ಮಾಲಾ. ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ
“ಮೊದಲಿನಂತ ಚಲ್ಲು ಚಲ್ಲು ಸಲ್ಲ
ಗಂಭೀರವದನೆಯಾಗಿ
ಯಾರಲ್ಲೂ ಸಲುಗೆ ನಿಷಿದ್ಧ ಸಲಹೆ
ಆಗಾಗ ನಡೆಯುವ ಕಂದಮ್ಮಗಳ
ಅತ್ಯಾಚಾರ ಭಯ ಹುಟ್ಟಿಸಿ
ಮಗಳ ಜವಾಬ್ದಾರಿ ನಿದ್ದೆಗೆಡಿಸಿ” -ಮಾಲಾ. ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Posted by ಕೆಂಡಸಂಪಿಗೆ | Aug 16, 2025 | ದಿನದ ಕವಿತೆ |
“ಮೊದಲಿನಂತ ಚಲ್ಲು ಚಲ್ಲು ಸಲ್ಲ
ಗಂಭೀರವದನೆಯಾಗಿ
ಯಾರಲ್ಲೂ ಸಲುಗೆ ನಿಷಿದ್ಧ ಸಲಹೆ
ಆಗಾಗ ನಡೆಯುವ ಕಂದಮ್ಮಗಳ
ಅತ್ಯಾಚಾರ ಭಯ ಹುಟ್ಟಿಸಿ
ಮಗಳ ಜವಾಬ್ದಾರಿ ನಿದ್ದೆಗೆಡಿಸಿ” -ಮಾಲಾ. ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Aug 15, 2025 | ವಾರದ ಕಥೆ, ಸಾಹಿತ್ಯ |
ಎಲ್ಲಿಂದಲೋ ಸಿನೆಮಾ ಹಾಡು ಕೇಳಿ ಬಂತು. ಕಡೆಯ ಆಟ ಮುಗಿಯಿತೇನೋ ‘ತಾರಾ ಗಗನಮೇ…’ ತಲೆಯೆತ್ತಿ ನೋಡಿದ. ಆಕಾಶದಲ್ಲೂ ಸ್ವಾತಂತ್ರ್ಯೋತ್ಸವದ ಸಂಭ್ರಮ. ಲಕ್ಷೋಪಲಕ್ಷ ನಕ್ಷತ್ರಗಳು, ಬೊಂಬಾಯಿನಲ್ಲಿ ವಿದ್ಯುದ್ದೀಪಮಾಲೆಗಳ ನಡುವಿನಲ್ಲಿ ಇವುಗಳನ್ನು ಗಮನವಿಟ್ಟು ನೋಡಿರಲಿಲ್ಲ. ಇಲ್ಲಿ ನಿಸರ್ಗಕ್ಕೆ ಮಾನವನ ಸ್ಪರ್ಧೆಯಿಲ್ಲ. ಬೊಂಬಾಯಿನಲ್ಲಿ ವಿದ್ಯುದ್ದೀಪಗಳ ಗೊಂದಲಕ್ಕೆ ಸಿಕ್ಕಿ ಆಕಾಶ ಕೆಂಪಾಗಿತ್ತು.
ಹಿರಿಯ ಕತೆಗಾರ್ತಿ ರಾಜಲಕ್ಷ್ಮಿ ಎನ್. ರಾವ್ ಬರೆದ ಸಮಗ್ರ ಕತೆಗಳನ್ನು ಚಂದನ್ ಗೌಡ “ಸಂಗಮ” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ್ದು, ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಈ ಸಂಕಲನದ “ಆಗಸ್ಟ್ ಹದಿನೈದು” ಕತೆ ನಿಮ್ಮ ಓದಿಗೆ
Posted by ಕೆಂಡಸಂಪಿಗೆ | Aug 11, 2025 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
ತಂಡೋಪತಂಡವಾಗಿ ಜನ ನಮ್ಮ ಮನೆಕಡೆ ಬರುತ್ತಿರುವುದು ಕಾಣಿಸಿತು. ಹಲವಾರು ಬ್ಯಾಟರಿ ಬೆಳಕುಗಳೂ ಒಂದೆರಡು ಪೆಟ್ರೋಮ್ಯಾಕ್ಸ್‌ಗಳೂ ಆ ಗುಂಪಿನಲ್ಲಿದ್ದವು. ಎಲ್ಲರೂ ಮನೆಯಂಗಳಕ್ಕೆ ಬಂದವರೇ ನೇರವಾಗಿ ಬಾವಿಯಕಡೆ ನಡೆದರು. ನೋಡನೋಡುತ್ತಿದ್ದಂತೆ ಮೂರ್ನಾಲ್ಕು ಜನ ಬಾವಿ ಇಳಿದರು. ಕೆಲವರು ಮೇಲಿನಿಂದ ನೇಣು ಇಳಿಬಿಟ್ಟರು. ದನಗಳ ಹೊಟ್ಟೆ ಕೆಳಗೆ ನೇಣು ತೂರಿಸಿ ಬಾವಿಯ ಇನ್ನೊಂದು ಭಾಗದಲ್ಲಿದ್ದವರಿಗೆ ತಲುಪಿಸಿದರು. ನೋಡ ನೋಡುತ್ತಿದ್ದಂತೆಯೇ ಒಂದೊಂದೇ ದನಗಳನ್ನು ಬಾವಿಯಿಂದ ಮೇಲೆತ್ತಿದರು.
ನಟರಾಜ್ ಅರಳಸುರಳಿ ಬರೆದ ತಮ್ಮ ತಂದೆಯವರ ಕುರಿತ ಬರಹಗಳ ಸಂಕಲನ “ಆಕಾಶಬುಟ್ಟಿ” ಕೃತಿಯ ಒಂದು ಬರಹ ನಿಮ್ಮ ಓದಿಗೆ.
Posted by ಕೆಂಡಸಂಪಿಗೆ | Aug 10, 2025 | ವಾರದ ಕಥೆ, ಸಾಹಿತ್ಯ |
ರಾಜಣ್ಣನ ಕೊನೆಯ ಮಾತುಗಳನ್ನು ಕೇಳಿಸಿಕೊಂಡು ಕವಿತಾಳ ಕಣ್ಣುಗಳು ಗಾಬರಿಯಲ್ಲಿ ಅಗಲವಾದವಾ? ಅವನಿಗದು ಗೊತ್ತಾಗಲಿಲ್ಲವಾದರೂ ಉಸಿರು ಎಳೆಯುತ್ತಿದ್ದ ಕವಿತಾ “ನೀನಾದ್ಮ್ಯಾಲೆ ನನ್ನ ಯಾರೂ ಮುಟ್ಟಿಲ್ಲ.” ಎಂದು ಗೊಗ್ಗರು ದನಿಯಲ್ಲಿ ಹೇಳಿದ ಮಾತಿಗೆ ಬೇಕಾದ ಉಸಿರು ಪೂರ್ತಿ ಗಂಟಲಿನಿಂದಲೇ ಹೊರಗೆ ಹೋಗುತ್ತಿತ್ತು. “ನೀನಾದ್ಮ್ಯಾಲೆ ನನ್ನ…” ಎಂಬ ಶಬ್ದವೊಂದೇ ಅವನಿಗೆ ಅರ್ಧಂಬರ್ಧ ಕೇಳಿಸಿದ್ದು, ಅದೂ ಬರೀ ಗೊರಗೊರ. ಅವಳನ್ನೇ ದಿಟ್ಟಿಸುತ್ತಿದ್ದ ರಾಜಣ್ಣ ಕೆಲವೇ ಕ್ಷಣಗಳಲ್ಲಿ ಅವಳ ಉಸಿರು ನಿಂತಿದ್ದನ್ನು ಗೊತ್ತುಮಾಡಿಕೊಂಡು ತನ್ನ ಕುತ್ತಿಗೆಗೂ ಚಾಕು ಹಾಕಿಕೊಂಡ.
ಪ್ರವೀಣ್ ಕುಮಾರ್ ಜಿ. ಕಥಾ ಸಂಕಲನ “ಬಯಲು” ಕೃತಿಯ ಶೀರ್ಷಿಕೆ ಕತೆ ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
Posted by ಕೆಂಡಸಂಪಿಗೆ | Aug 5, 2025 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
ಅವರ ಆ ಪುಸ್ತಕಕ್ಕೆ ಅವರ ಹಕ್ಕೊತ್ತಾಯದ ಮೇಲೆ ನಾನು ಬ್ಲರ್ಬ್ ಬರೆದಿದ್ದೆ. ಈ ಬಗ್ಗೆ ನಮ್ಮ ನಡುವೆ ಒಂದು ಜೋಕ್ ಇತ್ತು. ಏನೆಂದರೆ ಆ ಪುಸ್ತಕ ಮುದ್ರಣ ಶುರುವಾಗುವ ಹಂತದಲ್ಲಿದೆ ಎಂದು ತಿಳಿದು ಅಜಿತ್ ಪಂಜಾಬ್‌ನಲ್ಲಿ ಸೇರಿ ನಾವು ಬೀರೋಚಿತವಾಗಿ ಸಿಲೆಬ್ರೇಟ್ ಮಾಡುವಾಗ, ಅವರು ಚೂರು ತೊದಲುತ್ತ, “ಈ ಪುಸ್ತಕ ಯಾವಾಗರೆ ಬರ್ಲಿ, ಅದಕ್ಕೆ ಬಲ್ಬ್ ಮಾತ್ರ ನೀವೇ ಬರೀಬೇಕ್ರಿ’’ – ಎಂದರು. ಅಂದಿನಿಂದ ಬ್ಲರ್ಬ್ ಪದಕ್ಕೆ ಪರ್ಯಾಯವೆಂಬಂತೆ ನಾವು ಬಲ್ಬ್ ಎಂದೇ ಬಳಸುತ್ತಿದ್ದೆವು. ಎಷ್ಟು ಕ್ಯಾಂಡಲಿಂದು ಇತ್ಯಾದಿ ವಿವರಗಳೊಂದಿಗೆ. ಯಾವುದಾದರೂ ಹೊಸ ಪುಸ್ತಕದ ಹಿನ್ನುಡಿಯಲ್ಲಿ ಹುರುಳಿಲ್ಲದಿದ್ದರೆ, ‘‘ಝೀರೋ ಕ್ಯಾಂಡಲ್ ಬಲ್ಬ್ರೀ” ಅಂತಿದ್ರು.
ಜಯಂತ ಕಾಯ್ಕಿಣಿ ಕೃತಿ “ತಾರಿ ದಂಡೆ”ಯ ಮತ್ತೊಂದು ಬರಹ ನಿಮ್ಮ ಓದಿಗೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
