Advertisement

Category: ಸರಣಿ

ಸಮೀಪ ಚಿತ್ರಿಕೆಗಳಲ್ಲಿ ಕತೆ ಹೇಳುವ ಅಮೆರಿಕದ ʻಪ್ರೆಷಸ್ʼ

ಕ್ಲೇರೀಸ್‌ಗೆ ಹೊಸ ಸ್ಕೂಲಿನ ಟ್ರೈನ್ ಟೀಚರ್ ರೇನ್‌ಳ ಮಾತು, ವರ್ತನೆಗಳು ಅವಳೊಳಗೆ ಹುದುಗಿರುವ ಸಂಕಟವನ್ನು ತಕ್ಕಷ್ಟು ಉಪಶಮನ ಮಾಡುತ್ತವೆ. ತನಗೊಂದೂ ತಿಳಿಯುವುದಿಲ್ಲ, ಶುದ್ಧ ಅನಕ್ಷರಸ್ಥೆ ಎಂದು ಬೇಡಿಕೊಳ್ಳುವ ರೀತಿ ಅವಳ ವರ್ತನೆ. ಯಾರೂ ನನ್ನನ್ನು ಪ್ರೀತಿಸುವುದಿಲ್ಲ ಎಂದು ಕಣ್ಣೀರಿಡದೆ ಕಠಿಣವಾಗಿ ಹೇಳುತ್ತಾಳೆ. ಯಾರಿಲ್ಲದಿದ್ದರೂ ನಿನ್ನ ಮಕ್ಕಳು ನಿನ್ನನ್ನು ಪ್ರೀತಿಸುತ್ತವೆ ಎನ್ನುತ್ತಾಳೆ ಟೀಚರ್‌ ರೇನ್‌.
ಎ.ಎನ್. ಪ್ರಸನ್ನ ಬರೆಯುವ ಸಿನಿಮಾ ಸರಣಿ

Read More

ಅಮರಾವತಿ ಎಂಬ ಹುಚ್ಚಿಯ ವಿಸ್ಮಯ

ಉಸಿರಾಡಿದ್ದೆ ಅವಳೆದೆ ನಡುವೆ. ಏನೊ ಸುಖ ತೊಟ್ಟಿಲ ಕೂಸಂತೆ. ತಾಯನ್ನು ಅಪ್ಪ ಕೊಲ್ಲುವನು ಎಂಬುದು ಈ ಹುಚ್ಚಿಗೆ ಹೇಗೆ ಗೊತ್ತಾಯಿತು! ಯಾರಿಗೂ ಗೊತ್ತಿಲ್ಲದ್ದ ಹೇಗೆ ಪತ್ತೆ ಮಾಡಿದ್ದಳು. ಇವಳೆಂತಹ ಹುಚ್ಚಿ. ಇಲ್ಲವೇ ಯಕ್ಷಿಣಿ ಇರಬೇಕೇ? ಎಷ್ಟು ವಿಷಯಗಳೆಲ್ಲ ತಂತಾನೆ ಅವಳಿಗೆ ತಿಳಿಯುತ್ತಿದ್ದವು. ಅವತ್ತೊಂದಿನ ನಟ್ಟಿರುಳಲ್ಲಿ ನಾಳೆ ಬೆಳಿಗ್ಗೆ ಇಂತವರು ಸಾಯುತ್ತಾರೆ ಎಂದು ಹೇಳಿದ್ದಳು. ಹಾಗೇ ಆ ಊರ ದೊಡ್ಡ ಸಾಹುಕಾರ ಪ್ರಾಣ ಬಿಟ್ಟಿದ್ದ. ಒಹೋ; ಅವಳಲ್ಲಿ ಮೃತ್ಯು ದೇವತೆಯೂ ಸೇರಿಕೊಂಡಿದ್ದಾಳೆಂದು ಜನ ಅವಳ ಕಣ್ಣಿಂದ ತಪ್ಪಿಸಿಕೊಳ್ಳುತ್ತಿದ್ದರು. ಮೊಗಳ್ಳಿ ಗಣೇಶ್ ಸರಣಿ

Read More

ಸಮಾಧಾನದ ನಾಲ್ಕು ಮಾತು ಬಯಸುವ ರೋಗಿಗಳು

ರೋಗಿ ಹೇಳುವುದನ್ನು ಗಮನವಿಟ್ಟು ಕೇಳಿದಾಗ ಅವರ ಕಾಯಿಲೆಯ ಜೊತೆಗೆ ಮನಸ್ಸಿನ ತೊಂದರೆಗಳು ಇದ್ದರೆ ಅದು ನಮಗೆ ಗೋಚರಿಸುತ್ತದೆ. ಹಾಗಾಗಿ ನಾನಂತೂ ಹೆಚ್ಚಿನ ಸಮಯ ನನ್ನಲ್ಲಿಗೆ ಬರುವ ವ್ಯಕ್ತಿಗಳ ರೋಗ ಲಕ್ಷಣದ ಜೊತೆಯಲ್ಲಿ ಅವರು ಹೇಳುವ ಇನ್ನಿತರ ವಿಷಯದ ಬಗ್ಗೆ ಕೂಡಾ ಕಿವಿ ಕೊಡುತ್ತೇನೆ. ಕೆಲವೊಮ್ಮೆ ಇದು ತೊಂದರೆಯೂ ಕೂಡಾ ಆಗಬಹುದು. ಯಾಕೆಂದರೆ
ಬೇರೆ ರೋಗಿಗಳು ಕಾಯುತ್ತಾ ಇದ್ದಾಗಲೂ ಹಲವರು ಅವರ ಕಷ್ಟ-ಸುಖಗಳನ್ನು ಹೇಳುತ್ತಾ ಹೋಗುತ್ತಿರುತ್ತಾರೆ. ನನ್ನ ಊಟದ ಸಮಯ ಆಗಿ, ಹೊಟ್ಟೆ ಹಸಿಯುತ್ತಾ ಇದ್ದರೂ ಅವರಿಗೆ ಪರಿವೆ ಇರುವುದಿಲ್ಲ. ಡಾ.ಕೆ.ಬಿ. ಸೂರ್ಯಕುಮಾರ್ ಬರಹ

Read More

ಮಗುವಿನ ಹಣೆಬರಹ ಬರೆಯುವ ಸೆಟಿಗೆವ್ವ

ಅಂತರ್ಜಾತಿ ಮತ್ತು ಅಂತರ ಧರ್ಮೀಯ ವಿವಾಹಗಳು ಈ ಸಮುದಾಯದಲ್ಲಿ ಬಹು ಹಿಂದಿನಿಂದಲೆ ನಡೆದಿವೆ.  ಈ ಪರಂಪರೆ ಈಗಲೂ ವಿರಳವಾಗಿ ಮುಂದುವರಿದೆ. ತಮಗಿಂತ ಮೇಲಿನ ಸಮುದಾಯಗಳಲ್ಲಿ ಮತ್ತು ಸಮನಾಂತರ ಎಂದು ಭಾವಿಸಿದ ಸಮುದಾಯಗಳಲ್ಲಿ ಮದುವೆ ನಡೆದಿರುವುದು ಹೆಚ್ಚು. ತಮಗಿಂತ ಕೆಳಗಿನವರು ಎಂದು ಭಾವಿಸಿದ ಸಮುದಾಯಗಳ ಜತೆ ಮದುವೆ ಸಂಬಂಧಗಳು ಕಡಿಮೆ. ಹುಟ್ಟಿನಿಂದ ಸಾವಿನವರೆಗೆ ನಡೆಸುವ ಆಚರಣೆಗಳು ವಿಭಿನ್ನವಾಗಿವೆ.  ಡಾ. ಅರುಣ್ ಜೋಳದ ಕೂಡ್ಲಿಗಿ ಬರೆಯುವ ‘ಗಂಟಿಚೋರರ ಕಥನಗಳು’ ಸರಣಿಯ ಹದಿನೈದನೇ ಕಂತು. 

Read More

ರೇಷ್ಮೆಯ ಮಾಂತ್ರಿಕ ಚಿಟ್ಟೆಗಳ ಅಸುಖ

ನಾನೂ ನನ್ನ ತಾಯಿಯೂ ಅಪ್ಪನ ಆದೇಶಗಳಿಗೆ ಸದಾ ಸಿದ್ಧವಾಗಿರಲೇಬೇಕಿತ್ತು. ಆಗಿನ್ನೂ ಆತ ಪೇಟೆಯ ಎಂಡದ ದಾಸನಾಗಿರಲಿಲ್ಲಾ. ಖಡಕ್ ಆದ ಮನುಷ್ಯ. ಅತ್ಯುಗ್ರ ಸ್ವಾಭಿಮಾನಿ. ಆ ಕ್ಷಣವೇ ಅಲ್ಲೇ ಮರಣವಾದರೂ ಚಿಂತೆ ಇಲ್ಲಾ ಎಂದು ಅನ್ಯಾಯದ ವಿರುದ್ಧ ಪ್ರತಿಭಟಿಸಿ ಇಡೀ ಊರಿಗೆ ಊರನ್ನೇ ಎದುರು ಹಾಕಿಕೊಂಡು ದಂಗೆ ಏಳುತ್ತಿದ್ದ. ಅವನ ರೇಷಿಮೆಯ ಮನಸ್ಸೇ ತಿಳಿಯುತ್ತಿರಲಿಲ್ಲ. ಅತ್ತ ತಾತ ತನ್ನ ಹೋಟೆಲ್ ಕಾಯಕದಲ್ಲಿ ಮುಳುಗಿರುತ್ತಿದ್ದ. ಎಷ್ಟೋ ಬಡವರಿಗೆ ಸುಮ್ಮನೆ ಸಾಲದ ಲೆಕ್ಕದಲ್ಲಿ ಅನ್ನಹಾಕುತಿದ್ದ ಎಂದೂ ಸಾಲ ಕೇಳಿರಲಿಲ್ಲ ಯಾರನ್ನೂ ತಾತ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ