ಚರ್ಚ್, ಸಂಜೀವ, ಫ್ರೆಂಚ್ ಕನ್ನಡತಿ: ಕೆ. ಸತ್ಯನಾರಾಯಣ ಪ್ರವಾಸ ಸರಣಿ
ನಾವು ನಮ್ಮ ಬೆಂಗಳೂರಿನ ಮನೆಯ ಬಗ್ಗೆ ತಿಳಿಸಿದಾಗ, ನಾನು HSR ಬಡಾವಣೆಯಲ್ಲಿ ನಾಲ್ಕು ವರ್ಷ ಇದ್ದೆ. ಕನ್ನಡಿಗನನ್ನೇ ಮದುವೆ ಆಗಿದ್ದೇನೆ. ಆತ ಯೋಗ ಶಿಕ್ಷಕ ಎಂದು ತುಂಬಾ ಖುಷಿಯಿಂದ ಹೇಳಿದಳು. ಅವಳ ಮುಖದಲ್ಲಿ ಭಾರತೀಯ ಕಳೆ ಇದೆ ಎಂದು ನನಗೂ ಅನ್ನಿಸಿತು. ಹಾಗಾದರೆ, ನೀವು ಅರ್ಧ ಕನ್ನಡಿಗರಲ್ಲವೇ ಅಂದರೆ. ಬಾಯಿ ತುಂಬಾ ನಗುತ್ತಾ, ಇಲ್ಲ ನಾನು French, ನನ್ನ ಹೊಟ್ಟೆಯಲ್ಲಿರುವ ಮಗು ಅರ್ಧ ಕನ್ನಡಿಗ ಎಂದು ತನ್ನ ಉಬ್ಬಿದ ಹೊಟ್ಟೆಯ ಮೇಲೆ ಕೈ ಹೊಡೆದುಕೊಂಡು ನಕ್ಕಳು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್ಲ್ಯಾಂಡ್ಸ್ ಬಾಣಂತನ” ಸರಣಿ
