Advertisement

Category: ದಿನದ ಪುಸ್ತಕ

ರಾಗಿಕಾಳು ಕವನ ಸಂಕಲನ ಕುರಿತು ತಾರಿಣಿ ಶುಭದಾಯಿನಿ ಮಾತುಗಳು

ರಮೇಶಬಾಬು  ಕವನಗಳಲ್ಲಿ ಬರುವ ಪಾದದ ಬಳಕೆಯನ್ನು ಗಮನಿಸಬೇಕು. ಪಯಣಕ್ಕೆ ಪಾದಗಳು ಬೇಕು ಎನ್ನುವ ಹಾಗೆ ಅವು connect ಆಗುತ್ತವೆ. ನಾನು ಗಮನಿಸಿದಂತೆ ರಮೇಶಬಾಬು ಒಂದು ವಿಲೋಮ ಕ್ರಮ ಬಳಸಿ ಸಂಗತಿಗಳನ್ನು ನೋಡುತ್ತಾರೆ; ಅದಲು ಬದಲು ಜಾಗಗಳಲ್ಲಿ ದೃಷ್ಟಿಕೋನಗಳು ಬದಲಾಗುತ್ತವೆ ಅಲ್ಲವೆ? ಅದರಂತೆ ಪಾದಗಳು ತಲೆಯ ಇನ್ನೊಂದು ತುದಿಗಳು. ಶಿರವು ಉತ್ತರವಾದರೆ ಪಾದ ದಕ್ಷಿಣದಂತೆ. ಶಿರದಿಂದ ಇಳಿಯುವುದು, ಪಾದದಿಂದ ಹತ್ತಬೇಕಾಗುತ್ತದೆ. ಈ ಅರಿವಿನೊಂದಿಗೆ ರಮೇಶಬಾಬು ಆಟವಾಡುತ್ತಾರೆ. ಪಾದಗಳೆಂದರೆ ದಾರಿ ಅಳೆಯುವ ಮಾಪಕಗಳಲ್ಲ ಅಥವಾ ದೇಹ ಹೊತ್ತ ಭಾರಧಾರಕಗಳಲ್ಲ. ಪಾದದರಿವನ್ನು ಕವಿ ಇಲ್ಲಿ ವಿವರಿಸುವ ರೀತಿಯನ್ನು ಗಮನಿಸಬೇಕು.
ಚೀಮನಹಳ್ಳಿ ರಮೇಶಬಾಬು ಬರೆದ ‘ರಾಗಿಕಾಳು’ ಹೊಸ ಕವನ ಸಂಕಲನಕ್ಕೆ ಆರ್.ತಾರಿಣಿ ಶುಭದಾಯಿನಿ ಬರೆದ ಮಾತುಗಳು

Read More

ಚಿ.ಸು. ಚೆಲ್ಲಪ್ಪ ಬರೆದ ‘ವಾಡಿವಾಸಲ್‌’ಗೆ ಪೆರುಮಾಳ್ ಮುರುಗನ್ ಬರೆದ ಮುನ್ನುಡಿ

ಜಲ್ಲಿಕಟ್ಟು ಬೇರೆ ಕ್ರೀಡೆಗಳಿಗಿಂತ ಹೇಗೆ ವಿಭಿನ್ನವಾದದ್ದು ಎಂದು ಕೇಳಿದರೆ ಅದಕ್ಕೊಂದು ಉತ್ತರವಿದೆ. ಬೇರೆ ಆಟಗಳಲ್ಲಿ ಆಡುವ ಇಬ್ಬರೂ ಆಟಗಾರರಿಗೂ ಇದು ಆಟವೆಂದು ತಿಳಿದಿರುತ್ತದೆ. ಆದರೆ ಜಲ್ಲಿಕಟ್ಟುವಿನಲ್ಲಿ ಹಾಗಲ್ಲ. ಮನುಷ್ಯನಿಗೆ ಮಾತ್ರ ಇದು ಆಟ. ಮೃಗಕ್ಕೆ ಅದು ಗೊತ್ತಿಲ್ಲ. ಆಟವೆಂದು ತಿಳಿಯದ ಮೃಗವನ್ನು ಅಡಗಿಸಲು ಮನುಷ್ಯನಿಗೆ ಸಾಕಷ್ಟು ಯುಕ್ತಿಗಳಿವೆ. ಮೃಗವು ಅದನ್ನೆಲ್ಲಾ ಮೀರಿ ಆತನಿಂದ ತಪ್ಪಿಸಿಕೊಳ್ಳಬೇಕು. ಅದರ ಕೆಲವು ಅಂಶಗಳು ವಾಡಿವಾಸಲ್ ನಲ್ಲಿ ವಿವರವಾಗಿಯೇ ಬರೆಯಲಾಗಿದೆ. ಮನುಷ್ಯನೊಳಗೂ ಬಚ್ಚಿಟ್ಟುಕೊಂಡಿರುವ ಮೃಗತ್ವವನ್ನು ತೋರುವ ಕೃತಿಯಾಗಿದೆ ಈ ವಾಡಿವಾಸಲ್.
ಚಿ.ಸು. ಚೆಲ್ಲಪ್ಪ ಬರೆದ ‘ವಾಡಿವಾಸಲ್‌’ಗೆ ಪೆರುಮಾಳ್ ಮುರುಗನ್ ಬರೆದ ಮುನ್ನುಡಿ

Read More

ಎಸ್.‌ ದಿವಾಕರ್‌ ಕವನ ಸಂಕಲನಕ್ಕೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ

ಇಪ್ಪತ್ತನೆಯ ಶತಮಾನದಿಂದ ಹಿಂಸೆಯೇ ಸ್ಥಾಯಿಯಾಗಿ ಬದುಕೇ ಅಸಂಗತ, ಅಸಾಧ್ಯ ಸತ್ಯವಾಗಿ ಬಿಟ್ಟಿದೆ. ಇಂತಹದರಲ್ಲಿ ಕಾವ್ಯ ಏನು ಮಾಡಬೇಕು? ಉತ್ತರ ಕಾವ್ಯಕ್ಕೆ ಗೊತ್ತಿಲ್ಲ. ಕವಿ ಪ್ರಯತ್ನ, ಪ್ರಯೋಗ ಮಾಡುತ್ತಲೇ ಇರಬೇಕು. ನೋವಿನ, ಹಿಂಸೆಯ ಕ್ಷೋಭೆ, ಅಸ್ಥಿರತೆ ಅನಿಶ್ಚಿತತೆಗೆ ವಿರುದ್ಧವಾದ ಭಾಷೆಯ ಪಾರದರ್ಶಕತೆ, ಧ್ವನಿಗಳ ಲಯಗಾರಿಕೆ ಮತ್ತು ಬಿಂಬಗಳ ಖಚಿತತೆಯ ಮೂಲಕ ಹೇಳುವುದನ್ನು ಹೇಳಬೇಕು. ಅಸಹಜವಾದ ಅನುಭವವನ್ನು ಅಪಾರ ಸಹಜತೆಯ ಕಾವ್ಯಭಾಷೆಯನ್ನು ಶೋಧಿಸಿಕೊಂಡು ಬರೆಯಬೇಕು. ಇದನ್ನು ದಿವಾಕರರ ಕಾವ್ಯವು ಸಾಧಿಸಿದೆ. ಅವರ ಈ ಸಂಕಲನದ ಒಂದು ಕವಿತೆಯು ಪ್ರಾಸದ ಬಗ್ಗೆ ಇದೆ.
ಎಸ್.‌ ದಿವಾಕರ್‌ ಬರೆದ ವಿಧಾನಸಭೆಯಲ್ಲೊಂದು ಹಕ್ಕಿ ಕವನ ಸಂಕಲನಕ್ಕೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ

Read More

ಧರ್ಮಯುದ್ಧ ಕಾದಂಬರಿಯ ಕೆಲವು ಪುಟಗಳು

ಸುಕ್ಕ ಯಾನೆ ಸುಕುಮಾರನಿಗೆ ಶೇಂದಿ ಶರಾಬು ಕುಡಿಯುವ ಅಭ್ಯಾಸ ಆ ದಿನಗಳಲ್ಲಿ ಇರಲಿಲ್ಲ. ಆದರೆ ಒಮ್ಮೆಲೇ ಕುಳಿತು ಎರಡು ಬಾಟ್ಲಿ ಬಿಯರ್ ಕುಡಿಯುವ ತಾಕತ್ತು ಅವನಲ್ಲಿತ್ತು. ಅವನಂಥವನನ್ನು ಜನ ‘ಕುಡುಕ’ ಎನ್ನುತ್ತಿರಲಿಲ್ಲ. ‘ದೊಡ್ಡವರು ಕುಡಿಯುವುದಿಲ್ಲವೇ ಆರೋಗ್ಯಕ್ಕೆ’ ಎನ್ನುತ್ತಿದ್ದರು. ಸುಕ್ಕನಿಗೆ ಇದು ಗೊತ್ತಿತ್ತು. ಕಂಟ್ರಿ ಜನಗಳ ಹಾಗೆ ಕುಡಿದರೆ ತಾನೂ ಅವರಲ್ಲೊಬ್ಬನಾಗುತ್ತೇನೆ. ತಾನು ಅವರ ಹಾಗೆ ಆಗಬಾರದು, ಜನರನ್ನೆಲ್ಲ ನಿಯಂತ್ರಿಸುವ ಜನಪ್ರತಿನಿಧಿಯಾಗಬೇಕು ಎಂದು ಆತ ಬಹಳ ದಿನಗಳಿಂದ ಯೋಚಿಸುತ್ತಿದ್ದ. ಆ ಯೋಚನೆ ಕಳೆದ ಬಾರಿಯ ಪಂಚಾಯತ್ ಚುನಾವಣೆಯಲ್ಲಿ ಕಾರ್ಯಗತವಾಗಿತ್ತು.
ನಾ. ಮೊಗಸಾಲೆಯವರ ಹೊಸ ಕಾದಂಬರಿ ‘ಧರ್ಮಯುದ್ಧ’ದಿಂದ ಕೆಲವು ಪುಟಗಳು ನಿಮ್ಮ ಓದಿಗೆ

Read More

‘ನಾಲ್ಕನೇ ಎಕರೆ’ಗೆ ಅಜಯ್ ವರ್ಮಾ ಅಲ್ಲೂರಿ ಬರೆದ ಮಾತುಗಳು

ತೆಲುಗಿನ ಪ್ರಸಿದ್ಧ ಲೇಖಕ ಶ್ರೀರಮಣ ಅವರು 2019ರಲ್ಲಿ ಬರೆದ `ನಾಲುಗೋ ಎಕರಂ’ ಎಂಬ ನೀಳ್ಗತೆಯನ್ನು ಯುವಲೇಖಕ ಅಜಯ್ ವರ್ಮಾ ಅಲ್ಲೂರಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಶ್ರೀರಮಣ ಅವರ ‘ಮಿಥುನಂ’ ಕಥೆಯನ್ನು ಕಥೆಗಾರ ವಸುಧೇಂದ್ರ ಅವರು ಕನ್ನಡಕ್ಕೆ ತಂದಾಗ, ಅವರ ಕಥನ ಶೈಲಿಯನ್ನು ಕನ್ನಡದ ಓದುಗರು ಬಹಳ ಮೆಚ್ಚಿಕೊಂಡಿದ್ದರು. ಇದೀಗ ಶ್ರೀರಮಣರ ಮತ್ತೊಂದು ನೀಳ್ಗಥೆಯ ಅನುವಾದವನ್ನು ‘ಛಂದ ಪುಸ್ತಕ’ ಪ್ರಕಟಿಸಿದೆ. ‘ನಾಲ್ಕನೇ ಎಕರೆ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಈ ಕೃತಿಯ ಬಗ್ಗೆ ಅನುವಾದಕ ಅಜಯ್ ವರ್ಮಾ ಅಲ್ಲೂರಿ ಬರೆದ ಮಾತುಗಳು ಇಲ್ಲಿವೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ