Advertisement

Category: ಅಂಕಣ

ಲೋಕದೃಷ್ಟಿಯೂ ಲೋಕಾ ರೂಢಿಗಳು: ಲಿಂಗರಾಜ ಸೊಟ್ಟಪ್ಪನವರ್‌ ಅಂಕಣ

ಸಿಕ್ಕೊಂಡು ಸೀರಿ ಉಟ್ಕಂಡಿಯವೂ ಹುಷಾರು..: ಮನೆಯ ಹಿರಿಯ ಹೆಂಗಸರು ಹಿರಿಯರಿಗೆ ಹೇಳಿ ಕಳಿಸುವ ಅತಿ ಎಚ್ಚರಿಕೆಯ ಮಾತು ಇದು. ಹಲವು ನೆರಿಗೆಗಳನ್ನು ಸೀರೆಗೆ ಆಧ್ಯಾರೋಪಿಸಿದಂತಹ ಕಟು ಎಚ್ಚರ ಇಲ್ಲಿ ಸಂಕೇತದಂತೆ ಇದೆ. ಎಡವದಿರುವ ಜಾರದಿರುವ ಎಚ್ಚರ ಹೆಜ್ಜೆ ಹೆಜ್ಜೆಗೂ ಗಂಟೆ ಹೊಡೆಯುತ್ತಿರುತ್ತದೆ. ಜನಪದ ಧಾರೆಯಲ್ಲಿ ಇಂಥದೊಂದು ಸ್ತ್ರೀ ಕೇಂದ್ರಿತ ಎಚ್ಚರದ ಮಾತುಗಳು ಉದ್ದಕ್ಕೂ ಸಿಗುತ್ತವೆ.
ಲಿಂಗರಾಜ ಸೊಟ್ಟಪ್ಪನವರ್‌ ಬರೆಯುವ “ಉತ್ತರದ ಕತೆಗಳು” ಅಂಕಣದ ಎರಡನೆಯ ಬರಹ

Read More

ಕಡಲಿನಗಲದ ಕಣ್ಣುಗಳೊಳಗಿನ ಸುನಾಮಿ…: ಆಶಾ ಜಗದೀಶ್ ಅಂಕಣ

ನಾವು ಅದೆಷ್ಟು ತೀವ್ರವಾಗಿ ಅತ್ತಿದ್ದೇವೆ, ಒಬ್ಬರನ್ನೊಬ್ಬರು ಹಂಬಲಿಸಿದ್ದೇವೆ, ಬಿಟ್ಟು ಬದುಕಲು ಸಾಧ್ಯವೇ ಇಲ್ಲ ಎನಿಸುವಷ್ಟು ಹಚ್ಚಿಕೊಂಡಿದ್ದೇವೆ. ಜೊತೆಯಲ್ಲಿರುವಂತೆ ಭ್ರಮಿಸಿದ್ದೇವೆ. ಭ್ರಮೆಯಿಂದ ತಿಳಿದೆದ್ದು ವಿಹ್ವಲಗೊಂಡಿದ್ದೇವೆ. ಅದೊಂದು ದಿನ ನಡುರಾತ್ರಿ, ಒಂದು ಕನಸು ಅರಳತೊಡಗಿತ್ತು; ನೈಜವೆನಿಸುವಷ್ಟೇ ಸಹಜವಾಗಿ. ನಾವಿಬ್ಬರೂ ಎರೆಡು ಪುಟ್ಟ ಗಿಳಿಗಳಂತೆ ಒಟ್ಟೊಟ್ಟಾಗಿ ಒತ್ತಿಕೊಂಡು ಕೂತು, ನಿಂತು, ಮಲಗಿ ಆಟವಾಡುತ್ತಿದ್ದೆವು. ಮುದ ಮತ್ತು ಮುಗ್ಧ… ಯಾರ ಸಂಚೋ ತಿಳಿಯದು. ಕನಸು ಒಡೆಯಿತು. ಕಣ್ಣು ತೆರೆದಾಗ ನೀನಿಲ್ಲ.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಹೊಸ ಬರಹ

Read More

ಮಿಶ್ರಭಾವಗಳ ಮೂರ್ತರೂಪ ‘ಆಸ್ಟ್ರೇಲಿಯಾ ಡೇʼ : ವಿನತೆ ಶರ್ಮ ಅಂಕಣ

ಮೂಲನಿವಾಸಿ ಜನಸಮುದಾಯಗಳ ಬೆಂಬಿಡದ ಪ್ರಯತ್ನಗಳಿಂದ ಅವರ ಸಂಸ್ಕೃತಿಗಳು, ಭಾಷೆಗಳ ಬಗ್ಗೆ ಗೌರವ ಹೆಚ್ಚುತ್ತಿದೆ. ಇದರ ಜೊತೆಗೆ ಆಸ್ಟ್ರೇಲಿಯಾದಲ್ಲಿ ಬೆಳೆಯುತ್ತಿರುವ ಬಹುಸಂಸ್ಕೃತಿಗಳ ಪ್ರಭಾವ, ವಲಸಿಗರ ಸಂಖ್ಯೆ ಜನರ ಮನೋಭಾವನೆಯನ್ನು ಬದಲಿಸುತ್ತಿದೆಯೇನೋ. ಇವರುಗಳ ಬಹುಸಂಸ್ಕೃತಿ ಆಚಾರ-ವಿಚಾರಗಳ, ಆಹಾರಪದ್ಧತಿಗಳ ವೈವಿಧ್ಯತೆಗಳಿಂದ, ಸಾಮ್ಯತೆಗಳಿಂದ ಪರಸ್ಪರರನ್ನು ಒಪ್ಪಿಕೊಳ್ಳುವ ಸಾಧ್ಯತೆಗಳು ವಿಸ್ತರಿಸುತ್ತಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಹೆಬ್ಬುಲಿಯೊಂದು ಡಮಾರ್!!: ಸುಧಾ ಆಡುಕಳ ಅಂಕಣ

ಶಾಲೆಗೆ ಹೋದರೂ ನೀಲಿಗೆ ಹುಲಿಯದೇ ಮುಖ ನೆನಪಿಗೆ ಬರುತ್ತಿತ್ತು. ತನ್ನ ಸಹಪಾಟಿಗಳಿಗೂ ಹುಲಿಯನ್ನು ತೋರಿಸಬೇಕು ಅನಿಸತೊಡಗಿತು. ಮಾಸ್ತ್ರು ಪಾಠ ಮಾಡುತ್ತಿರುವಂತೆಯೇ ಪಿಸಪಿಸನೆ ಆಚೀಚೆಗೆ ಕುಳಿತವರಿಗೆ ವಿಷಯ ಮುಟ್ಟಿಸಿದಳು. ಇಂದೇನು? ಯಾವ ಮಕ್ಕಳೂ ಪಾಠದೆಡೆಗೆ ಗಮನವನ್ನೇ ನೀಡುತ್ತಿಲ್ಲವೆಂದು ಕ್ಷಣಕಾಲ ದಿಟ್ಟಿಸಿದ ಗೌಡಾ ಮಾಸ್ತ್ರು ಸುದ್ದಿಮೂಲವನ್ನು ಪತ್ತೆ ಹಚ್ಚಿಯೇಬಿಟ್ಟರು. ನೀಲಿಯನ್ನು ನಿಲ್ಲಿಸಿ ವಿಷಯ ಕೇಳಿದ್ದೇ ತಡ ಪಟಪಟನೆ ಪಟಾಕಿ ಸರಕ್ಕೆ ಬೆಂಕಿ ಕೊಟ್ಟಂತೆ ಎಲ್ಲ ಕತೆಯನ್ನು ಹೇಳಿಬಿಟ್ಟಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More

“ಕರ್ನಾಟಕದ ಕಸ್ತೂರಬಾ”: ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅಂಕಣ

ಅಸ್ಪೃಶ್ಯತೆ ನಿವಾರಣೆಯನ್ನು ತಿಳಿಸಿಕೊಟ್ಟ ಮಹಾತ್ಮ ಗಾಂಧೀಜಿ ಅವರು ದೀನ, ದಲಿತ, ದುರ್ಬಲರ ಒಳಿತಿಗಾಗಿ ಮಾಡುವ ನಿಸ್ವಾರ್ಥ ಸೇವೆ ಅತ್ಯಂತ ಪವಿತ್ರವಾದದ್ದು ಹಾಗೂ ಅದು ದೇವರನ್ನು ಪೂಜಿಸಿದಷ್ಟೇ ಫಲ ದೊರೆಯುವ ಸೇವಾ ಕಾರ್ಯ, ಅಸ್ಪೃಶ್ಯರನ್ನು ಈ ಕಾರಣದಿಂದಲೇ ಗಾಂಧೀಜಿಯವರು ದಲಿತರು ಎಂದು ಕರೆಯುವ ಮೂಲಕ ಅವರ ಉದ್ಧಾರವೇ ಜನಾರ್ಧನನ ಸೇವೆ ಎಂಬುದನ್ನು ದೃಢವಾಗಿ ನಂಬಿದ್ದರಲ್ಲದೆ ಗಾಂಧಿಜೀಯವರ ಅನುಯಾಯಿಗಳೆಲ್ಲ ಕೇರಿಯ ಜನರಗಳಿಗಾಗಿ ಸೇವೆ ಮಾಡುವಂತಹ ವಾತಾವರಣವನ್ನು ನಿರ್ಮಿಸಿದರು.
ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ “ಹೊಸ ಓದು” ಹೊಸ ಓದು ಅಂಕಣ

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ