“ಏನು ಚಂದಮಾಮ ಕಥೆ ಹೇಳ್ತಿದೀಯಾ?”: ವಿನಾಯಕ ಅರಳಸುರಳಿ ಅಂಕಣ
ಈ ಅವಾಂತರಗಳೆಲ್ಲಾ ಏನೇ ಆದರೂ ಬರೆಯಬೇಕು ಎಂಬ ಸ್ವಸ್ಥ ಹವ್ಯಾಸವನ್ನು ಮೊಟ್ಟಮೊದಲ ಬಾರಿಗೆ ಅದೆಷ್ಟೋ ಮಕ್ಕಳ ಎದೆಯಲ್ಲಿ ಬಿತ್ತಿದ, ಕೈ ಹಿಡಿದು ಬರೆಸಿದ, ಬರೆದಿದ್ದಕ್ಕೊಂದು ವೇದಿಕೆ ಕಲ್ಪಿಸಿದ ಶ್ರೇಯ ಈ ಎಲ್ಲ ಮಕ್ಕಳ ಪತ್ರಿಕೆಗಳಿಗೇ ಸಲ್ಲಬೇಕು. ಅವರಿಗೆ ಇಷ್ಟವಾದ ಪಾತ್ರಗಳನ್ನು ಸೃಷ್ಟಿಸಿ ಅವುಗಳ ಮುಖಾಂತರ ವಿನೋದಮಯವಾದ ಕಥೆಗಳನ್ನು ಹೆಣೆದು, ಅದರೊಳಗೇ ಕಾಣದಂತೆ ನೀತಿಗಳನ್ನು ಬೆರೆಸಿ ಉಣಬಡಿಸುತ್ತಿದ್ದ ಈ ಪತ್ರಿಕೆಗಳು ಓದಿದವರ ಮನಸ್ಸಿನಲ್ಲಿ ಇಂದಿಗೂ ಉಳಿದಿವೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”
