ದೇಸೀಧ್ವನಿಯ ಕಥೆಗಳು: ಪ್ರಕಾಶ್ ಪುಟ್ಟಪ್ಪ ಕಥಾಸಂಕಲನಕ್ಕೆ ಡಾ. ಮಹೇಶ್ವರಿ ಯು. ಮುನ್ನುಡಿ
ಕತೆಗಾರಿಕೆಯ ಕೌಶಲವನ್ನು, ಕತೆಗಾರನ ಆಳವಾದ ಸಂವೇದನಾಶೀಲತೆಯನ್ನು, ಸಮಾಜಮುಖಿಯಾದ ನೈಜ ಕಾಳಜಿಯನ್ನು ಹೊಂದಿರುವ ಗಟ್ಟಿಯಾದ ಕಥಾವಸ್ತುವುಳ್ಳ ಇನ್ನಷ್ಟು ಕತೆಗಳು ಸಂಕಲನದ ಮಹತ್ವವನ್ನು ಹೆಚ್ಚಿಸಿವೆ. ಪ್ರಕಾಶ ಅವರು ನೆಲಮೂಲದ ಸಂಸ್ಕೃತಿಯ ಸತ್ವದಿಂದ ವಿಶೇಷವಾಗಿ ಪುಷ್ಟಿಗೊಂಡವರು. ಆ ಘಮಲನ್ನೂ ಕ್ರೂರ ವಾಸ್ತವವನ್ನೂ ಜೊತೆಜೊತೆಯಾಗಿ ಕಟ್ಟಿಕೊಡುವ ‘ಕಂಡಾಯದೊಡೆಯ ಉಘೇಉಘೇ, ಐರನ್ ಆನೆಗಳು, ನಿಗಿನಿಗಿಕೆಂಡ ಮುಂತಾದ ಕತೆಗಳಲ್ಲದೆ ಭಿನ್ನಮಾದರಿಯ ಕತೆಗಳೂ ಈ ಸಂಗ್ರಹದಲ್ಲಿವೆ.. ಸಂಕಲನದ ಅತ್ಯುತ್ತಮ ಕತೆಗಳಲ್ಲಿ ಆ ಸತ್ವವೇ ಮೈದುಂಬಿದೆ.
ಪ್ರಕಾಶ್ ಪುಟ್ಟಪ್ಪ ಕಥಾಸಂಕಲನ ‘ಗಾಂಧಿಜೋಡಿನ ಮಳಿಗೆ’ಗೆ ಡಾ. ಮಹೇಶ್ವರಿ ಯು. ಮುನ್ನುಡಿ
