ಹೆಣ್ಣನ್ನು ಮುಟ್ಟಿದ್ದೀವಾ…
ಇಂತಹ ಹತ್ತಾರು ನಿದರ್ಶನಗಳಿಂದ ಆಕೆಗೆ ಏನೂ ತಿಳಿಯುತ್ತಿರಲಿಲ್ಲ. ನಾನು ಬಿಡಿಸಿ ಹೇಳುವಂತಿರಲಿಲ್ಲ. ಬೆದರಿ ಹೋಗಿದ್ದಳು. ಇದನ್ನು ಹೇಗೆ ಇಂಗ್ಲೀಷಿನಲ್ಲಿ ಸರಳೀಕರಿಸಿ ತಿಳಿಸಬಹುದು ಎಂದು ಮನದಲ್ಲೆ ಯತ್ನಿಸಿ; ಥತ್; ಇಂತಾ ಅಲ್ಕಾ ಟ್ರಾನ್ಸ್ಲೇಶನ್ನಿಂದಾಗಿ ಆಕೆ ನನ್ನ ಬಗ್ಗೆ ಕೆಟ್ಟದಾಗಿ ಭಾವಿಸಿ; ಎಲ್ಲಿ ನನಗೆ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸುವಳೊ ಎಂದು ಆದಷ್ಟು ಅಂತರ ಕಾಯ್ದುಕೊಳ್ಳುತಿದ್ದೆ. ಆಕೆಯೊ ಲೈಬ್ರರಿಗೆ ಹುಡುಕಿ ಬಂದು ವಿವರಿಸು ಎಂದು ಒತ್ತಾಯಿಸುತ್ತಿದ್ದಳು.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ

