Advertisement

Category: ದಿನದ ಪುಸ್ತಕ

ದೊಡ್ಡವರಿಗೂ ಸಲ್ಲುವ ಮಕ್ಕಳ ಕಥೆಗಳು

“ಒಂದರ್ಥದಲ್ಲಿ ಪಲ್ಲವಿಯವರು ಹೇಳುವಂತೆ ಭೂಮ್ತಾಯಿಯ ಒಡಲೆಲ್ಲ ಬರಿದಾಗಿ ನಿಜವಾಗಿಯೂ ರೋಗ ಪೀಡಿತ ಅಜ್ಜಿಯೇ ಆಗಿದ್ದಾಳೆ! ಅಂದರೆ, ಮನುಷ್ಯನ ದುರಾಶೆಯ ದೆಸೆಯಿಂದಾಗಿ ಭೂಮಿಯ ಅಂತ್ಯದ ದಿನಗಳು ಸನ್ನಿಹಿತವಾದವೆ ಎಂಬ ಆತಂಕ ಉಂಟಾಗುತ್ತದೆ! ಹೀಗೆ, ಈ ಕಥೆ ಮಕ್ಕಳಿಗೆ ಪರಿಸರ ಸಂರಕ್ಷಣೆಯನ್ನು ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಮನುಕುಲಕ್ಕೆ ಖಂಡಿತವಾಗಿಯೂ ಉಳಿಗಾಲವಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ನೀಡುತ್ತದೆ. ಹಾಗೆಯೇ, ದೃಷ್ಟಾಂತವೊಂದರ ಮೂಲಕ ತೆರೆದುಕೊಳ್ಳುವ ‘ಎಂದೂ ಮುಗಿಯದ ಕಥೆ’ ಎಂಬ ಕಥೆ, ಮಕ್ಕಳ ಕಲ್ಪನೆಯ ಕ್ಷಿತಿಜವನ್ನು ವಿಸ್ತರಿಸುವ ನಿಟ್ಟಿನಲ್ಲಿದೆ.”

Read More

‘ಕಂಡವರಿಗಷ್ಟೇ’ ಪುಸ್ತಕಕ್ಕೆ ಡಾ. ಗೀತಾ ವಸಂತ ಬರೆದ ಸಂಪಾದಕೀಯ ನುಡಿ

“ಮನುಷ್ಯನ ತರ್ಕದಾಚೆಗೆ ಸೃಷ್ಟಿಯ ಮಿಡಿತವಿರುತ್ತದೆ. “ಅನುಭವವು ಜಗತ್ತಿನ ಕಾರಣಗಳನ್ನು ಹುಡುಕುತ್ತಿದೆ. ಅನುಭಾವವು ಜಗತ್ತಿನ ಕರ್ತೃವನ್ನೇ ಹುಡುಕುತ್ತಿದೆ. ಅನುಭವಕ್ಕೆ ತಿಳಿಯಾದ, ಹದವಾದ, ಸ್ಥಿರವಾದ ಎಚ್ಚರವೇ ಬೇಕು; ಅದಷ್ಟೇ ಸಾಕು. ಅನುಭಾವಕ್ಕೆ ಇದೇ ಜಾತಿಯ ಎಚ್ಚರವೇ ಬೇಕು. ಆದರೆ ಅದು ಕನಸಿನಾಚೆಯ ನಿದ್ದೆಯಲ್ಲ. ನಿದ್ದೆಯಾಚೆಗಿನೆಚ್ಚರ. ನಿದ್ದೆಯಾಚೆಗೊಂದು ಎಚ್ಚರದ ಹಿಮಾಲಯವಿದೆ. ಅದರ ಎತ್ತರದಿಂದ ಬಹಳ ವಿಸ್ತಾರವಾದ ದೃಶ್ಯವು ಗೋಚರವಾಗುವುದು. ಈ ಎತ್ತರದ ಮೇಲಿನ ಎಚ್ಚರಕ್ಕೆ ‘ಸಮಾಧಿ’ ಎಂದು ಹೇಳುವರು.”

Read More

ಬಿ.ಆರ್.ಎಲ್. ಪುಸ್ತಕದ ಕುರಿತು ನಾಗರೇಖಾ ಗಾಂವಕರ ಬರಹ

“ಬದುಕಿನ ಹಲವು ಹಂತಗಳ ನಿಭಾಯಿಸಿಯೂ, ಮನುಷ್ಯನಾಗಿ ಬದುಕುವ ಆ ನೆಲೆಯಲ್ಲಿ ಕಾಲವಲ್ಲದ ಕಾಲದ ಬಯಕೆ ಎಂದು ಜಗತ್ತು ಜರೆಯುವ ಸಮಯದಲ್ಲೂ ತುಡಿಯುವ ಭಾವಗಳ ಕುರಿತು ಮೂಗುಮುರಿಯದೇ ಅಸಂಗತವೆಂದು ಅನಾದರಿಸದೇ ನವೋನ್ಮೇಷವೆಂದು ಕೊಂಡಾಡುವ ನಾಟಕೀಯತೆ, ಸೋಗುಗಳನ್ನು ತೋರದೇ ಸಹಜವಾಗಿ ಸಂವಾದಿಸುವ…”

Read More

ನಕ್ಷತ್ರಗಳ ಸುಟ್ಟ ನಾಡಿನಿಂದ ಒಂದು ಅಧ್ಯಾಯ

“ಹೀಗೆ ಬರಿಗೈ ಆದವನನ್ನು, ಅವನು ಕಾಪಾಡಿದ ಜ್ಯೂಗಳು 1974ರಲ್ಲಿ ಅವನು ಕಾಲವಾಗುವವರೆಗೂ ಪೊರೆಯುತ್ತಾರೆ! ಹೀಗೆ ಶಿಂಡ್ಲರ್ ಎನ್ನುವವನನ್ನು ಎಂದೂ ದೈವತ್ವಕ್ಕೇರಿಸದೇ, ಎಲ್ಲ ಕುಂದುಕೊರತೆಗಳು, ದೌರ್ಬಲ್ಯಗಳು, ಕಾರುಣ್ಯ, ಒಳ್ಳೆಯತನ, ಭೋಳೆತನ ಎಲ್ಲವನ್ನೂ ಹೊಂದಿದ ಅಪ್ಪಟ ಮನುಷ್ಯನಾಗಿದ್ದ ಎನ್ನುವ ಕಾರಣಕ್ಕೇ ಜ್ಯೂಗಳು ಅವನನ್ನು ತಮ್ಮವನಾಗಿಸಿಕೊಳ್ಳುತ್ತಾರೆ. ಅವನು ಸತ್ತ ನಂತರ ಇಸ್ರೇಲ್‌ ನ ಜೆರುಸಲೆಂನಲ್ಲಿ ಅವನು ಸಮಾಧಿಯಾಗುತ್ತಾನೆ.”

Read More

ಶರಣಬಸವ ಕೆ. ಗುಡದಿನ್ನಿ ಹೊಸ ಕಥಾ ಸಂಕಲನದಿಂದ ಒಂದು ಕಥೆ

“ಅವನಿಗೇನು ಗೊತ್ತು ಅವ್ರವ್ವನ ತ್ರಾಸು. ತವರುಮನ್ಯಾಗ ಒಂದು ಕಾಲು ಹೊರಗಾಕಲಾರದ್ಹಂಗ ಕಮ್ಮಗ ಕುಂತಗಂಡು ಬೆಳ್ದಾಕಿ ಇವರಪ್ಪನ ಕಟಿಗೆಂಡು ಏಟು ತ್ರಾಸು ಪಟ್ಟಿನಂತ. ನಮ್ಮ ಅತ್ತಿ ಬೇಗಂ ಏನ್ ಸಣ್ಣಾಗಿ ತ್ರಾಸು ಕೊಟ್ಲಾ ಕುಂತ್ರ ನಿರಮ್ಮಳಿಲ್ಲ ನಿಂತ್ರ ನಿರಮ್ಳಿಲ್ಲ ರಾತ್ರೀ ಮಕ್ಕಾಂಡಾಗೂ ವಟವಟ ಕೇಳಿ ಕೇಳಿ ಮನಿ ಯಾವಾಗ ಬಿಟ್ಟೀನಪೋ ದೇವ್ರೇ ಅನುಸೋದು. ಮನ್ಯಾಗ ನೋಡಿದ್ರ ಸರೀಗಿ ತಿಂಬಾಕ ಕೂಳಿಲ್ಲ ಅಂದ್ರೂ ನನಗಂಡುಂದು ಅತ್ತೀದು ಟಬರು ಬಾಳ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ