Advertisement

Category: ಪ್ರವಾಸ

ಯೆಲ್ಲೋಸ್ಟೋನ್ : ಸತ್ಯಂ ಶಿವಂ ಸುಂದರಂ

ಇಲ್ಲಿನ ಬಿಸಿನೀರ ಬುಗ್ಗೆಯ ಅನುಭವವನ್ನು ಸ್ವಲ್ಪವಾದರೂ ಪಡೆದುಕೊಳ್ಳಬೇಕೆಂದಲ್ಲಿ ನೀವು ಈ ಪರೀಕ್ಷೆ ಉತ್ತರ ಬಾಗಿಲಿನ ಹೊರಗೆ ಅನತಿ ದೂರದಲ್ಲಿ ಹರಿವ ಗಾರ್ಡನರ್ ನದೀತೀರಕ್ಕೆ ನಡೆದುಕೊಂಡು ಹೋಗಬೇಕು. ಅಲ್ಲಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ತಣ್ಣಗೆ ಹರಿವ ನದಿಗೆ ಪಕ್ಕದ ಭೂಮಿಯಾಳದೊಳಗಿಂದ ಬಿಸಿನೀರ ಬುಗ್ಗೆಯೊಂದು ಹರಿದು ಬಂದು ಸೇರಿಕೊಳ್ಳುತ್ತೆ. ಇಲ್ಲಿ ಕೂತರೆ ಸ್ನಾನದ ನೀರನ್ನು ಹದಮಾಡಿಕೊಳ್ಳುವಂತೆ ಬಿಸಿ ನೀರು ತಣ್ಣೀರು ಬೆರೆಸಿಕೊಳ್ಳುತ್ತ ಬೆಚ್ಚಗೆ ಕುಳಿತುಕೊಳ್ಳಬಹುದು.
ʻಜಗದ ಜಗಲಿಯಲಿ ನಿಂತುʼ ಪ್ರವಾಸ ಬರಹಗಳ ಸಾಲಿನಲ್ಲಿ ಅಮೆರಿಕಾದ ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನವನದ ಕುರಿತು ಬರೆದಿದ್ದಾರೆ ವೈಶಾಲಿ ಹೆಗಡೆ

Read More

ಸ್ಥಬ್ಧ ತುಟಿಗಳು ಪಿಸುಗುಡುವ ಹೃದಯವೆಂಬ ರೂಪಕ

ನಾನು ಅಸ್ಸಾಮ್‌ ನ ಸಾಹಿತಿ ವೈ.ಡಿ ತೊಂಗ್ಚಿ  ಅವರನ್ನು ಭೇಟಿ ಮಾಡಿದೆ. ಭಾಷೆಯ ಬಗ್ಗೆ ಅವರ ಮಾತುಗಳು ಬಹಳ ಮುಖ್ಯವಾದವು. ʻʻಇಲ್ಲಿನ ಶಾಲೆಗಳಲ್ಲಿ ಈಗ ಅಸ್ಸಾಮಿಸ್ ಭಾಷೆಯನ್ನು ಕಲಿಸುತ್ತಿಲ್ಲ. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತ್ರ ಕಲಿಸಲಾಗುತ್ತಿದೆ. ಅರುಣಾಚಲದ ಎಲ್ಲಾ ಭಾಷೆಗಳು ನಶಿಸಿಹೋಗಿ ಹಿಂದಿ ಈ ರಾಜ್ಯದ ಭಾಷೆಯಾಗಿ ಬಿಡುವ ದಿನ ದೂರವಿಲ್ಲ” ಎನ್ನುತ್ತಲೇ ತೊಂಗ್ಚಿಯವರು, ಲಿಪಿ ಇರುವ ಭಾಷೆಗಳನ್ನೇ ಉಳಿಸಿಕೊಳ್ಳುವುದು ಕಷ್ಟವಾಗುತ್ತಿರುವ ಈ ಕಾಲದಲ್ಲಿ ಲಿಪಿ ಇಲ್ಲದ ಭಾಷೆಯನ್ನು ಉಳಿಸಿಕೊಳ್ಳುವುದು ಅಸಾಧ್ಯವೇ ಸರಿ. ಅಂಜಲಿ ರಾಮಣ್ಣ ಬರಹ

Read More

ಲಲಿತಾಸಹಸ್ರನಾಮ ಹುಟ್ಟಿದ್ದು ಈ ದೇವಾಯದಲ್ಲೇ

ಅಲ್ಲಿನ ಅರ್ಚಕರು ಒಂದು ಘಟನೆಯನ್ನು ಹೇಳಿದರು. ೧೯೯೯ ರಲ್ಲಿ ಬೆಂಗಳೂರಿನ ಒಬ್ಬ ಮಹಿಳೆಗೆ ಕನಸಿನಲ್ಲಿ ದೇವಿಯ ದರ್ಶನವಾಗಿ ತನಗೆ ಕಾಲ್ಗೆಜ್ಜೆ ನೀಡೆಂದು ತಿಳಿಸಿದಳಂತೆ. ಆದರೆ ಆ ದೇವಿ ಯಾರು, ದೇವಸ್ಥಾನ ಎಲ್ಲಿದೆ ಅನ್ನುವುದು ಆಕೆಗೆ ತಿಳಿದಿರಲಿಲ್ಲ. ಯಾವುದೋ ಪತ್ರಿಕೆಯಲ್ಲಿನ ಚಿತ್ರ ನೋಡಿ ಇದೇ ಕನಸಿನಲ್ಲಿ ಬಂದ ದೇವಿ ಎಂದು ಗುರುತಿಸಿ ತಿರುಮೀಯಚೂರಿಗೆ ಹೋಗುತ್ತಾಳೆ. ಅಲ್ಲಿ ಕಾಲ್ಗೆಜ್ಜೆಯನ್ನು ದೇವರಿಗೆ ತೊಡಿಸಿರೆಂದು ಕೇಳಿದಾಗ ಅರ್ಚಕರು ಹಾಗೆ ಹಾಕಲು ಆಗುವುದಿಲ್ಲ ಎನ್ನುತ್ತಾರೆ. ಆಕೆ ಪದೇ ಪದೇ ಕೇಳಿಕೊಂಡು ತನ್ನ ಕನಸನ್ನು ಹೇಳಿಕೊಂಡ ಮೇಲೆ ಪರಿಶೀಲಿಸಿದಾಗ ಕಾಲಿನ ಸುತ್ತ ಗೆಜ್ಜೆ ತೊಡಿಸಲು ಸಣ್ಣ ತೂತು ಇರುವುದು ಕಂಡುಬರುತ್ತದೆ.
ಗಿರಿಜಾ ರೈಕ್ವ ಬರೆಯುವ ಅಂಕಣ ‘ದೇವಸನ್ನಿಧಿ’

Read More

ಅಂದುಕೊಳ್ಳದ ಪವಾಡ ಹೇಗೆ ಸಂಭವಿಸಿತು?

ಬೆಳಗ್ಗೆ ನಾಲ್ಕಕ್ಕೇ ಆಶ್ರಮಕ್ಕೆ ಹೋದರೆ ಬಾಬಾರ ದರ್ಶನವಾಗುತ್ತೆ ಅಂತ ಅಲ್ಲಿ ಯಾರೋ ಹೇಳಿದರು. ಸರಿರಾತ್ರಿಯವರೆಗೂ ಬೀದಿ ಸುತ್ತಿ ಮೀನಖಂಡ ಮುನಿಸಿಕೊಂಡರೂ ನಿದ್ದೆಯ ಸುಳಿವಿಲ್ಲ. ನಾಲ್ಕಕ್ಕೆ ಎದ್ದೆ ಆದರೆ ಬಿಳಿಬಣ್ಣದ ಬಟ್ಟೆ ನನ್ನ ಬಳಿ ಇರಲಿಲ್ಲ. ಅಲ್ಲಿ ಬಾಬಾ ಭಕ್ತರೆಲ್ಲಾ ಬೆಳ್ಳಂಬಿಳಿ ಬಿಟ್ಟರೆ ಕೇಸರಿ ಬಟ್ಟೆನೇ ತೊಡುವುದು. ನಾನು ಹೇಗೂ ಭಕ್ತೆ ಅಲ್ಲವಲ್ಲ, ಹಾಗಾಗಿ ಹಸಿರಾದರೂ ಏನಂತೆ ಎಂದುಕೊಂಡು ಇದ್ದ ಒಂದು ಹಸಿರು ಬಣ್ಣದ ಚೂಡಿದಾರ್ ಹಾಕಿಕೊಂಡು ಹೊರಟೆ. “ಕಂಡಷ್ಟೂ ಪ್ರಪಂಚ” ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ

Read More

ಬರಿ ಬಿಯರಿನ ಕತೆಯಲ್ಲ ಇದು…

ಬಹಳಷ್ಟು ಪಬ್‌ಗಳು ಹತ್ತು, ಹನ್ನೆರಡನೇ ಶತಮಾನದಲ್ಲಿ ಡಬ್ಲಿನ್ ಬೀದಿಗಳಲ್ಲಿ ತಲೆದೋರಿದವು. ಮುಂದೆ ಇವು ಸಮಾನ ಆಸಕ್ತರ ಕೇಂದ್ರಗಳಾಗಿ ಸಾಮಾಜಿಕ ಹರಟೆಕಟ್ಟೆಗಳಾಗಿ ಬೆಳೆದವು. ಕೆಲವು ಪಬ್‌ಗಳಲ್ಲಿ ಬರೀ ವ್ಯಾಪಾರಸ್ಥರು ಸೇರಿಕೊಂಡರೆ, ಮತ್ತೆ ಹಲವು ಸಂಗೀತಗಾರರ ಕೇಂದ್ರಗಳಾದವು. ಮತ್ತೆ ಹಲವು ಸಾಹಿತಿಗಳೂ ಕವಿಗಳೂ ಸೇರುವ ಸ್ಥಳಗಳಾದವು. ಮತ್ತೆ ಕೆಲವು ರಾಜಕೀಯದವರು, ಗಣ್ಯರು, ಶ್ರೀಮಂತರು ಸೇರುವ ಜಾಗಗಳು… ವೈಶಾಲಿ ಹೆಗಡೆ ಐರಿಷ್ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ