ಸಂಗೀತ ರವಿರಾಜ್, ಚೆಂಬು ಬರೆದ ಎರಡು ಕವಿತೆಗಳು
“ಮಿರ ಮಿರ ಮಿಂಚುವ
ನುಣ್ಣಗಿನ ಗುಂಡಗಿನ
ಅಂದದ ಈ ಕಲ್ಲಿಗೆ
ಲೋಕ ಕಂಡ ಮಾತೆಯರ
ಮನಸ್ಸೆಲ್ಲ ತಿಳಿದೂ
ಗುಟ್ಟನಡಗಿಸಿ ಬುದ್ಧನಂತಿದೆ!
ಅಹಲ್ಯೆಯು ಒಂದೊಮ್ಮೆ ಶಿಲೆಯಾಗಿರಲಿಲ್ಲವೆ?”- ಸಂಗೀತ ರವಿರಾಜ್, ಚೆಂಬು ಬರೆದ ಎರಡು ಕವಿತೆಗಳು
ಸಂಗೀತಾ ರವಿರಾಜ್ ಅವರು ಮೂಲತಃ ಕೊಡಗಿನವರು. ಎಂ.ಎ ಅರ್ಥಶಾಸ್ತ್ರ ಬಿ.ಇಡಿ ಪದವೀಧರರಾಗಿದ್ದು, ಹಲವು ಪತ್ರಿಕೆಗಳಲ್ಲಿ ಇವರ ಕವಿತೆಗಳು, ಪ್ರಬಂಧಗಳು ಮತ್ತು ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಸಂಗೀತಾ ಅವರು ‘ಚೆಂಬು ಸಾಹಿತ್ಯ ವೇದಿಕೆ’ ಯನ್ನು ಹುಟ್ಟುಹಾಕಿದ್ದಾರೆ. ಕಪ್ಪು ಹುಡುಗಿ(ಕವನ ಸಂಕಲನ), ಕಲ್ಯಾಣ ಸ್ವಾಮಿ(ಕಾದಂಬರಿ), ನಿರುತ್ತರ(ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು.
Posted by ಸಂಗೀತ ರವಿರಾಜ್ ಚೆಂಬು | Mar 6, 2024 | ದಿನದ ಕವಿತೆ |
“ಮಿರ ಮಿರ ಮಿಂಚುವ
ನುಣ್ಣಗಿನ ಗುಂಡಗಿನ
ಅಂದದ ಈ ಕಲ್ಲಿಗೆ
ಲೋಕ ಕಂಡ ಮಾತೆಯರ
ಮನಸ್ಸೆಲ್ಲ ತಿಳಿದೂ
ಗುಟ್ಟನಡಗಿಸಿ ಬುದ್ಧನಂತಿದೆ!
ಅಹಲ್ಯೆಯು ಒಂದೊಮ್ಮೆ ಶಿಲೆಯಾಗಿರಲಿಲ್ಲವೆ?”- ಸಂಗೀತ ರವಿರಾಜ್, ಚೆಂಬು ಬರೆದ ಎರಡು ಕವಿತೆಗಳು
Posted by ಸಂಗೀತ ರವಿರಾಜ್ ಚೆಂಬು | Jan 10, 2024 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
ಇಲ್ಲಿನ ಕವಿತೆಗಳಲ್ಲಿ ಅತಿರಂಜಿತ ಕಲ್ಪನೆಗಳಿಗಿಂತ ತನ್ನ ನಡುವಿನ ಬದುಕನ್ನೇ ಭಿನ್ನವಾಗಿ ಅವಲೋಕಿಸುತ್ತ, ಆ ಮೂಲಕವೇ ತನ್ನ ಭಾವನೆಗಳನ್ನು ಮಿಳಿತಗೊಳಿಸಿ ಕವಿತೆಯಲ್ಲಿ ಸ್ಪುರಿಸುತ್ತಾರೆ. ಕಾವ್ಯದಿಂದಲೇ ಏನನ್ನೋ ಗೆಲ್ಲಬಯಸುತ್ತೇನೆ ಎಂಬ ಸಣ್ಣ ಆಸೆಯಿಂದ, ಜೊತೆಗೆ ಆಸ್ಥೆಯಿಂದ ಹೇಳುವಂಥದನ್ನು ಹೇಳಿಕೊಂಡಿದ್ದಾರೆ. ಮಾತಿಗಿಂತ ಕಾವ್ಯವೇ ತನ್ನ ಅಭಿವ್ಯಕ್ತಿ ಮಾಧ್ಯಮ ಎನಿಸುವಂತಹ ಜೀವಂತಿಕೆಯ ಸಾಲುಗಳು ಕವಿತೆಗಳಲ್ಲಿವೆ.
ಜಗದೀಶ್ ಜೋಡುಬೀಟಿ ಕವನ ಸಂಕಲನ “ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ” ಕುರಿತು ಸಂಗೀತ ರವಿರಾಜ್, ಚೆಂಬು ಬರಹ
Posted by ಸಂಗೀತ ರವಿರಾಜ್ ಚೆಂಬು | Nov 28, 2023 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
ಇಲ್ಲಿರುವ ನಾಲ್ಕು ಕಥೆಗಳು ಕಟ್ಟುಕಥೆಗಳೆಂದು ನಮಗನಿಸುವುದೇ ಇಲ್ಲ. ಗ್ರಾಮ ಜೀವನವೇ ಹೀಗೆ…. ನೀರಿಗೆಂದು ಮೈಲುದೂರ ಕೊಡಪಾನ ಹಿಡಿದು ಸಾಗಿ ಮನೆಗೆ ನೀರು ತುಂಬಬೇಕು. ಮತ್ತೆ ಮನೆಯಿಂದ ಚೆಂಬು ಹಿಡಿದುಕೊಂಡು ಇನ್ನೆಲ್ಲಿಗೋ ನಡೆದು ಹೋಗುವಂತಹ ವಿಪರ್ಯಾಸಗಳು ಹಳ್ಳಿಯಲ್ಲಿ ಮಾತ್ರವೇ ನಡೆಯುತ್ತಿತ್ತು. ಇದು ಹಳ್ಳಿ ಬದುಕಿನ ನೋವಿನ ಚಿತ್ರಣ. ಕಥೆಗಾರರ ಬಾಲ್ಯವೇ ಇಲ್ಲಿನ ಕಥೆಗಳಿಗೆ ಸ್ಪೂರ್ತಿ, ಪ್ರೇರಣೆ ಕೊಟ್ಟಿರಲೂಬಹುದು. ಏಕೆಂದರೆ ಹಳ್ಳಿಯ ಬಾಲ್ಯವೆಂಬುದು ಅನುಭವಗಳನ್ನು ಮೊಗೆ ಮೊಗೆದು ಕೊಡುವ ತಾಣ.
ಮಲ್ಲಿಕಾರ್ಜುನ ತೂಲಹಳ್ಳಿ ಕಥಾ ಸಂಕಲನ “ಅಗಸ್ತ್ಯ ನಕ್ಷತ್ರ” ಕುರಿತು ಸಂಗೀತಾ ರವಿರಾಜ್ ಚೆಂಬು ಬರಹ
Posted by ಸಂಗೀತ ರವಿರಾಜ್ ಚೆಂಬು | Nov 21, 2023 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
ಕಾವ್ಯ ಸೃಷ್ಠಿಯಲ್ಲಿ ಮಾಗುತ್ತ ಸಾಗುವುದೇ ಕವಿತೆ ಉತ್ತಮವಾಗುತ್ತ ಹೋಗುವುದರ ಲಕ್ಷಣ. ಅದು ಸಿದ್ಧಿಸಿದ್ದು ಇಲ್ಲಿಯೇ ನಮಗೆ ಸಂಕಲನದುದ್ದಕ್ಕೂ ತೋಚಿದಂತಾಗುತ್ತದೆ. ಬರೆದ ಕಾವ್ಯವೆಂಬ ಹೊರೆಯನ್ನು ಮೆಲ್ಲನೆ ಇಳಿಬಿಟ್ಟು ಹಗುರಾಗಿ, ಮತ್ತೆ ಹೊಚ್ಚ ಹೊಸ ಬಹುದೊಡ್ಡ ಹೊರೆ ಹೊತ್ತು ಮತ್ತೆ ಹಗುರಾಗುತ್ತಾರೆ ಎಂಬಂತೆ ನಮಗಿಲ್ಲಿ ಭಾಸವಾಗುತ್ತದೆ. ಪ್ರೇಮವೆನುದರ ಕುರಿತು ಹಲವು ರೀತಿಯ ಭಿನ್ನ ಭಿನ್ನ ವ್ಯಾಖ್ಯಾನಗಳು ನಮ್ಮನ್ನು ದಂಗುಬಡಿಸುತ್ತವೆ.
ನಂದಿನಿ ಹೆದ್ದುರ್ಗ ಕವನ ಸಂಕಲನ “ಒಂದು ಆದಿಮ ಪ್ರೇಮ” ಕುರಿತು ಸಂಗೀತ ರವಿರಾಜ್ ಚೆಂಬು ಬರಹ
Posted by ಸಂಗೀತ ರವಿರಾಜ್ ಚೆಂಬು | Apr 11, 2023 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
ಸ್ತ್ರೀ ಬದುಕಿನ ಅಗಾಧತೆ ಮತ್ತು ಸ್ತ್ರೀಯ ಇತಿಮಿತಿಯೊಳಗಿನ ಬದುಕು ಅನಾವರಣಗೊಳ್ಳುವ ಕವಿತೆಗಳಾದ ಹೂವಿಡುವಷ್ಟೆ ನಿಧಾನವಾಗಿ, ನಾವು ಸ್ವಲ್ಪ ಹೀಗೆ, ಆಸೀಫಾ, ಅವಳು, ಅಡುಗೆಯಾಟದ ಹುಡುಗಿ ಮುಂತಾದ ಕವಿತೆಗಳು ಮಹಿಳೆಯ ಅಂತರಂಗವನ್ನು ಬಿಂಬಿಸುತ್ತವೆ. ಕವಯತ್ರಿ ಆಶಾ ಅಭಿಮಾನದಿಂದ ಅಭಿವ್ಯಕ್ತಿ ಪಡಿಸಿದ ಸ್ತ್ರೀಯ ಬಗೆಗಿನ ಈ ಸಾಲು ಪ್ರತಿ ಹೆಂಗಳೆಯರ ಹೆಮ್ಮೆ. “ಹೋಗಲಿ ಬಿಡಿ ನೀವವಳನ್ನು ಆಪಾದ ಮಸ್ತಕವೇ/ ನೋಡಿದುದು ಸರಿಯೇ ಏಕೆಂದರೆ/ ದೇವತೆಯನ್ನು ಹಾಗೆಯೇ ನೋಡಬೇಕಂತೆ”
ಆಶಾ ಜಗದೀಶ್ ಕವನ ಸಂಕಲನ “ನಡು ಮಧ್ಯಾಹ್ನದ ಕಣ್ಣು” ಕುರಿತು ಸಂಗೀತ ರವಿರಾಜ್ ಚೆಂಬು ಬರಹ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ[latest_post_widget]
