ಕಲಿಸುವಷ್ಟೇ, ಕಲಿಯುವುದೂ ಇದೆ…
ಈ ಪುಟ್ಟ ವೀಡಿಯೋ ಎತ್ತುವ ಪ್ರಶ್ನೆಗಳು ಅಸೀಮ. ನಾವು ಎಂಥ ವ್ಯವಸ್ಥೆ ಮತ್ತು ಪರಿಸ್ಥಿತಿಯಲ್ಲಿ ಇದ್ದೇವೆ ಎಂದು ನೋವಾಗುತ್ತದೆ. ಆದರೆ ನೋಯುವುದಕ್ಕಿಂತ ಸಧ್ಯದ ಜರೂರತ್ತೆಂದರೆ ನಾವು ನಮ್ಮ ಹೆಣ್ಣುಮಕ್ಕಳ ಬ್ಯಾಗಿನಲ್ಲಿ ಕಸ್ಮೆಟಿಕ್ಸ್ ಗಳಿಗಿಂತಲೂ ಮುಖ್ಯವಾಗಿ ಒಂದು ಬ್ಲೇಡನ್ನೋ ಅಥವಾ ಪೆಪ್ಪರ್ ಸ್ಪ್ರೇಯನ್ನೋ ಇಟ್ಟುಕೊಳ್ಳುವ ಅಭ್ಯಾಸ ಮಾಡಿಸಬೇಕಿದೆ. ಮತ್ತದನ್ನು ಸರಿಯಾದ ಸಂದರ್ಭದಲ್ಲಿ ಸರಿಯಾಗಿ ಬಳಸುವುದನ್ನೂ ಕಲಿಸಬೇಕಿದೆ. ಯಾರೋ ಬಂದು ನಮ್ಮನ್ನು ಕಾಪಾಡುತ್ತಾರೆ ಎಂದು ಕಾಯುವ ಬದಲು, ನಮ್ಮನ್ನು ನಾವೇ ಕಾಪಾಡಿಕೊಳ್ಳುವುದು ಒಳಿತಲ್ಲವೇ…
ಆಶಾ ಜಗದೀಶ್ ಬರಹ ನಿಮ್ಮ ಓದಿಗೆ
