ಬಾಣಾವರದ ದೇವಾಲಯಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಬಾಣಾವರವು ನಿರಂತರ ಯುದ್ಧ ಹಾಗೂ ಸೈನಿಕ ಚಟುವಟಿಕೆಗಳ ಕೇಂದ್ರವಾಗಿದ್ದುದರಿಂದಲೋ ಏನೋ ಇಲ್ಲಿ ಹೊಯ್ಸಳ ಶಿಲ್ಪಕಲೆಯ ವೈವಿಧ್ಯವನ್ನು ಬಿಂಬಿಸುವ ದೊಡ್ಡ ದೇಗುಲಗಳ ನಿರ್ಮಾಣವಾಗಿಲ್ಲ. ಆದರೆ ಇತಿಹಾಸವನ್ನು ನೆನಪಿಸುವ ಅನೇಕ ದೇವಾಲಯಗಳು ಇಲ್ಲಿ ಕಂಡುಬರುತ್ತವೆ. ಬಾಣಾವರದ ಬಾಗಿಲಲ್ಲಿರುವೋನೆ ಬಾಲೆಯ ಮಗನೆ ಬೆನವಣ್ಣಾ ಎಂದು ಜನಪದರ ಸ್ತುತಿಗೆ ಪಾತ್ರನಾದ ಗಣಪತಿಯ ಗುಡಿ ಈಗ ಊರಿನ ನಡುಭಾಗದಲ್ಲಿರುವ ಬಾಣೇಶ್ವರನ ಗುಡಿಯ ಪಕ್ಕದಲ್ಲಿದೆ.”
Read More

