Advertisement
ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

ಬೊಳುವಾರು ಆತ್ಮಕತೆ ‘ಮೋನು ಸ್ಮೃತಿ’ಯ ಪುಟಗಳು

ಆ ದಿನಗಳಲ್ಲಿ ನನ್ನೂರ ನನ್ನ ಓದುಗರಲ್ಲಿ ನೂರಕ್ಕೆ ತೊಂಬತ್ತೊಂಬತ್ತು ಮಂದಿ ಮುಸ್ಲಿಮೇತರರು. ದುಡ್ಡು ಕೊಟ್ಟು ದಿನಪತ್ರಿಕೆಗಳನ್ನೂ, ವಾರ ಅಥವಾ ಮಾಸ ಪತ್ರಿಕೆ ಗಳನ್ನೂ ತರಿಸಿಕೊಂಡು ಟೀಪಾಯಿಗಳನ್ನು ಚಂದಗಾಣಿಸುತ್ತಿದ್ದವರು ಅವರು ಮಾತ್ರ. ಓದುಗರಲ್ಲಿ ಹೆಚ್ಚಿನವರು ಅಡಿಕೆಭಟ್ಟರುಗಳು. ಹಾಗಾದರೆ, ಅವರೆಲ್ಲರಿಂದ ನನಗೆ ಸಿಗುತ್ತಿದ್ದ ಮೆಚ್ಚುಗೆಗಳೆಲ್ಲವೂ ಮುಸ್ಲಿಮರ ಕಂದಾಚಾರಗಳನ್ನು ಪ್ರಶ್ನಿಸುತ್ತಿರುವುದಕ್ಕೆ ಮಾತ್ರವೆ? ಹಿಂದೂಗಳ ಕಂದಾಚಾರಗಳನ್ನು ಪ್ರಶ್ನಿಸಿದರೆ, ಅವರಿಗೂ ನಾನೊಬ್ಬ ‘ಹರಾಮಿ’ಯಾಗಿ ಕಾಣಿಸಲಾರಂಭಿಸುತ್ತೇನೆಯೆ? ಯಾರಲ್ಲಿ ಕೇಳುವುದು?
ಬೊಳುವಾರು ಮಹಮದ್ ಕುಂಞಿ ಅವರ ಆತ್ಮಕತೆ ‘ಮೋನು ಸ್ಮೃತಿ’ಯ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಪ್ರೇಮದ ಬೆಳಕು ಹೊತ್ತ ಒಂದಿಷ್ಟು ಕವಿತೆಗಳು

‘ಬಂದಂತೆ ಮರು ವಸಂತ, ನೀ ಬಂದೆ ಬಾಳಿಗೆ; ಅನುರಾಗ, ಆಮೋದ ಎದೆಯಲ್ಲಿ ತುಂಬಿದೆ’  ಎಂಬ ಸಾಲುಗಳು ಕವಿ ಬಿ.ಆರ್. ಲಕ್ಷ್ಮಣ ರಾವ್ ಅವರದು. ಎದೆಯಲ್ಲಿ ಅನುರಾಗ ಸೆಲೆಯನ್ನು ತುಂಬುವ ಪ್ರೇಮವು ಸದಾ ಜೀವನ್ಮುಖಿ.  ಕಾಲ ದೇಶಗಳ ಹಂಗಿಲ್ಲದ ಜೀವಜಗತ್ತಿನ ಗಾಲಿಯನ್ನು ಮುನ್ನಡೆಸುವ ಪ್ರೇಮದ ಕುರಿತು ಬರೆಯದವರಾರು ? ತರ್ಕವನ್ನು ಮೀರಿದ ಪ್ರೀತಿಗೆ ಕಾವ್ಯವೇ ಆಸರೆ. ಪ್ರೇಮದ ನೆನಪುಗಳ ಜತನ ಮಾಡಿಕೊಳ್ಳುವುದೆಂದರೆ ಬದುಕಿಗೊಂದು ಚೈತನ್ಯದ ಬುತ್ತಿ ಕಟ್ಟಿಕೊಂಡಂತೆ.  ಅಂತಹ ಪ್ರೇಮದೀಪದ ಬೆಳಕನ್ನು ಅಂತರಂಗದಲ್ಲಿ ಬಚ್ಚಿಟ್ಟುಕೊಂಡ ಕೆಲವು ಸುಂದರ ಕವಿತೆಗಳು ಇಲ್ಲಿವೆ.

Read More

ಕೆ.ವಿ. ತಿರುಮಲೇಶ್‌ ಅನುವಾದಿಸಿದ ಇಂಗ್ಲಿಷ್‌ ಕವಿ ಹೆರಾಲ್ಡ್‌ ಮೊನ್ರೋನ ಒಂದು ಕವಿತೆ

“ಹೊಳೆವ ಹಾಲಿನ ಬಳೆಯ ಮುದ್ದಾಡುತ್ತದೆ,
ಕ್ಷೀರ ಸಾಗರದಲ್ಲಿ ಗದ್ದ ಅದ್ದುತ್ತದೆ. ಬಾಲ ಬಲು ಬಲಹೀನವಾಗಿ
ಜೋತು ಬೀಳುತ್ತದೆ. ಬಾಗುವ ಒಂದೊಂದೂ ಮೊಣಕಾಲ ಕೆಳಗೆ
ಪ್ರತಿಯೊಂದು ಪಂಜ ಎರಡಾಗಿದೆ.”- ಕೆ.ವಿ. ತಿರುಮಲೇಶ್‌ ಅನುವಾದಿಸಿದ ಇಂಗ್ಲಿಷ್‌ ಕವಿ ಹೆರಾಲ್ಡ್‌ ಮೊನ್ರೋನ ಒಂದು ಕವಿತೆ

Read More

ಮತ್ತೆ ಮಳೆ ಹೊಯ್ಯುತಿದೆ ಎಲ್ಲ ನೆನಪಾಗುತಿದೆ!

ಅನಂತಮೂರ್ತಿ ಬರೆಯುತ್ತಿದ್ದ ಪತ್ರಗಳನ್ನು ನಾನು ಜೋಪಾನವಾಗಿ ಇಡಬೇಕಿತ್ತು. ಎಂಥ ಪತ್ರಗಳವು! ಅವರು ಚೆನ್ನೈ ಹೋಗಿದ್ದಾಗ ಅಲ್ಲಿ ಅನಿರೀಕ್ಷಿತವಾಗಿ ಸುರಿದ ಮಳೆಯನ್ನು ನೆನೆದು ಪುಳಕಿತರಾಗಿ ನನಗೆ ಬರೆದ ಪತ್ರದಲ್ಲಿ ಒಂದು ಕವನವನ್ನೇ ಬರೆದು ಕಳುಹಿಸಿದ್ದರು: `ಮತ್ತೆ ಮಳೆ ಹೊಯ್ಯುತ್ತಿದೆ!’ ಒಮ್ಮೆ `ಓದು’ ಅಂತ ಗೋಪಾಲಕೃಷ್ಣ ಅಡಿಗರ `ಭೂಮಿಗೀತ’ ಕವನವನ್ನು ಕಳುಹಿಸಿಕೊಟ್ಟಿದ್ದರು. ಡಾ. ಪೃಥ್ವೀರಾಜ ಕವತ್ತಾರು ನಿರೂಪಣೆಯ ಎಸ್ತರ್ ಅನಂತಮೂರ್ತಿಯವರ ಆತ್ಮಕತೆ ‘ನೆನಪು ಅನಂತ’ ಕೃತಿಯ ಅಧ್ಯಾಯವೊಂದು ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ