ಆರ್ಥಿಕ ಬಿಕ್ಕಟ್ಟಿನ ಆಂತರಿಕ ಗಲಭೆಯಲ್ಲಿ ಶ್ರೀಲಂಕಾ ಪ್ರವಾಸ: ಡಾ. ವೆಂಕಟಸ್ವಾಮಿ ಪ್ರವಾಸ ಕಥನ
ಶ್ರೀಲಂಕಾದಲ್ಲಿರುವ ಪರಿಸ್ಥಿತಿಯಿಂದ ಗೈಡ್ ಬರಲಿಲ್ಲವೇ? ಅಥವಾ ತಪ್ಪಿಸಿಕೊಂಡನೆ? ಸ್ವಲ್ಪ ಗಾಬರಿಯಾಯಿತು. ಮತ್ತೆ ನಾವಿಬ್ಬರು ಸುಶೀಲ ಮತ್ತು ಶಾಂತಮ್ಮ ಹತ್ತಿರಕ್ಕೆ ಹೋದೆವು. ಅಷ್ಟರಲ್ಲಿ ನಮ್ಮ 12 ಜನರ ಗುಂಪಿನ ಒಂದಷ್ಟು ಜನರು ನಮ್ಮಂತೆ ಗೈಡ್‌ಗಾಗಿ ಹುಡುಕಾಡುತ್ತಿದ್ದರು. ಕೊನೆಗೂ ಒಬ್ಬಾತ ತಮಿಳಿನಲ್ಲಿ ಮಾತನಾಡುತ್ತ ಚಾರಿಯಟ್ ವರ್ಲ್ಡ್ ಟೂರ್ ಎಂದು ಹತ್ತಿರಕ್ಕೆ ಬಂದ. ನಾನು, `ಏಯ್ ಎಲ್ಲಿ ಹೋಗಿದ್ದೆಯೊ ಮಹರಾಯ ಇಷ್ಟೊತ್ತು? ನಾವೆಲ್ಲ ಹುಡುಕಿ ಹುಡುಕಿ ಸಾಕಾಯಿತು’ ಎಂದೆ. ಆತ ಇಂಗ್ಲಿಷ್ ಮತ್ತು ತಮಿಳು ಮಾತನಾಡತೊಡಗಿದ.
ಶ್ರೀಲಂಕಾ ಪ್ರವಾಸದ ಕುರಿತು ಡಾ. ವೆಂಕಟಸ್ವಾಮಿ ಬರಹ

