Advertisement
ಡಾ. ಚಂದ್ರಮತಿ ಸೋಂದಾ

ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಚೀಮನಹಳ್ಳಿ ರಮೇಶಬಾಬು ಕತೆ

ಮಳೆ ನಿಂತಿತ್ತಾದರೂ ಸಂದಿಯಲ್ಲಿರುವ ನೀರು ಖಾಲಿಯಾಗುವವರೆಗು ಮನೆಯೊಳಗೆ ನೀರು ಬರುತ್ತಲೆ ಇತ್ತು. ಹಾಗಾಗಿ ಅವಳು ಬಹುಪಾಲು ರಾತ್ರಿಯೆಲ್ಲ ಹಾಗೆ ನೀರನ್ನು ಹೊರ ಹಾಕುತ್ತಲೆ ಇದ್ದಳು. ಅದಾದ ಮೇಲೆ ಮಣ್ಣನ್ನೆಲ್ಲ ತೆಗೆದು ಒಂದಷ್ಟು ಸ್ವಚ್ಛಗೊಳಿಸಿದ್ದಳಾದರು ಮುಂಜಾವಿನವರೆಗೂ ತಾರಸಿ ಸೋರುತ್ತಲೆ ಇತ್ತು. ಅವಳು ತುಂಬಿದ ಪಾತ್ರೆಗಳಲ್ಲಿನ ನೀರನ್ನು ಆಚೆ ಚಲ್ಲಿ ಮತ್ತೆ ಅದೇ ಜಾಗದಲ್ಲಿ ಇಡುತ್ತಿದ್ದಳು. ಹೀಗೆ ರಾತ್ರಿಯೆಲ್ಲ ಎದ್ದು ಬಗ್ಗಿ ಓಡಾಡಿ ಹೈರಾಣಾಗಿದ್ದಳು. ರಾತ್ರಿಯ ಕತ್ತಲಲ್ಲಿ ಅದುಮಿಟ್ಟುಕೊಂಡಿದ್ದ ಅವಳೆಲ್ಲ ಭಾವನೆಗಳು ಬೆಳಗಾಗುತ್ತಿದ್ದಂತೆ ಸಿಡಿದು ಸದ್ದು ಮಾಡತೊಡಗಿದವು.

Read More

ಸಮಾಜ ಶಾಸ್ತ್ರಹಿನ್ನೆಲೆಯ ಕವಿ ಕಂಡ ‘ನಾಗಕನ್ಯೆಯರು’

“ಸಳಸಳನೆ ಹರಿದಾಡಿ
ಮೈ ಮುರಿದು, ನೆಟಿಕೆ ಮುರಿದು
ತಂಗುಳನೆ ತಿರುತಿರುವಿ ಮೆಲುಕಾಡಿ
ಬಾಯಿಯಲೆ ಅವರಿವರ ಹಲ್ಲು ಮುರಿದು
ಹೆಡೆಯ ತೂಗುವ ಸೊಗಸು
(ಬಿಡುಗಡೆಯ ಹೊಚ್ಚ ಹೊಸತು)
ಕದ್ದಾದರೂ ಹತ್ತಿರವೆ ನೋಡಬೇಕು.”- ಮರುಳ ಸಿದ್ದಯ್ಯನವರು ಬರೆದ ‘ನಾಗಕನ್ಯೆಯರು’ ಎಂಬ ಕವನ ಇಂದಿನ ‘ಕಾವ್ಯ ಮಾಲೆಯ ಕಾಣದ ಕುಸುಮಗಳು’ ಸರಣಿಯಲ್ಲಿ ನಿಮ್ಮ ಓದಿಗಾಗಿ.

Read More

ನೆಲವ ಬಿಟ್ಟು ನೀರ ಮೇಲೆ ಇಪ್ಪತ್ತು ದಿನಗಳು

ಬೇಗುವಳ್ಳಿ ಮನೆಯಿಂದ ಹೊರಡುವ ಮೊದಲ ದಿನ ರಾತ್ರಿ ನಾವು ಮನೆಯ ಹೊರಗಿನ ವೆರಾಂಡದಲ್ಲಿಯೇ ಮಲಗಿದ್ದೆವು. ಮನೆ ಬಿಡಲು ಬೆಳಿಗ್ಗೆ ಬೇಗನೆ ಮುಹೂರ್ತವಿತ್ತು, ಅದಕ್ಕಾಗಿ ರಾತ್ರಿಯೇ ಮನೆಯಿಂದ ಹೊರಗೆ ಇರುವಂತೆ ವ್ಯವಸ್ಥೆ ಮಾಡಿದ್ದರೆಂದು ನನಗೆ ನೆನಪು. ಇಂಥ ಸಂದರ್ಭದಲ್ಲಿ ಮನೆಯವರಿಗೆ ಬೇಸರ ಮಾಡುವುದು ಬೇಡವೆಂದು ಅನಂತಮೂರ್ತಿ ಇದನ್ನು ಮೌನವಾಗಿ ಒಪ್ಪಿದ್ದರು.
ಡಾ. ಪೃಥ್ವೀರಾಜ ಕವತ್ತಾರು ನಿರೂಪಣೆಯ ಎಸ್ತರ್ ಅನಂತಮೂರ್ತಿಯವರ ಆತ್ಮಕತೆ ‘ನೆನಪು ಅನಂತ’ ಕೃತಿಯ ಮತ್ತೊಂದು ಅಧ್ಯಾಯ ನಿಮ್ಮ ಓದಿಗೆ

Read More

ದೇವೇಂದ್ರ ಅಬ್ಬಿಗೇರಿ ತೆಗೆದ ಈ ದಿನದ ಫೋಟೋ

ಶಿಲಾಂಗ್‌ನ ಜಾತ್ರೆಯೊಂದರ ಈ  ಫೋಟೋ ತೆಗೆದವರು ದೇವೇಂದ್ರ ಅಬ್ಬಿಗೇರಿ. ದೇವೇಂದ್ರ ಮೂಲತಃ ಕೊಪ್ಪಳ ಜಿಲ್ಲೆಯವರು. ೨೦೧೧ ಸಾಲಿನ ಕೇಂದ್ರೀಯ ನಾಗರೀಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, Indian Audit & Accounts Department ಅಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ

“ಕೊಲ್ಲುವುದು ಉಳಿದಿದೆ ಅಷ್ಟೆ
ಮುತುವರ್ಜಿಯಲಿ..,
ನಾವೀಗ
ಯುದ್ಧವನು ತೀಡಿ ತೀಡಿ
ಮತ್ತಷ್ಟು ಹೊಳಪುಗೊಳಿಸಿದ್ದೆವೆ
ಚರಿತ್ರೆ ನಾಚುವಂತ ಹತಾರಗಳ
ರಾಶಿ ಸುರಿದಿದೆ”- ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ