೆಯವರೆಗೆ
ಮನವೆಂಬ ಆಗಸದಿ ಧೃವ ತಾರೆಯಂತೆ ಮಿನುಗುತಿರುವೆ

ಅಂಬಮ್ಮ ಪ್ರತಾಪ್ ಸಿಂಗ್ ಮಾನ್ವಿ ರಾಯಚೂರಿನ ಮಾನ್ವಿಯವರು
ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲ್ ಮರ್ಚಡ್ ತಾಲೂಕು ಮಾನ್ವಿಯಲ್ಲಿ ಸಹ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮನಸ್ಸು (ಕವನ ಸಂಕಲನ), ವಿಚಾರ ಧಾರೆ (ಪ್ರಬಂಧ ಸಂಕಲನ), ಜೀವನ ಪಥ (ಲೇಖನಗಳ ಸಂಕಲನ), ಮೌನದೊಡಲ ಮಾತು (ಗಜಲ್ ಸಂಕಲನ) ಪ್ರಕಟಿತ ಕೃತಿಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ