Advertisement

Category: ಅಂಕಣ

ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಯೋಣ: ಡಾ. ವಿನತೆ ಶರ್ಮಾ ಅಂಕಣ

ಹೋದ ವಾರ ಕ್ವೀನ್ಸ್‌ಲ್ಯಾಂಡ್ ರಾಜ್ಯದಲ್ಲಿ ಚುನಾವಣೆ ನಡೆದು ಆಗ ಆಡಳಿತ ನಡೆಸುತ್ತಿದ್ದ ಲೇಬರ್ ಪಕ್ಷ ಸೋತು, ಬಹುಮತ ಪಡೆದ ಲಿಬೆರಲ್ ಪಕ್ಷ ಅಧಿಕಾರಕ್ಕೆ ಬಂತು. ಹೊಸದಾಗಿ ತಮ್ಮ ಸರಕಾರವನ್ನು ರಚಿಸುತ್ತಾ, ಸಂಪುಟ ಸಚಿವರನ್ನು ಆಯ್ಕೆ ಮಾಡಿದ್ದ ಹೊಸ ಮುಖ್ಯಮಂತ್ರಿ ಡೇವಿಡ್ ಕ್ರಿಸ್ಟಫಲಿ ನಿನ್ನೆ ನಡೆದ ಸಮಾರಂಭದಲ್ಲಿ ಹಾಜರಿದ್ದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಯಲ್ಲಮ್ಮ ಮತ್ತು ಮೀರಮ್ಮ…. ಏನೀ ಬಂಧ… ಅನುಬಂಧ…..!: ಎಲ್.ಜಿ.ಮೀರಾ ಅಂಕಣ

ಕಾಗುಣಿತ, ಎರಡು ಅಕ್ಷರದ ಪದ, ಮೂರು ಅಕ್ಷರದ ಪದ, ಚಿಕ್ಕ ಚಿಕ್ಕ ವಾಕ್ಯ ….. ಹೀಗೆ ಮುಂದುವರಿಯಿತು ಪಾಠ. ಈಗಲೂ ವಿಘ್ನಗಳು ಬರುತ್ತಿದ್ದವು. ಆದರೆ ಅದರ ನಡುವೆಯೂ ಯಲ್ಲಮ್ಮ ಒದು, ಬರಹ ಮುಂದುವರಿಸಿದರು. ಸಾವಿರ ರೂಪಾಯಿ ಕರಾರು ನನಗೂ ತುಸು ಧೈರ್ಯ ಕೊಡುತ್ತಿತ್ತು. ನಾನು ಅಲ್ಪ ಪ್ರಾಣ, ಮಹಾ ಪ್ರಾಣ, ಒತ್ತು, ದೀರ್ಘ, ಉಚ್ಚಾರ, ಉಕ್ತ ಲೇಖನ ಅಂತ ತಲೆ ತಿನ್ನುತ್ತಿದ್ದರೆ….
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐದನೆಯ ಬರಹ

Read More

ಜೀವಕ್ಕಿಂತ ದೊಡ್ದು ಯಾವ್ದು?: ಸುಧಾ ಆಡುಕಳ ಅಂಕಣ

ಗುಲಾಬಿಯ ಸಾವಿನಿಂದಾಗಿ ಡಾಕ್ಟರಮ್ಮನಿಗೆ ಹೊಳೆಸಾಲಿನ ಸ್ಥಿತಿಗತಿಯ ಬಗ್ಗೆ ಒಂದಿಷ್ಟು ಅರ್ಥವಾಗಿತ್ತು. ಅವರಲ್ಲಿ ಅರಿವನ್ನು ಮೂಡಿಸುವುದು ರೋಗಿಗಳಿಗೆ ಚಿಕಿತ್ಸೆ ನೀಡುವಷ್ಟೇ ಮಹತ್ವದ ಕಾರ್ಯವೆಂದು ತಿಳಿದ ಅವರು ಮಾಸ್ರ‍್ರು ಕರೆದಾಗ ದೂಸರಾ ಮಾತನಾಡದೇ ಬರಲೊಪ್ಪಿದ್ದರು. ಸೇರಿದ್ದ ಎಲ್ಲ ಅಮ್ಮಂದಿರಿಗೆ ಅರ್ಥವಾಗುವ ಭಾಷೆಯಲ್ಲಿ ಮುಟ್ಟು, ಕಿಟ್ಟುಗಳ ಒಳಗುಟ್ಟುಗಳನ್ನು ಬಿಡಿಸಿ ಹೇಳಿದರು. ಮುಟ್ಟೆಂದು ಮುಟ್ಟದೇ ಮೀನಮೇಷ ಎಣಿಸಿ ಆಸ್ಪತ್ರೆಗೆ ತರಲು ತಡವಾಗಿ ಅಸುನೀಗಿದ ಗುಲಾಬಿಯ ನೆನಪಿನಲ್ಲಿ ಒಂದಿಷ್ಟು ಹೊತ್ತು ಮೌನಪ್ರಾರ್ಥನೆ ಮಾಡಿಸಿ ಅಗಲಿದ ಜೀವದ ಘನತೆಯನ್ನು ಎತ್ತಿಹಿಡಿದರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More

ಇಲ್ಲಿ ಎಲ್ಲ ಥರದವರೂ ಇದ್ದಾರೆ…: ಎಸ್ ನಾಗಶ್ರೀ ಅಜಯ್ ಅಂಕಣ

ಇದು ಸರಿತಪ್ಪಿನ ತಕ್ಕಡಿಯಲ್ಲಿ ತೂಗಲಾರದ, ತೂಗಬಾರದ ವಿಷಯ. ವಿಧಿ ಒಬ್ಬೊಬ್ಬರ ಪಾಲಿಗೆ ನೀಡಿದ ಷಡ್ರಸಗಳ ಭೋಜನ. ಅವರುಂಡ ಸಿಹಿ-ಕಹಿ-ಹುಳಿ- ಒಗರು ಅವರಿಗಷ್ಟೇ ವೇದ್ಯ. ಬಹಳಷ್ಟು ಸಲ ನಾವು ದೂರ ನಿಂತು ಕಂಡಿದ್ದರ ಬಗ್ಗೆ, ಅನಿಸಿದ್ದರ ಬಗ್ಗೆ ಆತ್ಮವಿಶ್ವಾಸದಿಂದ ನಿರ್ಣಯಗಳನ್ನು ಹೊರಡಿಸುತ್ತೇವೆ. ದುಡ್ಡು ದುಡ್ಡು ಅಂತ ಸಾಯ್ತಾನೆ‌. ಹೋಗುವಾಗ ಹೊತ್ಕೊಂಡು ಹೋಗುವ ಹಾಗಿದ್ದರೆ ಇನ್ನು ಹೇಗಾಡ್ತಿದ್ದನೋ ಅಂದವರೆ ಚಿಲ್ಲರೆಗಾಗಿ ತಳ್ಳುಗಾಡಿಯವನ ಬಳಿ ಗುದ್ದಾಡುತ್ತಾರೆ. ಮಕ್ಕಳಿಗೆ ಸಂಸ್ಕಾರ ಕಲಿಸಿಲ್ಲ ಎಂದ ಮಹಾಮಾತೆಯ ಮಕ್ಕಳು ಬಂದವರೆದುರೇ ಕಾಲುಚಾಚಿ ಕೂತು, ಮೂತಿ ತಿರುವುತ್ತಾರೆ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ ಬರಹ ನಿಮ್ಮ ಓದಿಗೆ

Read More

ಅನಿವಾಸಿಗಳಿಗೆ “ಇಳೆಯ” ಸಂಗೀತದ ಹಿತ: ಡಾ. ವಿನತೆ ಶರ್ಮಾ ಅಂಕಣ

ಬ್ಯಾಂಡ್ ಹೊಂದಿರುವ ಸಂಗೀತ ವಾದ್ಯಗಳ ವೈವಿಧ್ಯತೆ, ತಬಲಾ ಬಾರಿಸುವ ನಿಪುಣತೆ, ಕೊಳಲು ಊದುವ ಮಾಧುರ್ಯ, ವಯಲಿನ್ ನುಡಿಸುವ ತನ್ಮಯತೆ, ಕೀಬೋರ್ಡ್ ಮೇಲೆ ನಲಿದಾಡುವ ಬೆರಳುಗಳ ಚಾಕಚಕ್ಯತೆ, ಎಲ್ಲವೂ ಚೊಕ್ಕವಾಗಿ ಚೆಂದೆನಿಸಿತ್ತು. ನಾನು ಇದೆ ಮೊದಲ ಬಾರಿ ಎಲೆಕ್ಟ್ರಿಕ್ ತಬಲಾ ನೋಡಿದ್ದು, ಬೆರಗಾಗಿದ್ದು. ಅದನ್ನು ಬಾರಿಸುತ್ತಿದ್ದ ಯುವಕ ಕಾರ್ಯಕ್ರಮವನ್ನು ನಿರ್ದೇಶಿಸುತ್ತಿದ್ದ ಕೂಡ. ಅವಲ್ಲದೆ, ಇನ್ನಿಬ್ಬರು ಎರಡು ಶಾಸ್ತ್ರೀಯ ತಬಲಾಗಳನ್ನೂ ಬಾರಿಸುತ್ತಿದ್ದರು. ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ