Advertisement
ಕೋಡಿಬೆಟ್ಟು ರಾಜಲಕ್ಷ್ಮಿ

ಮಂಗಳೂರಿನವರಾದ ಕೋಡಿಬೆಟ್ಟು ರಾಜಲಕ್ಷ್ಮಿ ಪತ್ರಕರ್ತೆಯಾಗಿ ಕೆಲಸ ಮಾಡಿದವರು. ‘ಒಂದುಮುಷ್ಟಿ ನಕ್ಷತ್ರ’ ಅವರು ಬರೆದ ಕಥಾ ಸಂಕಲನ. ‘ಅಮ್ಮನ ಜೋಳಿಗೆ’ ಪ್ರಬಂಧ ಸಂಕಲನ.

ಈ ವರ್ಷ ಗೆಜ್ಜೆಯ ಕಲರವ ನಿಲ್ಲದಿರಲಿ

ಕೊರೊನಾ ಜಾಗತಿಕ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಹೇರಿದ ಲಾಕ್ ಡೌನ್ ಸಾಂಸ್ಕೃತಿಕ ಕ್ಷೇತ್ರದ ಮೇಲೆ ಬಲವಾದ ಹೊಡೆತವನ್ನು ನೀಡಿತ್ತು. ಅದು ಅನೇಕ ಕಲಾವಿದರ ಬದುಕನ್ನೇ ಕಸಿದುಕೊಂಡಿತು. ಸಂಗೀತ ಮತ್ತು ಗೆಜ್ಜೆಗಳ ಧ್ವನಿಯು ಆನ್ ಲೈನ್ ನಲ್ಲಿ ಬಂಧಿಯಾಗಿಬಿಟ್ಟಿತು. ತಾಳಗಳಿಗೆ ಕಿವಿಯಾಗುವುದು ಸಾಧ್ಯವಾದರೂ ಪ್ರೋತ್ಸಾಹದ ಚಪ್ಪಾಳೆಗಳು ಶುಷ್ಕವಾಗಿ ಕೇಳಿಸಿದವು. ತಾಳ ಲಯ, ಹಾವ ಭಾವ, ಅಭಿನಯ…

Read More

ಇಡಿಂದಕರೈ ಅಹಿಂಸಾ ಸತ್ಯಾಗ್ರಹಕ್ಕೆ ಹತ್ತು ವರ್ಷ

ತಮಿಳುನಾಡಿನ ರಾಧಾಪುರಂ ಜಿಲ್ಲೆಯ ಇಡಿಂದಕರೈ ಹಳ್ಳಿ ಕಡಲದಂಡೆಯ ಮೇಲಿರುವ, ಬೀಸುಗಾಳಿಗೆ ಮೈ ಒಡ್ಡಿಕೊಂಡ ಸುಂದರ ಊರು. ಕೂಡಂಕುಳಂ ಹಳ್ಳಿಯ ಪಕ್ಕದ ಹಳ್ಳಿ ಇಡಿಂದಕರೈ ಎಂದರೆ ಬೇಗನೇ ನೆನಪಿಗೆ ಬರಬಹುದು. ಮೀನುಗಾರರೇ ಹೆಚ್ಚಾಗಿರುವ ಇಡಿಂದಕರೈ ಊರಿನಲ್ಲಿ, ಅಣುಸ್ಥಾವರವನ್ನು ವಿರೋಧಿಸಿ ಅತೀ ದೀರ್ಘವಾದ ಉಪವಾದ ಸತ್ಯಾಗ್ರಹ ನಡೆದಿತ್ತು. ಆ ಅಹಿಂಸಾ ಸತ್ಯಾಗ್ರಹಕ್ಕೆ ಈಗ ಹತ್ತು ವರ್ಷಗಳು ತುಂಬಿವೆ.
ಹೋರಾಟದ ಹಾದಿಯ ನೆನಪುಗಳನ್ನು ಹೆಕ್ಕಿ ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ

Read More

ನದಿಯಂಚಿನ ನಡಿಗೆ ಕಾಣಿಸುವ ಚಿತ್ರಗಳು

ಕತೆಗಳು ಎಲ್ಲ ಕಡೆಯೂ ಹರಡಿಕೊಂಡಿರಬಹುದು. ಆದರೆ ನದಿಯ ಕತೆಗಳೆಂದರೆ ಅಂತರಂಗವನ್ನು ತೇವವಾಗಿಸುತ್ತವೆ. ನಮ್ಮ ಪುರಾಣ ಕತೆಗಳೂ ನದಿಯ ಸುತ್ತಲೇ ವಿಸ್ತರಿಸಿಕೊಂಡಿವೆ. ಎಲ್ಲದಕ್ಕೂ ಕಾರಣಗಳನ್ನು ಹುಡುಕುವ ಮನುಷ್ಯರು, ನದಿಯನ್ನೂ ತರ್ಕಗಳು ಮತ್ತು ಕಾರಣಗಳ ಆಧಾರದ ಮೂಲಕವೇ ಗ್ರಹಿಸಲು ಪ್ರಯತ್ನಿಸುತ್ತಾರೆ. ನದಿಯೋ ಪ್ರೇಮಿಯ ಆಹ್ಲಾದಕರ ಮನೋಕಾಮನೆಯಂತೆ, ತರ್ಕದ ಹಂಗಿಲ್ಲದೆ ತನ್ನಪಾಡಿಗೆ ತಾನು ಸಾಗುತ್ತಿರುತ್ತದೆ.

Read More

ಸಾರಾ ಉಮ್ಮಾಗೆ ಈಗ ಎಂಭತ್ತೈದು

‘ಚಂದ್ರಗಿರಿಯ ತೀರದಲ್ಲಿ’ ಕೃತಿಯ ಮೂಲಕ ಸಾಹಿತ್ಯ ಪಯಣ ಆರಂಭಿಸಿದ ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ತಮ್ಮ ಎಂಭತ್ತೈದರ ಹರೆಯಲ್ಲಿದ್ದಾರೆ. ಕತೆ, ಕಾದಂಬರಿ, ಅನುವಾದ, ಪ್ರಬಂಧ ಮುಂತಾಗಿ ಅನೇಕ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ ಅವರು ತಮ್ಮ ನಿಲುವಿಗೆ ಎದುರಾದ ಹಲವು ಪ್ರತಿರೋಧಗಳ ನಡುವೆ ಜೀವನ್ಮುಖಿ ಚಿಂತನೆಗಳನ್ನು ಉಳಿಸಿಕೊಂಡವರು. ಈಗ ಸೊಸೆಯ ಆರೈಕೆಯಲ್ಲಿ ಸಮುದ್ರವನ್ನು ನೆನಪಿಸಿಕೊಳ್ಳುತ್ತಾ ಇರುವ ಸಾರಾ ಅವರ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಬರಹ ಇಲ್ಲಿದೆ. 

Read More

ಕಾರುಣ್ಯದ ಕುರಿತು ದೇವನೂರು ಮಾತಿನ ನೆನಪುಗಳು

ಹಿಂಸೆ, ಕ್ಷೋಭೆಗಳೆಂದರೆ ಮನುಷ್ಯನಿಗೆ ಸುಪ್ತ ಮನಸ್ಸಿನಲ್ಲಿ ಬಹಳ ಪ್ರಿಯವಾದ ವಿಷಯವೇನೋ ಎಂಬ ಸಂಶಯ ಕಾಡಲು ಶುರುವಾಗಿದೆ. ಉಣ್ಣಲು, ಆರೋಗ್ಯ ಕಾಪಾಡಿಕೊಳ್ಳಲು ಉಡಲು ಮಹಿಳೆಯರು ನಿರಂತರ ಹೋರಾಟಗಳನ್ನು ನಡೆಸುತ್ತಲೇ ಇರಬೇಕು ಎಂದಾದರೆ, ನಾಗರಿಕತೆಯ ಹೆಜ್ಜೆಗಳು ಮುಂದಡಿ ಇಡುತ್ತಿಲ್ಲವೇ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.ಮನುಷ್ಯ ಹೃದಯದಲ್ಲಿ ಕಾರುಣ್ಯ ಎಂಬ ಆರ್ದ್ರತೆ ಇಲ್ಲದಿದ್ದರೆ ಬದುಕು ನೆಮ್ಮದಿಯನ್ನುಕಂಡುಕೊಳ್ಳುವುದು ಸಾಧ್ಯವಾಗುವುದಿಲ್ಲ.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ