ಆಸ್ಟ್ರೇಲಿಯಾದ ಪ್ರವಾಸಿಗರ ಕನಸು-ಕನವರಿಕೆಗಳು
ಪ್ರವಾಸಿಗರಿಗೆ, ಕ್ಯಾಂಪಿಗರಿಗೆ, ಹೇಳಿ ಮಾಡಿಸಿದ ಚಳಿಗಾಲವಿದು. ಕಳೆದ ಕೆಲ ವರ್ಷಗಳಿಗಿಂತಲೂ ಈ ಬಾರಿ ಅಧಿಕ ಚಳಿಯಿದೆ. ಹಾಗಾಗಿ ಸಮುದ್ರತಟದಲ್ಲಿರಲು ಜನ ಹಾತೊರೆಯುತ್ತಾರೆ. ಅದು ನಿಜವೆಂಬಂತೆ ರಾಣಿರಾಜ್ಯದ ದಕ್ಷಿಣ-ಪೂರ್ವ ಭಾಗದ ಪ್ರತಿಯೊಂದು ನಗರಪಾಲಿಕೆಯೂ ತಮ್ಮಲ್ಲಿನ ಪ್ರವಾಸಿ ಸ್ಥಳಗಳನ್ನು ಪ್ರಚಾರ ಪಡಿಸಲು ಬಲು ಆಕರ್ಷಕವಾದ ಜಾಹಿರಾತುಗಳನ್ನು ಹಾಕುತ್ತಿದ್ದಾರೆ. ಶಾಲೆಗಳಿಗೆ ಟರ್ಮ್ ೨ ನಂತರದ ಎರಡು ವಾರಗಳ ರಜೆ ಆರಂಭವಾಗಿದೆ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

