Advertisement

ಕೆ. ಸತ್ಯನಾರಾಯಣ

ನೀಲಿ ಮಿಂಚುಳ್ಳಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಬೇಟೆ ಕಂಡೊಡನೆ, ಪುಳಕ್ಕನೆ ನೀರಿಗೆ ಧುಮುಕಿ, ಮೀನನ್ನು ಕಚ್ಚಿಕೊಂಡು ಪುಟಿಯುತ್ತದೆ; ನೀರಿನ ಅಡಿಯಲ್ಲಿ ರೆಕ್ಕೆಗಳನ್ನು ತೆರೆದುಕೊಂಡು, ಕಣ್ಣುಗಳನ್ನು ತೆರೆದುಕೊಂಡೇ ಬೇಟೆಯನ್ನು ಹಿಡಿಯುತ್ತವೆ. ಬೇಟೆಯನ್ನು ಹಿಡಿದು ನೇರವಾಗಿ ಕುಳಿತಲ್ಲಿಗೇ ಬಂದು ಮೀನಿನ ಬಾಲವನ್ನು ಹಿಡಿದು, ಅದರ ತಲೆಯನ್ನು ಮರಕ್ಕೆ ಹತ್ತಾರು ಬಾರಿ ಹೊಡೆದು ಕೊಲ್ಲುತ್ತದೆ. ನಂತರ ಮೀನಿನ ತಲೆ ಮುಂದಾಗಿ ನುಂಗುತ್ತದೆ! ಅಲ್ಲದೆ, ಕಪ್ಪೆ, ಅದರ ಗೊದಮೊಟ್ಟೆ, ಇತರ ಜಲಚರ ಕೀಟಗಳಾದ ಡ್ರಾಗನ್‌ಫ್ಲೈ ಲಾರ್ವಾಗಳು ಮತ್ತು ನೀರಿನ ಜೀರುಂಡೆಗಳು ಮತ್ತು ಚಳಿಗಾಲದಲ್ಲಿ ಏಡಿಗಳನ್ನು ಸಹ ಹಿಡಿದು ತಿನ್ನುತ್ತದೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ನೀಲಿ ಮಿಂಚುಳ್ಳಿ”ಯ ಕುರಿತ ಬರಹ ಇಲ್ಲಿದೆ

Read More

ನೀಲಿ ಕಲ್ಲಂಚೆ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ನೀಲಿ ಕಲ್ಲಂಚೆಗಳಿಗೆ ವರ್ಷಪೂರ್ತಿ ಆಹಾರದ ಕೊರತೆಯೇ ಇಲ್ಲವಾದ್ದರಿಂದ, ಪ್ರಜನನ ಋತು ಎಂದೇನಿಲ್ಲ. ಮರದ ಮೇಲೆ, ಅಥವಾ ಸಂದುಗೊಂದುಗಳಲ್ಲಿ, ಕಡ್ಡಿಗಳಿಂದ ತಯಾರಾದ ಹರುಕು-ಮುರುಕು ಅಟ್ಟಣಿಗೆ ಗೂಡನ್ನು ಕಟ್ಟುತ್ತವೆ. ಹೆಣ್ಣು ಹಕ್ಕಿ ಸಾಮಾನ್ಯವಾಗಿ ಎರಡು ಬಿಳಿ ಬಣ್ಣದ ಮೊಟ್ಟೆಗಳನ್ನಿಡುತ್ತದೆ. ಗಂಡು-ಹೆಣ್ಣು, ಎರಡೂ ಹಕ್ಕಿಗಳು ಕಾವು ಕೊಟ್ಟು, ಗುಟುಕು ನೀಡಿ, ಮರಿಗಳನ್ನು ಪೋಷಿಸುತ್ತವೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ನೀಲಿ ಕಲ್ಲಂಚೆ”ಯ ಕುರಿತ ಬರಹ ಇಲ್ಲಿದೆ

Read More

ನವರಂಗ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಮೂಲತಃ ಹಿಮಾಲಯದ ವಾಸಿಗಳಾದ ಈ ಹಕ್ಕಿಗಳು ಹಿಮಾಲಯದಲ್ಲೇ ಅಲ್ಲದೆ, ಉತ್ತರದಲ್ಲಿ ಪಾಕಿಸ್ತಾನದಿಂದ ಹಿಡಿದು ನೇಪಾಳ ಮತ್ತು ಈಶಾನ್ಯ ಭಾರತದಲ್ಲಿ ಸಿಕ್ಕಿಂವರೆಗೂ ವ್ಯಾಪಿಸಿವೆ. ಚಳಿಗಾಲದಲ್ಲಿ ದಕ್ಷಿಣ ಭಾರತ ಮತ್ತು ಶ್ರೀಲಂಕಾದವರೆಗೂ ವಲಸೆ ಹೋಗುತ್ತವೆ. ಅಲ್ಲದೆ, ನವರಂಗ ಹಕ್ಕಿಗಳು ಕೆಲವೊಮ್ಮೆ ಮಧ್ಯ ಭಾರತ ಮತ್ತು ಪಶ್ಚಿಮ ಘಟ್ಟಗಳಲ್ಲಿಯೂ ಸಂತಾನೋತ್ಪತ್ತಿ ನಡೆಸುತ್ತವೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ನವರಂಗ”ಯ ಕುರಿತ ಬರಹ ಇಲ್ಲಿದೆ

Read More

ಗೋವಕ್ಕಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ನೂರಾರು ಹಕ್ಕಿಗಳು ಒಟ್ಟಿಗೆ ಒಂದೇ ಮರದ ಮೇಲೆ ವಿಶ್ರಾಂತಿ ಪಡೆಯುತ್ತವೆ; ತಿಂಗಳ ಬೆಳಕಿನಲ್ಲಿ ಇದು ನಕ್ಷತ್ರ ಸಮೂಹದಂತೆ ಕಾಣುತ್ತದೆ! ನೀರಿರುವೆಡೆ, ಮರದ ಮೇಲೆ, ಇದೇ ಕುಟುಂಬಕ್ಕೆ ಸೇರಿದ ಬಕ, ನೀರುಕಾಗೆ ಮತ್ತು ವಿವಿಧ ಪ್ರಭೇದದ ಪಕ್ಷಿಗಳು ಒಟ್ಟಿಗೆ ಸೇರಿ, ಕಡ್ಡಿಗಳಿಂದ ತಯಾರಾದ ಅಟ್ಟಣಿಗೆ ಗೂಡುಗಳ ಕಾಲೊನಿ ಕಟ್ಟಿಕೊಳ್ಳುತ್ತವೆ. ಪ್ರಜನನ ಸಮಯದಲ್ಲಿ, ಸಮೂಹ ಗೂಡಿನಲ್ಲಿದ್ದುಕೊಂಡು ‘ರಕ್ ರಕ್’ ಎಂಬ ಶಬ್ದ ಮಾಡುವುದನ್ನು ಹೊರತು ಪಡಿಸಿದರೆ, ಗೋವಕ್ಕಿಗಳು ವರ್ಷದ ಹೆಚ್ಚಿನ ವೇಳೆ ನಿಶ್ಶಬ್ದವಾಗಿಯೇ ಕಾಲ ಕಳೆಯುತ್ತವೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ಗೋವಕ್ಕಿ”ಯ ಕುರಿತ ಬರಹ ಇಲ್ಲಿದೆ

Read More

ಗುಲಗಂಜಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕೀಟಗಳೇ ಗುಲಗಂಜಿ ಪಕ್ಷಿಯ ಮುಖ್ಯ ಆಹಾರ. ಕುಳಿತಲ್ಲಿಂದಲೇ ಹೊಂಚು ಹಾಕಿ ಹಾರುತ್ತಿರುವ ಕೀಟವನ್ನು ಹಿಡಿದು, ಅಥವಾ ಕುಳಿತ ಮರಗಳಲ್ಲಿ ವಾಸಿಸುವ ಕೀಟಗಳನ್ನು ಹಿಡಿದು, ಕುಳಿತ ಕೊಂಬೆಗೆ ಬಡಿದು, ಕೊಂದು ತಿನ್ನುತ್ತವೆ. ವಿವಿಧ ಕೀಟಗಳು, ಕೀಟಗಳ ಪೊರೆಹುಳುಗಳು ಮತ್ತು ಮರಿಹುಳುಗಳು, ಪತಂಗಗಳು, ಜೀರುಂಡೆಗಳು, ಮಿಡತೆಗಳು, ಸಿಕಾಡಾಗಳು, ಕ್ರಿಕೆಟ್‌ಗಳು ಮತ್ತು ಮಿಡತೆ ಅವುಗಳ ಆಹಾರದ ಪಟ್ಟಿಯಲ್ಲಿವೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ಗುಲಗಂಜಿ” ಹಕ್ಕಿಯ ಕುರಿತ ಬರಹ ಇಲ್ಲಿದೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ