Advertisement
ಲತಾ ಶ್ರೀನಿವಾಸ್

ಲತಾ ಶ್ರೀನಿವಾಸ್‌ ಮೂಲತಃ ತುಮಕೂರಿನವರು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಚಿತ್ರಕಲೆ ಹಾಗೂ ಪ್ರವಾಸ ಇವರ ಹವ್ಯಾಸಗಳು. ಮುದ್ದುಮಗಳೇ ಇವರ ಪ್ರಕಟಿತ ಕೃತಿ.

ಆಶಾ ರಘು ಬರೆದ ‘ಮಾಯೆ’ ಕಾದಂಬರಿಯ ತುಣುಕು

ವಿಶಾಲವಾದ ಕೋಣೆ. ಕೆತ್ತನೆಯ ಕುಸುರಿ ಮಾಡಲಾದ ದೊಡ್ಡ ಮಂಚ. ಮೆತ್ತೆ.. ಎರಡು ದೊಡ್ಡ ದೊಡ್ಡ ಗವಾಕ್ಷಿಗಳು. ಅವಕ್ಕೆ ತೆಳುಪರದೆ. ಇನ್ನುಳಿದ ಗೋಡೆಯ ಭಾಗಗಳಲ್ಲಿ ನಾಲ್ಕಾರು ನೃತ್ಯ ಭಂಗಿಗಳ ಚಿತ್ರಪಟಗಳು. ಮೆತ್ತೆಯ ಮೇಲೆ ನನ್ನ ಪಕ್ಕದಲ್ಲಿ ಕುಳಿತು, ನನ್ನ ಕೈಗಳನ್ನು ಅವಳ ಕೈಗಳಲ್ಲಿ ಹಿಡಿದು ಮುಗುಳುನಕ್ಕಳು. ನನಗೆ ಅವಳ ಜಾಗದಲ್ಲಿ ವೈಶಾಲಿಯನ್ನು ಕಲ್ಪಿಸಿಕೊಂಡು ಕಣ್ಣುಗಳಲ್ಲಿ ನೀರು ತುಂಬಿಕೊಂಡುಬಿಟ್ಟಿತು. ಆಶಾ ರಘು ಬರೆದ  ‘ಮಾಯೆ’ ಕಾದಂಬರಿಯ ಒಂದು ಅಧ್ಯಾಯ ಕೆಂಡಸಂಪಿಗೆಯ ಓದುಗರಿಗಾಗಿ ಇಲ್ಲಿದೆ.

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಬಸು ಬೇವಿನಗಿಡದ ಬರೆದ ಕತೆ

ಅಳುತ್ತಿದ್ದ ಅವಳನ್ನು ಡಾಕ್ಟರ್ ಒಂದೆರಡು ಗುಳಿಗೆ ನುಂಗಿಸಿ ನೀರು ಕುಡಿಸಿ ಸಮಾಧಾನಪಡಿಸಿದರು. ಕೂಡಲೆ ಆಕೆ ನಿದ್ದೆಹೋದಳು. ಆಕೆಯ ಮನಸ್ಸು ಕೃಷ್ಣನ ಕಥೆಯಿಂದ ಘಾಸಿಗೊಂಡಿದೆಯೆಂದು ಅವರಿಗೆ ತಿಳಿಯಿತು. ‘ನಾಟಕದ ಕೃಷ್ಣ ಬಂದು ನಮ್ಮಣ್ಣನ ಸಾಯಹೊಡದು ನನ್ನ ಕರ್ಕೊಂಡು ಹೋಗ್ತಾನಂತ.’ ಎಚ್ಚರಾದಾಗ ವಿಮಲವ್ವ ಹೇಳಿದ ಮಾತಿಗೆ ಡಾಕ್ಟರ್ ನಕ್ಕರು. ‘ನಿಮ್ಮಣ್ಣ ದೊಡ್ಡ ಹುಲಿ ಅದಾನು. ಇಂವ ಅಡರ್ ಅಂದ್ರ ಕೃಷ್ಣನ ಕಿರೀಟ ಅಲ್ಲೇ ಬೀಳ್ತದ ತಗೋ. ನೀಯೇನೂ ಹೆದರಬ್ಯಾಡ’.

Read More

ಮಂಜುನಾಥ್‌ ಚಾಂದ್‌ ತೆಗೆದ ಈ ದಿನದ ಚಿತ್ರ

ಈ ದಿನದ ಫೋಟೋ ತೆಗೆದವರು ಪತ್ರಕರ್ತ ಮಂಜುನಾಥ್ ಚಾಂದ್. ಮಂಜುನಾಥ್ ಕಥೆಗಾರರಾಗಿಯೂ ಕನ್ನಡ ಸಾಹಿತ್ಯ ವಲಯದಲ್ಲಿ ಗಮನ ಸೆಳೆದವರು. ಕದ ತೆರೆದ ಆಕಾಶ (ಕಥಾಸಂಕಲನ), ಅಮ್ಮ ಕೊಟ್ಟ ಜಾಜಿ ದಂಡೆ (ಪ್ರಬಂಧ ಸಂಕಲನ) ಹಾಗೂ ಕಾಡಸೆರಗಿನ ಸೂಡಿ (ಕಾದಂಬರಿ) ಅವರ ಪ್ರಕಟಿತ ಕೃತಿಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯ ಕೂಡಾ ಇರಲಿ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಸು.ರುದ್ರಮೂರ್ತಿ ಶಾಸ್ತ್ರಿ ಬರೆದ ಹೊಸ ಕಾದಂಬರಿಯ ಕೆಲವು ಪುಟಗಳು

ಮಹಾದೇವಿ ಅಡಿಗೆ ಮನೆಯ ಬಾಗಿಲ ಮರೆಯಿಂದಲೇ ಇಣುಕಿ ನೋಡುತ್ತಿದ್ದಳು. ನಿನ್ನೆ ಕೌಶಿಕ ತನ್ನನ್ನು ನುಂಗುವಂತೆ ನೋಡುತ್ತಿದ್ದುದಕ್ಕೂ, ಈಗ ಮಂತ್ರಿ ಮನೆಗೆ ಬಂದಿರುವುದಕ್ಕೂ ಏನೋ ಸಂಬಂಧವಿರಬೇಕೆಂದು ಅವಳಿಗೆ ಸಂದೇಹ ಬಂತು.  ಹೇಗೆ ಮಾತು ಆರಂಭಿಸಬೇಕೆಂದು ತೋಚದೆ ಮಹಾಬಲಯ್ಯ ಚಡಪಡಿಸಿದ. ಆದರೆ ಬಂದಾಗಿದೆ, ಮಾತಾಡಲೇಬೇಕಾಗಿತ್ತು. ರಾಜಾಜ್ಞೆಯನ್ನು ಮಂತ್ರಿಯಾಗಿ ಪಾಲಿಸಲೇ ಬೇಕಾಗಿತ್ತು. -ಸು.ರುದ್ರಮೂರ್ತಿ ಶಾಸ್ತ್ರಿಗಳು  ಬರೆದ ‘ಅಕ್ಕಮಹಾದೇವಿ’ ಹೊಸ ಕಾದಂಬರಿಯ ಒಂದು ಅಧ್ಯಾಯ ಇಲ್ಲಿದೆ. 

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ