Advertisement

Category: ಸಂಪಿಗೆ ಸ್ಪೆಷಲ್

ಆನೆಗಳಿಗೆ ತೇಜಸ್ವಿ ತೋಟಾನೇ ಯಾಕೆ ಬೇಕಾಯ್ತು? 

ಕಾಫಿ ಬೆಳೆಗಾರರು ತೋಟಗಳನ್ನು ವಿಸ್ತರಿಸುವುದಲ್ಲದೆ ಹೊರರಾಜ್ಯಗಳಿಂದ ಉದ್ಯೋಗಗಳನ್ನರಸಿ ಬರುವವರು- ಇದ್ದಿಲು ಸುಡಲು, ನಾಟ ಕೊಯ್ಯಲು, ಬಿದಿರು ಕಡಿದು ಲೋಡು ಮಾಡಲು ಬಂದವರೆಲ್ಲಾ ಕಾಡೊಳಗೆ ಹೂಡಿದ ತಮ್ಮ ತಾತ್ಕಾಲಿಕ, ಬಿಡಾರಗಳನ್ನೇ ಶಾಶ್ವತ ಮಾಡಿಕೊಂಡು ರಾಜಕೀಯ ಪಕ್ಷಗಳ ಆಶ್ರಯದಲ್ಲಿ ಓಟಿನ ಬಲದಿಂದ ಕುಳಿತು ಬಿಡುತ್ತಾರೆ. ಓಟಿನ ಬಲವಿಲ್ಲದ ಮರಗಳು ಕೇವಲ ನಾಟಾಗಳಾಗಿ ನೆಲಕ್ಕುರುಳುತ್ತವೆ. ಕಾಡಿನ ಪ್ರಾಣಿ ಸಮುದಾಯಗಳಿಗಂತೂ ಬದುಕುವುದೇ ಸವಾಲಾಗಿದೆ. ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ರಾಜೇಶ್ವರಿ ತೇಜಸ್ವಿ ಬರಹ 

Read More

ಪೇರಳೆಯ ಸಿಹಿ ಕೊಡುವ ಕಾಡಿನೊಡಲ ಜೀವ

ಈ ಮಾಯಾಲೋಕವೇ ತನ್ನ ನೂರಾರು ಕನಸುಗಳನ್ನೇ ನನಸಿನ ತಟ್ಟೆಯಲ್ಲಿಟ್ಟು ತಿನ್ನಿಸುವ ಮೃಷ್ಟಾನ್ನವಾಗಿತ್ತು ಚಂದ್ರಮ್ಮನಿಗೆ. ಆದರೆ 2005 ರಲ್ಲಿ ನೂರಾರು ಜೀವಗಳಿಗೆ ಉಸಿರು ಕೊಡುತ್ತಿದ್ದ ಕಂಪೆನಿಯ ಉಸಿರೇ ನಿಂತು ಹೋದಾಗ ಚಂದ್ರಮ್ಮನ ಕುಟುಂಬ ತತ್ತರಿಸಿತು. ತನ್ನೊಳಗೆ ಇಳಿದುಹೋದ, ತನ್ನದೇ ಹುಟ್ಟು ಮಗು ಎನ್ನುವ ಪ್ರಾಮಾಣಿಕತೆಯಲ್ಲೇ, ಪ್ರೀತಿಯಿಂದಲೇ ಪೊರೆದ ಕಂಪೆನಿ ಕಣ್ಣು ಮುಚ್ಚಿದಾಗ ಅರೆಕ್ಷಣ ಮುಂದೇನು ಮಾಡೋದು? ಅನ್ನೋ ಚಿಂತೆ ಚಂದ್ರಮ್ಮನನ್ನು ಆವರಿಸಿತಾದರೂ ಅದಾಗಲೇ ಕುದುರೆಮುಖ ಅವಳನ್ನು ಪೊರೆದಿತ್ತು.

Read More

ಯಾರೋ ಕುಯೆಂಪು ಅನ್ನೊರ ಮಗನಂತೆ

ಕಾಫಿಬೋರ್ಡು ಮಧ್ಯವರ್ತಿಗಳ ಹಾವಳಿಯನ್ನೂ ತಪ್ಪಿಸಲಾಗದೆ ದಲ್ಲಾಳಿಗಳ ಕೈಗೊಂಬೆಯಂತೆ ವರ್ತಿಸಿತು. ಕಾಫಿ ಬೆಳೆಯನ್ನು ಬಿಟ್ಟರೆ ಎಲ್ಲಾ ಬೆಳೆಗಾರರು ತಮ್ಮ ಉತ್ಪಾದನೆಯನ್ನು ತಾವೇ ಮಾರಿಕೊಳ್ಳುತ್ತಿದ್ದರು. ಕಾಫಿ ಬೆಳೆಗಾರನು ಎದುರಿಸುತ್ತಿದ್ದ ಸಮಸ್ಯೆ ಮತ್ತು ಮುಂದೊದಗಬಹುದಾದ ಆಪತ್ತು ವಿಪತ್ತುಗಳನ್ನು ಚಿಂತಿಸಿ ೧೯೭೧ರಲ್ಲೇ ತೇಜಸ್ವಿಯು ತಾವು ಬೆಳೆದ ಕಾಫಿಯನ್ನು ಸಂತೆಯಲ್ಲಿ ಮಾರಿಕೊಳ್ಳುವೆನೆಂಬ ಹೇಳಿಕೆ ಕೊಟ್ಟು ಕಾಫಿ ಬೋರ್ಡಿನ ಬಗ್ಗೆ ಮೊಟ್ಟಮೊದಲ ಬಾರಿಗೆ ಸಿಡಿದೆದ್ದರು. ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ರಾಜೇಶ್ವರಿ ತೇಜಸ್ವಿ ಬರಹ

Read More

ಚಳಿ, ಕಾಫಿ ಪಿಕ್ಕಿಂಗ್ , ಪಲ್ಪರ್ ಮತ್ತು ಮೂಡಿಗೆರೆ

ಏಳೆಂಟು ವರ್ಷಗಳ ಹಿಂದೆ ಗೌರಿಹಬ್ಬದಲ್ಲಿ ಬಳೆ ಕೊಳ್ಳಲಿಕ್ಕೆಂದು ಮೂಡಿಗೆರೆ ಪೇಟೆ ಬೀದಿಗೆ ಹೋದೆ. ಅಲ್ಲೊಬ್ಬರು ಈ ಗೊಬ್ಬೆ ಸೀರೆ ಉಟ್ಟವರು ವಯಸ್ಸಾದ ಮಹಿಳೆ ಮೊಮ್ಮಕಳೊಟ್ಟಿಗೆ ಹೋಗುತ್ತಿದ್ದರು. ಅವರು ತುರುಬಿಗೆ ಕುಪ್ಪಿಗೆ  ಎಂಬ  ಆಭರಣ ಸಿಕ್ಕಿಸಿಕೊಂಡಿದ್ದರು. ಮತ್ತು ಕಿವಿಗೆ ಹಾಕಿದ್ದ ಬುಗುಡಿಯಿಂದ ಬಂದ ಬಂಗಾರದ ಸರ ಕುಪ್ಪಿಗೆಗೆ ಸೇರಿಕೊಂಡಂತೆ ಇತ್ತು. ಮೆಲ್ಲಗೆ ಅವರ ಹಿಂದೆಯೇ ಒಂದಷ್ಟು ದೂರ ನಡೆದೆ. ಆ ಆಭರಣದ ಚೆಂದ ನೋಡಿದೆ. ಮನಸ್ಸಿಗೆ ಚೆಂದವಾಯಿತು. ಅಂದು ಇಂತಹ ಉಡಿಗೆ ತೊಡಿಗೆಯವರೇ

Read More

ಬೀರುವಿನೊಳಗೇ ಅವಿತು ಕೂತ ಅತಿಥಿಗಳು

ಒಮ್ಮೆ ನಾವು ಮೈಸೂರಿಗೆ ಹೋಗಿ ಒಂದಷ್ಟು ದಿನಗಳ ಕಾಲ ಉಳಿದು, ಮರಳಿ ಮನೆಗೆ ಬಂದೆವು. ಬಂದವಳೇ ಬಟ್ಟೆ ಬ್ಯಾಗು ಹಿಡಿದುಕೊಂಡು ಒಳಹೋಗಿ, ಅಲ್ಲಿದ್ದ ಗೋಡೆ ಬೀರಿನ ಬಾಗಿಲು ತೆಗೆದೆ. ಒಂದು ಸಲ ಶಾಕ್ ಹೊಡಿತು. ಗೊಳೋ ಎಂದು ಜೋರಾಗಿ ಅಳುತ್ತಿದ್ದೆ.  ‘ಯಾಕೆ, ಏನೇ ಆಯ್ತು,’ ಹೀಗೆ ಅಳಕ್ಕೆ ಎಂದು, ರೂಮಿಗೆ ಗದರಿಕೊಂಡೇ ಬಂದರು ತೇಜಸ್ವಿ. ಇನ್ನೂ ಜೋರಾಯಿತು ನನ್ನ ಅಳು. ನನಗೆ ಮಾತೇ ಹೊರಡಲಿಲ್ಲ. ‘ಏನೇ’ ಎಂದು, ಹಾರು ಹೊಡೆದುಕೊಂಡು ಬಿದ್ದಿದ್ದ ಬಾಗಿಲಿನತ್ತ ನೋಡಿದರು. ಬೇಸ್ತು ಬಿದ್ದರು. ಈ ಹೊಸ ಅತಿಥಿಗಳಿಂದ ನನಗಾದ ನಷ್ಟ ಎಣಿಸಲಾಗದ್ದು.
ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ , ರಾಜೇಶ್ವರಿ ತೇಜಸ್ವಿ ಬರೆದ ಬರಹ ಇಂದಿನ ಓದಿಗಾಗಿ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ