Advertisement
ಗುಲಗಂಜಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಗುಲಗಂಜಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕೀಟಗಳೇ ಗುಲಗಂಜಿ ಪಕ್ಷಿಯ ಮುಖ್ಯ ಆಹಾರ. ಕುಳಿತಲ್ಲಿಂದಲೇ ಹೊಂಚು ಹಾಕಿ ಹಾರುತ್ತಿರುವ ಕೀಟವನ್ನು ಹಿಡಿದು, ಅಥವಾ ಕುಳಿತ ಮರಗಳಲ್ಲಿ ವಾಸಿಸುವ ಕೀಟಗಳನ್ನು ಹಿಡಿದು, ಕುಳಿತ ಕೊಂಬೆಗೆ ಬಡಿದು, ಕೊಂದು ತಿನ್ನುತ್ತವೆ. ವಿವಿಧ ಕೀಟಗಳು, ಕೀಟಗಳ ಪೊರೆಹುಳುಗಳು ಮತ್ತು ಮರಿಹುಳುಗಳು, ಪತಂಗಗಳು, ಜೀರುಂಡೆಗಳು, ಮಿಡತೆಗಳು, ಸಿಕಾಡಾಗಳು, ಕ್ರಿಕೆಟ್‌ಗಳು ಮತ್ತು ಮಿಡತೆ ಅವುಗಳ ಆಹಾರದ ಪಟ್ಟಿಯಲ್ಲಿವೆ.
ಡಾ.
ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ಗುಲಗಂಜಿ” ಹಕ್ಕಿಯ ಕುರಿತ ಬರಹ ಇಲ್ಲಿದೆ

ಸ್ನೇಹಿತರೆ, ಬಣ್ಣದ ಬಾನಾಡಿಗಳು ಸರಣಿ ಕಾರ್ಯಕ್ರಮದಲ್ಲಿ ನಾವು ಇಂದು ತಿಳಿದುಕೊಳ್ಳಲು ಹೊರಟಿರುವ ಹಕ್ಕಿ, ಗುಲಗಂಜಿ. ಇದು ಕ್ಯಾಂಪಿಫ್ಯಾಜಿಡೆ ಕುಟುಂಬಕ್ಕೆ ಸೇರಿದ ಸಣ್ಣ ಗಾತ್ರದ ಪಕ್ಷಿ. ಇಂಗ್ಲೀಷಿನಲ್ಲಿ  Small Minivet, ಸ್ಮಾಲ್ ಮಿನಿವೆಟ್ ಎಂದೂ, ವೈಜ್ಞಾನಿಕವಾಗಿ ಪೆರಿಕ್ರೋಕೋಟಸ್ ಸಿನ್ನಾಮೋಮಿಯಸ್ ಎಂದೂ ಕರೆಯುತ್ತಾರೆ.

ಜೀವನದ ಹೆಚ್ಚು ಸಮಯ ಮರಗಳಲ್ಲಿ, ಎಲೆಗಳ ನಡುವೆ ವಾಸಿಸುವ ಹಕ್ಕಿಗಳು. ಗಟ್ಟಿಮುಟ್ಟಾದ, ತುಸು ಕೊಕ್ಕೆಯಂತೆ ಬಾಗಿದ ಕೊಕ್ಕು; ಕಣ್ಣಿಗೆ ಕಪ್ಪುಪಟ್ಟಿ; ಸಣ್ಣ ಕಾಲುಗಳು; ಉದ್ದವಾದ ಪಟ್ಟೆ ಬಾಲ. ಗಂಡು-ಹೆಣ್ಣು ವಿಭಿನ್ನ. ಕೀಟಗಳು, ಮರಿಹುಳಗಳು, ಮಕರಂದ, ಹಣ್ಣುಗಳೇ ಆಹಾರ. ಮರದ ಕೊಂಬೆಗಳ ಕವಲುಗಳಲ್ಲಿ, ಕಡ್ಡಿ, ಬೇರು, ಜೇಡರಬಲೆಯಿಂದ ತಯಾರಾದ ಬಟ್ಟಲಿನಂತಹ ಗೂಡು. ಇನ್ನು ಇದೇ ಕುಟುಂಬಕ್ಕೆ ಸೇರಿದ ಚಿತ್ರಪಕ್ಷಿಗಳು, ಎತ್ತರದ ಹೂವರಳಿದ ವೃಕ್ಷಗಳ ಮೇಲೆ ಗುಂಪಾಗಿ, ಸಂಭ್ರಮದಿಂದ ಹಾರಾಡುತ್ತಾ ವನಕ್ಕೆ ಕಳೆಗಟ್ಟುವ ಉಜ್ವಲ ಬಣ್ಣದ ಹಕ್ಕಿಗಳು.

ಸುಮಾರು 16 ಸೆಂಮೀ. ಗಾತ್ರದ ಗುಲಗಂಜಿಯಲ್ಲಿ ಗಂಡು-ಹೆಣ್ಣು ನೋಡಲು ವಿಭಿನ್ನ. ಗಂಡು ಗುಲಗಂಜಿಗೆ ಕಡುಬೂದು ನೆತ್ತಿ, ಹಿಂಗತ್ತು, ಬೆನ್ನು; ಕಪ್ಪು ಗಲ್ಲ; ಕಪ್ಪು ರೆಕ್ಕೆಗಳಲ್ಲಿ ಕಿತ್ತಳೆ-ಹಳದಿ ಪಟ್ಟಿಗಳು; ಕಿತ್ತಳೆ ಕೆಳಬೆನ್ನು; ಕಪ್ಪು ಬಾಲ; ತಿಳಿ ಕಿತ್ತಳೆ-ಹಳದಿ ಕೆಳಮೈ. ಹೆಣ್ಣು ಹಕ್ಕಿಗೆ ತಿಳಿ ಬೂದು ಮೇಲ್ಮೈ ಮತ್ತು ಬಿಳಿ ಗಲ್ಲ, ಗಂಟಲು. ಗಂಡು ಹಕ್ಕಿಯ ದೇಹದ ಮೇಲೆ ಎಲ್ಲೆಲ್ಲಿ ಕಿತ್ತಳೆ ಬಣ್ಣವಿದೆಯೋ ಅವೆಲ್ಲ ಹೆಣ್ಣು ಹಕ್ಕಿಯಲ್ಲಿ ಹಳದಿ ಬಣ್ಣ! ಸಣ್ಣ ಗುಂಪಿನಲ್ಲಿ, ವಿರಳ ಕಾಡು-ಎಸ್ಟೇಟುಗಳಲ್ಲಿ, ತೋಪುಗಳಲ್ಲಿ, ಮರಗಳ ತುದಿಯಲ್ಲಿ ಹಾಡುತ್ತ ಹಾರಾಡುತ್ತವೆ.

ಕೀಟಗಳೇ ಗುಲಗಂಜಿ ಪಕ್ಷಿಯ ಮುಖ್ಯ ಆಹಾರ. ಕುಳಿತಲ್ಲಿಂದಲೇ ಹೊಂಚು ಹಾಕಿ ಹಾರುತ್ತಿರುವ ಕೀಟವನ್ನು ಹಿಡಿದು, ಅಥವಾ ಕುಳಿತ ಮರಗಳಲ್ಲಿ ವಾಸಿಸುವ ಕೀಟಗಳನ್ನು ಹಿಡಿದು, ಕುಳಿತ ಕೊಂಬೆಗೆ ಬಡಿದು, ಕೊಂದು ತಿನ್ನುತ್ತವೆ. ವಿವಿಧ ಕೀಟಗಳು, ಕೀಟಗಳ ಪೊರೆಹುಳುಗಳು ಮತ್ತು ಮರಿಹುಳುಗಳು, ಪತಂಗಗಳು, ಜೀರುಂಡೆಗಳು, ಮಿಡತೆಗಳು, ಸಿಕಾಡಾಗಳು, ಕ್ರಿಕೆಟ್‌ಗಳು ಮತ್ತು ಮಿಡತೆ ಅವುಗಳ ಆಹಾರದ ಪಟ್ಟಿಯಲ್ಲಿವೆ.

ಗುಲಗಂಜಿ ಹಕ್ಕಿಗಳು ಸಣ್ಣ ಗುಂಪಿನಲ್ಲಿ, ಎತ್ತರದ ಮರಗಳ ಮೇಲೆ ಚೇತೋಹಾರಿಯಾದ, ಮಧುರವಾದ, ಇಂಪಾದ ಸ್ವೀ..ಸ್ವೀ..ಸ್ವೀ.. ಉಲಿತದೊಂದಿಗೆ ಹಾಡುತ್ತವೆ.

ಗುಲಗಂಜಿಯ ಸಂತಾನೋತ್ಪತ್ತಿಯ ಋತುಮಾನವು ಫೆಬ್ರವರಿಯಿಂದ ನವೆಂಬರ್‌ವರೆಗೆ. ಗೂಡು ಮರದ ಕೊಂಬೆಗಳು ಮತ್ತು ಪೊದೆಗಳು ಕವಲುಗಳಲ್ಲಿ, ಒಣಎಲೆ, ನಾರು-ಬೇರುಗಳಿಂದ ಮಾಡಿದ ಬಟ್ಟಲಿನ ತರಹದ ರಚನೆಯಾಗಿದ್ದು, ಇದರಲ್ಲಿ ಎರಡರಿಂದ ನಾಲ್ಕು, ಕಂದು ಮಚ್ಚೆಯುಳ್ಳ ಮಾಸಲು ಬಿಳಿ ಮೊಟ್ಟೆಗಳನ್ನಿಟ್ಟು, ಕಾವು ಕೊಡುವ ಕೆಲಸವನ್ನೆಲ್ಲ ಹೆಣ್ಣು ಗುಲಗಂಜಿಯೇ ಮಾಡುತ್ತದೆ. 14 ದಿನಗಳ ಕಾವು ನಂತರ ಮರಿಗಳು ಹೊರಬರುತ್ತವೆ.

ಗುಲಗಂಜಿ ಹಕ್ಕಿಗಳನ್ನು ಸೆರೆಹಿಡಿದು, ಪಂಜರದಲ್ಲಿಟ್ಟು ಸಾಕುವುದು ಕಾನೂನಿಗೆ ವಿರುದ್ಧ. ಆದರೂ ಈ ದಂಧೆ ಇದ್ದೇ ಇದೆ. ಅಲ್ಲದೆ ಗುಲಗಂಜಿಗಳ ಆವಾಸಸ್ಥಾನ ನಾಶ, ಅರಣ್ಯನಾಶ ಮುಂತಾದ ಮಾನವ ಹಸ್ತಕ್ಷೇಪಗಳು ಈ ಪ್ರಭೇದಗಳ ಉಳಿವಿಗೆ ಅಪಾಯವನ್ನುಂಟು ಮಾಡುವ ಮುಖ್ಯ ಬೆದರಿಕೆಗಳಾಗಿವೆ.

About The Author

ಡಾ. ಎಸ್‌. ವಿ. ನರಸಿಂಹನ್

ಡಾ. ಎಸ್‌.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್‌ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು  ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ.  ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ