Advertisement

ಸುಧಾ ಆಡುಕಳ

ಗಂಟೆಹಳ್ಳಿ ಗಿಡ, ಕಾಡಿನಲ್ಲಿ ಒಂದಿರುಳು ಮತ್ತು ತಿಮ್ಮಣ್ಣನ ಮಳಕ: ಎಸ್. ಗಂಗಾಧರಯ್ಯ ಅನುಭವ ಕಥನ

ಮೆಲ್ಲಗೆ ಮರ ಹತ್ತಿದೆವು. ನಿದ್ದೆ ಅನ್ನೋದು ಸುತರಾಂ ಹತ್ತಿರ ಸುಳಿಯುತ್ತಿಲ್ಲ. ಕಾಡಿನ ಸಣ್ಣಪುಟ್ಟ ಪ್ರಾಣಿ ಪಕ್ಷಿ ಕ್ರಿಮಿಕೀಟಗಳು ತಮ್ಮ ದಿನಚರಿ ಶುರುವಿಟ್ಟುಕಂಡಿದ್ದವು. ಅಬ್ಬಾ ಆ ಕತ್ತಲೆ. ಆ ಆತಂಕದ ಆ ಚಣಗಳು. ಈಗಲೂ ಮೈ ಜುಮ್ ಅನ್ನುತ್ತೆ. ಹಂಗೆ ಕೂತಿದ್ದ ನನಗೆ ಅದ್ಯಾವ ಮಾಯದಾಗೆ ನಿದ್ದೆ ಬಂದಿತ್ತೋ ಕಾಣೆ ಏನಾಗುತ್ತಿದೆ ಅಂತ ಗೊತ್ತಾಗೋದರೊಳಗೆ ಕೊಂಬೆಯನ್ನು ಅವುಚಿಕಂಡು ಕೂತಿದ್ದ ನಾನು ಏಕ್ದಂ ಕೆಳಕ್ಕೆ ಬಿದ್ದುಬಿಟ್ಟೆ. ಹಂಗೆ ಬಿದ್ದ ರಭಸಕ್ಕೆ ಚೀರಾಡುವುದರೊಳಗೆ ಕೆಳಗಿದ್ದ ಕೂಳೆಯೊಂದು ಎಡಗಾಲಿನ ಮಾಂಸಖಂಡಕ್ಕೆ ದೊಸಕ್ಕನೆ ಹೊಕ್ಕಂಡುಬಿಟ್ಟಿತ್ತು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಇಪ್ಪತ್ತನೆಯ ಕಂತು

Read More

ಅಜ್ಜನ ಕೆರೆಯ ಹಾಲುವಾಣದ ತೆಪ್ಪ ಮತ್ತು ಮಲ್ಲಾಘಟ್ಟ ಕೆರೆಯ ನಾಡದೋಣಿ: ಎಸ್.ಗಂಗಾಧರಯ್ಯ ಅನುಭವ ಕಥನ

ಅದೇನು ಅನಿಸಿತೋ ಏನೋ ಕೃಷ್ಣಮೂರ್ತಿ ನಮ್ಮ ಕಾಲುಗಳ ನಡುವೆ ಬಿದ್ದಿದ್ದ ಹುಟ್ಟುಗೋಲನ್ನು ಕೈಗೆತ್ತಿಕೊಂಡು ದೋಣಿಯ ಪಕ್ಕದ ನೀರಿನಲ್ಲಿ ಕೊಂಚ ಮುಳುಗಿಸಿ ಅದರಿಂದ ಮೆಲ್ಲಗೆ ನೀರನ್ನು ಹಿಂದೆ ಮುಂದೆ ತಳ್ಳಿದ. ಆಗ ದೋಣಿಯ ಮುಮ್ಮುಖ ಚಲನೆ ನಿಂತು ಅದು ಇದ್ದಲ್ಲಿಯೇ ಮೆಲ್ಲನೆ ಸುತ್ತ ಹತ್ತಿತು. ಇದನ್ನು ಕಂಡು ಜೀವ ಬಂದವನಂತೆ ಅವನು ಆ ಹುಟ್ಟಿನಿಂದ ವಿರುದ್ಧ ದಿಕ್ಕಿನಲ್ಲಿ ನೀರನ್ನು ತಳ್ಳಿದ. ದೋಣಿಯ ಗತಿ ಮತ್ತೆ ಬದಲಾಯ್ತು. ಮತ್ತೇನೋ ಹೊಳೆದವನಂತೆ ಹಂಗೆಯೇ ದೋಣಿಯ ಇಕ್ಕೆಲಗಳಲ್ಲೂ ಹುಟ್ಟು ಹಾಕತೊಡಗಿದ.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹತ್ತೊಂಭತ್ತನೆಯ ಕಂತು

Read More

ಬುಷ್ ರೇಡಿಯೋ, ಪಾಠದ ಮನೆ ಮತ್ತು ಪ್ರತಿದಿನದ ಸೂರ್ಯ: ಎಸ್. ಗಂಗಾಧರಯ್ಯ ಅನುಭವ ಕಥನ

ಇಂಥ ಶಿವಮೂರ್ತಿ ಮೇಷ್ಟ್ರು ತಾವು ಹೇಳಿಕೊಡುತ್ತಿದ್ದ ಪಾಠಕ್ಕೆ ಯಾವ ಮಕ್ಕಳಿಂದಲೂ ಎಂದೂ ದುಡ್ಡನ್ನು ತಗೊಳ್ಳುತ್ತಿರಲಿಲ್ಲ. ಬದಲಿಗೆ ಮಕ್ಕಳು ತಮ್ತಮ್ಮ ಮನೆಯಿಂದ ಧವಸ ಧಾನ್ಯಗಳನ್ನಷ್ಟೇ ತಂದುಕೊಡಬೇಕಿತ್ತು. ಅದು ಇಂಥದೇ ಅಂತಿಲ್ಲ. ಇಷ್ಟೂ ಅಂತಾನೂ ಇರುತ್ತಿರಲಿಲ್ಲ. ರಾಗಿ ಅಂದರೆ ರಾಗಿ. ಜೋಳ ಅಂದರೆ ಜೋಳ. ಭತ್ತ ಅಂದರೆ ಭತ್ತ. ತಿಂಗಳಿಗೊಮ್ಮೆ ಅಥವಾ ನಮಗೆ ಯಾವಾಗ ಸಾಧ್ಯವಾಗುತ್ತಿತ್ತೋ ಇಲ್ಲಾ ನಮ್ಮ ಮನೆಗಳಲ್ಲಿ ಯಾವಾಗ ಕೊಡುತ್ತಿದ್ದರೋ ಆಗ ಅದನ್ನವರಿಗೆ ಹೊತ್ತು ತಲುಪಿಸುತ್ತಿದ್ದೆವು. ಪಾಠದ ಮನೆಯ ಮೂಲೆಯೊಂದರಲ್ಲಿ ಹೀಗೆ ತಂದ ಧವಸಗಳನ್ನು ಹಾಕಲು ಚೀಲಗಳಿರುತ್ತಿದ್ದವು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹದಿನೆಂಟನೆಯ ಕಂತು

Read More

ಪುಟ್ಟಕ್ಕಜ್ಜಿ ಮತ್ತು ಸಲೀಂ ಅಲಿಗಳು: ಎಸ್. ಗಂಗಾಧರಯ್ಯ ಅನುಭವ ಕಥನ

ಬೆಳಗು ಬೈಗುಗಳಲ್ಲಿ ಥರಂಥರದ ಹಕ್ಕಿ ಹಿಂಡುಗಳು. ತೋಟಾಂತ ತೋಟವನ್ನೆಲ್ಲಾ ಅವುಗಳ ಚಿಲಿಪಿಲಿ ಮುಳುಗೇಳಿಸುತ್ತಿತ್ತು. ಆ ಹೊತ್ತಲ್ಲಿ ಮೂರ್ತಿ ಅನ್ಯಮನಸ್ಕನಾಗಿಬಿಡುತ್ತಿದ್ದ. ತೋಟದ ಬದುಗಳಲ್ಲಿ ಅಡ್ಡಾಡುತ್ತಿದ್ದ. ಆ ಚಿಲಿಪಿಲಿ ಸದ್ದಿಗೆ ರೋಮಾಂಚನಗೊಳ್ಳುತ್ತಿದ್ದ. ಹಂಗೆ ಹಕ್ಕಿಗಳ ಕೂಗನ್ನು ಎದೆಯ ಕೂಗಾಗಿಸಿಕೊಂಡಿದ್ದ ಮೂರ್ತಿ ಹಲವು ಹಕ್ಕಿಗಳು ಕೂಗುವುದನ್ನು ಒಂಚೂರೂ ತಪ್ಪದಂತೆ ಅನುಕರಿಸುತ್ತಿದ್ದ. ಅವುಗಳಲ್ಲಿ ಗಿಳಿಗಳು, ಗುಚ್ಚಕ್ಕಿ ಹಾಗೂ ಗೂಬೆಗಳ ಕೂಗು ಥೇಟ್ ಅವುಗಳಂತೆಯೇ ಇರುತ್ತಿತ್ತು. ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹದಿನೇಳನೆಯ ಕಂತು

Read More

ವೈಕಂ, ದೇವರಾಜ ಅರಸು, ಮೇಷ್ಟ್ರು ಅರುಣ್‌ದೇವ್, ಪ್ರೊಫೆಸರ್ ಎಂ.ಡಿ.ಎನ್ ಮತ್ತು `ದ್ಯಾವನೂರು’: ಎಸ್. ಗಂಗಾಧರಯ್ಯ ಅನುಭವ ಕಥನ

ತುಂಬಾ ಹತ್ತಿರಕ್ಕೆ ಹೋಗಿ ನಿಂತು ಕತ್ತೆತ್ತಿ ನೋಡಿ `ನಮಸ್ತೆ ಸರ್’ ಅಂದೆ. ಮುಗುಳ್ನಕ್ಕರು. ನಂತರ ಅವರು ತಮ್ಮೆದುರಿಗೆ ರಸ್ತೆ ಪಕ್ಕದಲ್ಲಿದ್ದ ಚರಂಡಿಯ ಬಳಿ ಬಂದು ನಿಂತು `ಇಲ್ಲೊಬ್ರು ಎಳ್ನೀರು ಕೊಚ್ತಾ ಇದ್ರಲ್ಲ, ಅವ್ರು ಇವತ್ತು ಬಂದಿಲ್ವೇನಪ್ಪ’ ಅಂತ ಆ ವ್ಯಕ್ತಿಯ ಹೆಸರಿಡಿದು ಕೇಳಿದರು. ಅವರು ಕೇಳಿದ ವ್ಯಕ್ತಿಯ ಹೆಸರು ನನಗೀಗ ಮರೆತುಹೋಗಿದೆ. ಹೌದು ನಾನೂ ನೋಡಿದ್ದೆ. ಅಲ್ಲೊಬ್ಬರು ಹಳ್ಳಿಯಿಂದ ಎಳನೀರು ತಂದು ಮಾರಾಟ ಮಾಡುತ್ತಿದ್ದರು.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ