Advertisement

ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್

ದೇವರು ಧರಿಸುವ ಬಟ್ಟೆಯೂ ದೇವರಿಗೆ ಕೊಟ್ಟ ಮಾತೂ..

ದೇವರಿಗೆ ಉಡುಪಾಗಿ ನೇಯುವುದು ಒಂದಾದರೆ, ದೇವರನ್ನೇ ನೇಯುವುದು  ಕೂಡ ಇನ್ನೊಂದು ಬಗೆಯ  ವಸ್ತ್ರಕಲೆ. ಗುಜರಾತಿನಲ್ಲಿ ಬಟ್ಟೆಯ ಮೇಲೆ ಚಿತ್ರ ಬರೆಯುವ ಮಾತಾ ನಿ ಪಚ್ಚೆಡಿ ಅನ್ನುವ ಸಂಪ್ರದಾಯ ಇದೆ. ಇದನ್ನು ಮಾಡುವವರು ಜಲ್ಲಿ ಕಲ್ಲು ಒಡೆಯುವ, ಅಷ್ಟೇನೂ ಅನುಕೂಲಸ್ಥರಲ್ಲದ ವರ್ಗ.  ಅವರಿಗೆ ದೇವಾಲಯಕ್ಕೆ ಪ್ರವೇಶ ಕೊಡಲಿಲ್ಲ ಅಂತ ಬಟ್ಟೆಯ ಮೇಲೆ ದೇವಿಯ ಚಿತ್ರ ಬರೆದರು. ಅದನ್ನೇ ಪೂಜೆ ಮಾಡುತ್ತಾ ಬಂದರು. ಅವರು ಸೀರೆಗಳ ಮೇಲೆ ವಿಧವಿಧವಾದ ದೇವಿಚಿತ್ರಗಳನ್ನು ಕಲಾತ್ಮಕವಾಗಿ, ಗಾಢ ಬಣ್ಣಗಳಲ್ಲಿ ಬಿದಿರಿನ ಕಡ್ಡಿಗಳಿಂದ ಮೂಡಿಸುತ್ತಾರೆ. ಅದನ್ನು ಗುಜರಾತಿನ ಕಲಮ್‌ಕಾರಿ ಎನ್ನುತ್ತಾರೆ. ಅವರಿಗೆ ಅದು ಬರಿ ಬಟ್ಟೆಯಲ್ಲ, ದೇವಿಯ ಆರಾಧನೆ.
ಗಿರಿಜಾ ರೈಕ್ವ ಬರೆಯುವ ಅಂಕಣ ‘ದೇವಸನ್ನಿಧಿ’

Read More

ಚಂಬಲ್‌ನ ಡಕಾಯಿತರು ಕಾಪಾಡಿದ ವಿಗ್ರಹಗಳು

ನಮ್ಮ ದೇಶವನ್ನು ನೋಡಲು ಸರಿಯಾಗಿ ಒಂದು ಜನ್ಮ ಸಾಕಾಗಲ್ಲ. ಅಲೆದಾಡಲು ಇನ್ನೂ ಅದೆಷ್ಟು ಜನ್ಮಗಳು ಬೇಕೋ. ಅದರಲ್ಲೂ ಈ ಮಧ್ಯಪ್ರದೇಶ ರಾಜ್ಯವನ್ನು ನೋಡಲು ಅರ್ಧ ಜನ್ಮವೇ ಬೇಕೇನೋ. ಪ್ರಸ್ತುತ ನಾನು ಗ್ವಾಲಿಯರ್‌ನಿಂದ ೨೫ ಕಿ. ಮೀ ದೂರದಲ್ಲಿರುವ ಮೊರೇನಾ ಅನ್ನೋ ಜಿಲ್ಲೆಗೆ ಸೇರಿದ ಬಟೇಶ್ವರ ಗುಡಿಗಳು ಜೀವ ತಳೆದ ಕಥೆಯ ಬಗ್ಗೆ ಹೇಳಬೇಕು.  ಇವು ೮ ರಿಂದ ೧೦ ನೇ ಶತಮಾನದಲ್ಲಿ ನಿರ್ಮಾಣ ಆಗಿರಬಹುದು ಎನ್ನುತ್ತಾರೆ ಪುರಾತತ್ವಜ್ಞರು. ಆದರೆ ಇದು ಬೆಳಕಿಗೆ ಬಂದಿದ್ದು ೨೦೦೫ ರಿಂದ ಈಚೆಗೆ. ಅಲ್ಲೀ ತನಕ ಏನಾಗಿತ್ತು? ಯಾಕೆ ಯಾರೂ ಇಲ್ಲಿರುವ ವಿಗ್ರಹಗಳನ್ನು ಕಳುವು ಮಾಡಲಿಲ್ಲ? ಅವುಗಳನ್ನು ಚಂಬಲ್‌ ನ ಡಕಾಯಿತರು  ಪರೋಕ್ಷವಾಗಿ ಕಾಯುತ್ತಿದ್ದರು ಎಂದು ಬರೆಯುತ್ತಾರೆ ಗಿರಿಜಾ ರೈಕ್ವ.  ದೇವಸನ್ನಿಧಿ ಅಂಕಣದಲ್ಲಿ ಅವರ ಹೊಸ ಬರಹ ಇಲ್ಲಿದೆ.

Read More

ಸದ್ದಿಲ್ಲದೆ ಕಾಣೆಯಾಗುವ ನಾಡಿನ ಶಿಲ್ಪ ಸಂಪತ್ತು

 ಹಾಸನದ ಚನ್ನರಾಯಪಟ್ಟಣದ ಬಳಿ ಹರಿಹರಪುರ ಅಂತ ಒಂದು ಸ್ಥಳವಿದೆ.  ಅಲ್ಲೊಂದು ಹರಿಹರೇಶ್ವರನ ದೇವಾಲಯವಿದ್ದರೂ ಒಳಗೆ ದೇವರಿಲ್ಲ.  ತ್ರಿಕೂಟೇಶ್ವರ ಅಂದರೆ ಮೂರು ಗರ್ಭಗುಡಿಗಳು ಒಂದು ನವರಂಗವನ್ನು ಹೊಂದಿರುತ್ತದೆ. ಅದರ ಪ್ರಕಾರ ಅಲ್ಲಿ ಮೂರು ಮೂರ್ತಿಗಳಿರಬೇಕಿತ್ತು. ಮುಖ್ಯ ದೇವರು ಹರಿಹರೇಶ್ವರ. ಇನ್ನೆರಡು ರಂಗನಾಥ ಮತ್ತು ಸರಸ್ವತಿಗೆ ಸೇರಿದ್ದು. ಆದರೆ ಇವತ್ತು ಮೂರೂ ಖಾಲಿ. ಎಲ್ಲಿ ಹೋದವು ಆ ಮೂರ್ತಿಗಳು ? ಅವು ಹರಿಹರಪುರದಿಂದ ೬೫೦೦ ಕಿ.ಮೀ ದೂರದಲ್ಲಿರುವ ಡೆನ್ಮಾರ್ಕಿನ ಕೋಪನ್ ಹೇಗನ್   ಮ್ಯೂಸಿಯಂನ ಏರ್ ಕಂಡೀಷನ್ ರೂಮಿನಲ್ಲಿ ತಣ್ಣಗೆ ಕುಳಿತಿವೆ. ಇಲ್ಲಿಂದ ಅಲ್ಲಿಗೆ ಹೋಗಿದ್ದಾದರೂ ಹೇಗೆ? ಗಿರಿಜಾ ರೈಕ್ವ ಬರೆಯುವ ಅಂಕಣ. 

Read More

ಕಲ್ಲಿನಲ್ಲಿ ಕಡೆದ ಆಲ್ಬಮ್‌, ತಾಡಿಪತ್ರಿ

ನಾನು ಮೊದಲು ಹೋಗಿದ್ದು ಬುಗ್ಗ ರಾಮಲಿಂಗೇಶ್ವರಕ್ಕೆ. ನಿತ್ಯ ಬರುವ ಭಕ್ತಾದಿಗಳನ್ನು ಬಿಟ್ಟರೆ ಹೆಚ್ಚು ಜನ ಇರಲಿಲ್ಲ. ವಿಜಯನಗರ ಶೈಲಿಯ ದೇವಾಲಯಗಳಲ್ಲಿ ಇರುವಂತೆ ಪ್ರವೇಶ ದ್ವಾರ ಎತ್ತರವಾಗಿದ್ದು, ಎರಡೂ ಬದಿಗಳಲ್ಲಿ ಗಂಗಾ, ಯಮುನೆಯರ ಶಿಲ್ಪಗಳಿಂದ ಕೂಡಿದೆ. ಇವು ಮಾನಸಿಕವಾಗಿ ನಮ್ಮನ್ನು ಗಂಗೆ, ಯಮುನೆಯರಿಂದ ಶುಚಿಗೊಳಿಸಿಕೊಂಡು ಒಳಕ್ಕೆ ಹೋಗುವ ಪ್ರತೀಕ. ದೇವಾಲಯದ ಪ್ರಶಾಂತತೆ ಹಾಗೂ ಅದರ ಬೃಹತ್‌ ಗಾತ್ರವನ್ನು ಕಂಡು ನನಗೆ ಒಂದು ಕಡೆ ಬೆರಗು ಜೊತೆಗೆ ಏನು ನೋಡಲಿ ಏನು ಬಿಡಲಿ ಅಂತ ಸ್ವಲ್ಪ ಹೊತ್ತು ತಲೆ ಕೆಟ್ಟ ನೊಣದ ಹಾಗೆ ಕ್ಯಾಮೆರಾ ಹಿಡಿದುಕೊಂಡು ಓಡಾಡಿದೆ.
‘ದೇವ ಸನ್ನಿಧಿ’ ಅಂಕಣದಲ್ಲಿ ತಾಡಿಪತ್ರಿ ಎಂಬ ಅಪರೂಪದ ಜಾಗದ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ

Read More

ಗಗನಚುಂಬಿ ಬೆಟ್ಟಗಳ ಸಂದಿಯಲ್ಲಿ ಬುದ್ಧಗಂಟೆಯ ಸದ್ದು

ನದಿ, ಜಲಪಾತಗಳೆಲ್ಲಾ ಹೆಪ್ಪುಗಟ್ಟಿದ್ದ ಚಳಿಗಾಲದಲ್ಲೊಮ್ಮೆ ನಾನು ಚೀನಾದ ದಟಾಂಗ್ ಎನ್ನುವ ಊರಿನಲ್ಲಿದ್ದೆ. ಇದು ಉತ್ತರ ಚೀನಾದ ಶಾಂಕ್ಷಿ ಪ್ರಾಂತ್ಯದಲ್ಲಿದೆ, ಇದರ ಸುತ್ತಮುತ್ತ ಯುನೆಸ್ಕೋ ತಾಣಗಳೂ ಸೇರಿದಂತೆ ಅನೇಕ ಪ್ರಾಚೀನ ಬೌದ್ಧತಾಣಗಳಿವೆ. ಅಲ್ಲೊಂದು ಹಳೆಯ ಬೌದ್ಧವಿಹಾರ. ಬೋಳುಬೆಟ್ಟಗಳ ಜೊತೆ ತಾನೂ ಒಂದಾಗಿರುವಂತೆ ತೋರುವ ಆ ವಿಹಾರ ನೆಲದಿಂದ ೭೫ ಮೀ ಎತ್ತರದಲ್ಲಿ ಬೆಟ್ಟದ ಮೇಲ್ಮೈನಲ್ಲಿ ೧೫೦೦ ವರ್ಷಗಳಿಂದ ಬೀಳದೆ, ಅಲ್ಲಾಡದೆ, ಮಳೆಗೆ ಜಗ್ಗದೆ, ಬಿಸಿಲಿಗೆ ಕುಗ್ಗದೆ, ಹಿಮಕ್ಕೆ ಕರಗದೆ, ಗಾಳಿಗೆ ಹಾರಿ ಹೋಗದೆ ಹಾಗೇ ಉಳಿದುಕೊಂಡು ನಮ್ಮಂತಹ ನೋಡುವ ಕಣ್ಣಿಗೆ ವಿಸ್ಮಯವಾಗಿ ಉಳಿದುಬಿಟ್ಟಿದೆ.
‘ದೇವ ಸನ್ನಿಧಿ’ ಅಂಕಣದಲ್ಲಿ ಗಿರಿಜಾ ರೈಕ್ವ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ