ಹಬ್ಬದ ಮುಖ ತೊಳೆದು ಬಿಂದಿ ಇಡುವ ‘ಅವಳು’: ಸದಾಶಿವ ಸೊರಟೂರು ಬರಹ
ನಾನಿನ್ನು ಎದ್ದು ಆಕಳಿಸುತ್ತಾ ಕೂತಿರುವಾಗ ಈ ಹೆಣ್ಣು ಮಕ್ಕಳಿಗೆ ಏನಾಗಿದೆ? ಈ ಬದುಕು ಎಂದೂ ಕೂಡ ನಮಗೆ ಸುಸ್ತನ್ನೇ ದಯಪಾಲಿಸಿಯೇ ಇಲ್ಲವೇನೊ ಎನ್ನುವಂತೆ ಯಾಕಿಷ್ಟು ಕಳೆಕಳೆಯಾಗಿದ್ದಾರೆ. ಒಬ್ಬೊಬ್ಬರು ಒಂದೊಂದು ಹಬ್ಬದಂತೆ ಓಡಾಡುತ್ತಿದ್ದಾರೆ. ಈ ಹಬ್ಬದ ದಿನ ಒಬ್ಬೊಬ್ಬ ಹೆಣ್ಣು ಮಗಳು ನಡೆದಾಡುವ ಒಂದೊಂದು ತೇರೇನೊ ಅನಿಸುತ್ತದೆ. ಈ ಹಬ್ಬವನ್ನು, ಹಬ್ಬದ ಸಂಭ್ರಮವನ್ನು ಹೆಣ್ಣು ಮಕ್ಕಳು ವಶಪಡಿಸಿಕೊಂಡರಾ?
ಏನೆಲ್ಲದರ ನಡುವೆ ಬದುಕನ್ನೂ, ಆಗಾಗ ಬರುವ ಹಬ್ಬಗಳನ್ನೂ ಸಮನಾಗಿ ತೂಗಿಸಿಕೊಂಡು ಹೋಗುವ ಹೆಣ್ಣುಮಕ್ಕಳ ಕುರಿತು ಸದಾಶಿವ ಸೊರಟೂರು ಬರಹ ನಿಮ್ಮ ಓದಿಗೆ