Advertisement

Category: ಸಂಪಿಗೆ ಸ್ಪೆಷಲ್

ಅಕ್ಕಂದಿರೊಟ್ಟಿಗೆ ಆಗಸದ ಚುಕ್ಕಿ, ತಾರೆಗಳೆಣಿಸುತ್ತಾ..

ಬೆಳಗ್ಗೆ ಅಂಬಲಿಯೋ, ಬೆಣ್ಣೆ ಹಾಕಿದ ಬಿಸಿಬಿಸಿ ರೊಟ್ಟಿಯನ್ನೋ ತಿಂದು, ಅಡುಗೆ ಮನೆ ಕೆಲಸಗಳನ್ನು ಮಾಡಿ, ಜೊತೆಗೆ ಕೊಟ್ಟಿಗೆ ದನಕರುಗಳ ಕೆಲಸವಾದ ಮೇಲೆ, ಮಧ್ಯಾಹ್ನ ಊಟಕ್ಕಿಂತ ಮೊದಲು ಎಲ್ಲರೂ ಸ್ನಾನ ಮಾಡಿಕೊಳ್ಳುತ್ತಿದ್ದರು. ಅಲ್ಲೆಲ್ಲ ಮಧ್ಯಾಹ್ನದ ಹೊತ್ತಿಗೆ ರಣರಣ ಬಿಸಿಲು. ಹಾಗಾಗಿ ಆ ಹೊತ್ತಿನಲ್ಲಿ ಕೆಲಸ ಸಾಗುತ್ತಲೇ ಇರುತ್ತಿರಲಿಲ್ಲ. ಹಾಗಾಗಿ, ಬಹುತೇಕವಾಗಿ ಇಬ್ಬರು ಅಕ್ಕಂದಿರು, ಎಲ್ಲರ ಬಟ್ಟೆಗಳನ್ನೂ ಹಾಗೂ, ಪಾತ್ರೆಗಳನ್ನೂ ಒಂದೊಂದು ಬುಟ್ಟಿಗಳಲ್ಲಿ ಹಾಕಿಕೊಂಡು ಕೆರೆಗೆ ಹೋಗಿ ಅವನ್ನೆಲ್ಲ ತೊಳೆದುಕೊಂಡು ಬರುತ್ತಿದ್ದರು.
ರೂಪಶ್ರೀ ಕಲ್ಲಿಗನೂರ್‌ ಬರಹ ಇಂದಿನ ಓದಿಗಾಗಿ

Read More

ಸವಾರಿ ಹೊರಟಳು ಮಳೆ ಮಹಾರಾಜ್ಞಿ

ಅಲ್ಲಿಯವರೆಗೆ ಹೂವುಗಳೆಲ್ಲ ಮಳೆಮಾಯಿಯನ್ನೇ ಭಜಿಸುತ್ತ, ಮಳೆಗಾಲದಲ್ಲೇ ಅರಳುತ್ತಿದ್ದವು. ಆದರೆ ಒಂದು ದಿನ  ಪುಷ್ಪರಾಜ ತನ್ನವರನ್ನೆಲ್ಲ ಕರೆದು ಆಜ್ಞಾಪಿಸಿದ. “ನೋಡಿ ಹೂಗಿಡಗಳೆ, ಇನ್ನುಮುಂದೆ ನೀವೆಲ್ಲಾ ಬೇಸಿಗೆಯಲ್ಲಿಯೇ ಅರಳಬೇಕು. ಬೇಸಿಗೆಯಲ್ಲಿ ಭೂಮಿಯಮ್ಮ ತುಂಬ ಬಳಲಿರುತ್ತಾಳೆ. ನಮಗೆಲ್ಲ ಆಧಾರವಾಗಿರುವ ಭೂಮಿಯಮ್ಮನಿಗೆ ನಾವು ಸ್ವಲ್ಪವಾದರೂ ಸಂತೋಷವನ್ನು ಮೂಡಿಸಬೇಕು’’ ಎಂದು ಆದೇಶಿಸಿದ.  ಅಂದಿನಿಂದ ಹೂವುಗಳೆಲ್ಲ ಬೇಸಿಗೆಯಲ್ಲಿ ಅರಳಲು ಶುರುವಾದವು. ‘ಹೂ ತುಂಬಿದ ಮರದ ನೆರಳು ಹೂವಿಗಿಂತ ಹಗುರ’ ಎಂದು ಭೂಮಿಯಮ್ಮ ನಕ್ಕಳು. ಮಳೆಮಾಯಿಯ ಸವಾರಿ ಕತೆಯೊಂದನ್ನು ಹೆಣೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ

Read More

ಅಜ್ಜರಕಾಡು ಮತ್ತು ಅಜ್ಜ

ಆಸ್ಪತ್ರೆಗೆ ಸೇರಿಸಿದ ಒಂಬತ್ತು ದಿನದವರೆಗೆ ಶೆಟ್ರು ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ಅವರು ನಂಬಿಕೊಂಡು ಬಂದ ಮನೆ ದೈವವಾದ ಅಬ್ಬಗ-ದಾರಗೆಯ ದಿನನಿತ್ಯದ ಪೂಜೆ ಪುನಸ್ಕಾರ ಮಾತ್ರವಲ್ಲದೆ ವರ್ಷಾವಧಿ ಜಾತ್ರೆಯ ಎಲ್ಲ ವಿಧಿ ವಿಧಾನಗಳನ್ನು ನಿಷ್ಠೆಯಿಂದ ಮಾಡಿಕೊಂಡು ಬಂದವರು. ಈಗ ಆ ದೇವಾಲಯದ ಪೂಜೆ ಮಾಡುವ ಭಟ್ರು ವಿಠ್ಠಲಶೆಟ್ಟಿಗಾಗಿ ವಿಶೇಷ ಹೂವಿನ ಪೂಜೆಯನ್ನು ಮಾಡಿ ಅದರ ಗಂಧ ಪ್ರಸಾದವನ್ನು ಆಸ್ಪತ್ರೆಗೆ ತಂದು ವಿಠಲ ಶೆಟ್ರ ಹಣೆಗೆ ಹಚ್ಚಿದ ನಂತರ ಅವರ ದೇಹಸ್ಥಿತಿಯಲ್ಲಿ ತುಸು ತುಸುವೇ ಬದಲಾವಣೆ ಆಗಿ ಅವರು ಚೇತರಿಸತೊಡಗಿದ್ದರು.
ದೇವಿಕಾ ನಾಗೇಶ್‌ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಸ್ತ್ರೀ ವೇಷ: ಕೆಲವು ಬಿಡಿ ಆಲೋಚನೆಗಳು

ಶೈಲೀಕೃತ ಮಾಧ್ಯಮವಾದ ಯಕ್ಷಗಾನದಲ್ಲಿನ ಸ್ತ್ರಿ ಪಾತ್ರದ ಅತೀ ನಾಟಕೀಯತೆಯ ಶಕ್ತಿಯನ್ನು ಅರ್ಥಮಾಡಿಕೊಳ್ಳುವುದಕ್ಕೆ, ಅದು ನನಗೆ ಪ್ರತಿರೋಧದ ಮಾದರಿಯಾಗಿ ಕಾಣುವುದಕ್ಕೆ ಅಥವಾ ಹಲವು ಸಾಧ್ಯತೆಗಳಿವೆ ಎಂದು ಅನ್ನಿಸುವುದಕ್ಕೆ ಸ್ವಲ್ಪ ವಿವರಣೆ ಬೇಕಾಗಬಹುದು. ಪ್ರಸಂಗಗಳನ್ನು ನೋಡುವಾಗ ಸ್ತ್ರೀ ಪಾತ್ರಗಳ ಆಯಾಮ ಹೆಚ್ಚಾಗಿ ಹೇಗಿರುತ್ತದೆ ಎಂದರೆ ಮೇಲೆ ಹೇಳಿದ ಮೌಲ್ಯಗಳ ಪ್ರಸಾರ ಅಥವಾ ಬೋಧನೆ ರೂಪದಲ್ಲಿರುತ್ತದೆ. ಅಂದರೆ ಹೆಣ್ಣು ಹೇಗಿರಬೇಕೆಂದು ಉಪದೇಶ ಮುಗಿಸಿ, ಈಗ ಮುಂದಿನ ಕತೆಯೊ, ದೃಶ್ಯಕ್ಕೊ ಹೋಗುವುದು ಅನ್ನುವ ಹಾಗಿರುತ್ತದೆ.
ಕೃತಿ ಆರ್ ಪುರಪ್ಪೇಮನೆ ಬರೆಯುವ ಅಂಕಣ “ಯಕ್ಷಾರ್ಥ ಚಿಂತಾಮಣಿ”

Read More

ಸ್ಪರ್ಧೆಗಳ ಗುಂಗಿನಲ್ಲೊಂದು ಕಥಾ ಕಾಲಕ್ಷೇಪ

ಕಾವ್ಯ, ಪ್ರಬಂಧ, ನಾಟಕ, ಪದ್ಯ, ಕಂದ ಪದ್ಯಗಳು, ಚುಟುಕು, ಸುನೀತ ಎಂದೆಲ್ಲ ಹತ್ತಾರು ಪ್ರಕಾರಗಳನ್ನು ನಾವು ಸಾಹಿತ್ಯ ಲೋಕದಲ್ಲಿ ಗುರುತಿಸಿದರೂ, ಈ ಕತೆಯೆಂಬ ಮಾಯಾವಿ ಮಾತ್ರ ಈ ಎಲ್ಲ ಪ್ರಕಾರದೊಳಗೂ, ಹೂವೊಳಗೆ ಕಂಪು ಸೇರಿದಂತೆ ವ್ಯಾಪಿಸಿಕೊಂಡುಬಿಡುತ್ತದೆ. ಕಾವ್ಯದೊಳಗೊಂದು ಕತೆಯ ಛಾಯೆಯಿರುತ್ತದೆಯಲ್ಲವೇ. ಪ್ರಸ್ತುತ ಸಾಹಿತ್ಯ ಲೋಕದ ಸ್ಪರ್ಧೆಗಳನ್ನು ತೆಗೆದುಕೊಂಡರೂ, ಕಥಾ ಸ್ಪರ್ಧೆಗಳು ಸದ್ದು ಮಾಡಿದಷ್ಟು ಇತರ ಸ್ಪರ್ಧೆಗಳು ಸದ್ದು ಮಾಡುವುದು ಅಪರೂಪ. ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ಇಲ್ಲಿದೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ