Advertisement

Category: ಸರಣಿ

ಚಿನ್ನದ ಗಣಿಯಲ್ಲಿ ಭಯಾನಕ ದಿನಗಳು

ಹತ್ತುವರ್ಷಗಳ ಕಾಲ ಕೆಲಸ ಮಾಡುವ ಕರಾರು ಮುಕ್ತಾಯವಾಗುತ್ತಲೇ ಗಣಿಯಿಂದ ಒಬ್ಬೊಬ್ಬರೇ ಹೊರಡತೊಡಗಿದರು. ಇದಿನಬ್ಬ ಕೂಡ, ಸಂಬಳ ಕೊಡುವ ಕಂಪೆನಿಯ ಮ್ಯಾನೇಜರ್ ಬಳಿ ಬಂದು ವಿನಮ್ರನಾಗಿ ನಿಂತು,’ಸರ್, ನಾನು ಊರಿಗೆ ಹೋಗುತ್ತೇನೆ’ ಎಂದ. ಹೋಗಬಹುದು ಎಂದು ಮ್ಯಾನೇಜರ್ ಒಪ್ಪಿದ. ನನ್ನ ಸಂಬಳ ಕೊಟ್ಟುಬಿಡಿ ಎಂದು ಮನವಿ ಮಾಡಿದಾಗ, ಅಧಿಕಾರಿ ಅಚ್ಚರಿಯಿಂದ, ‘ಯಾವ ಸಂಬಳ ? ಅದನ್ನು ಸಿಲೋನಿನಲ್ಲೇ ಕೊಟ್ಟಾಗಿದೆಯಲ್ಲಾ..’ ಎಂದು ಹೇಳಿದ. ಈ ಮಾತು ಕೇಳಿದ ಇದಿನಬ್ಬ ಕುಸಿದು ಕುಳಿತುಬಿಟ್ಟ. ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರುಕಾದಂಬರಿಯ ಹತ್ತನೇ ಕಂತು.

Read More

ದಾರಿ ಯಾವುದಯ್ಯಾ….

ಎಷ್ಟೋ ದಿನಗಳ ನಂತರ ಮೊದಲ ಬಾರಿಗೆ ‘ಮನಸ್ಸು ಸ್ವಸ್ಥವಾಗಿದೆ,’ ಅನ್ನಿಸುತಿತ್ತು. ‘ಏನು ಆಗತ್ತೋ ಆಗಲಿ, ಸ್ವಿದ್ರಿಗೈಲೋವ್ ವಿಚಾರ ಮುಗಿಸಬೇಕು, ಎಷ್ಟು ಬೇಗ ಆಗತ್ತೋ ಅಷ್ಟು ಬೇಗ. ಅವನೂ ಕೂಡ ನನಗಾಗಿ ಕಾಯತಾ ಇದಾನೆ ಅನಿಸತ್ತೆ,’ ಅಂದುಕೊಂಡ. ಆ ಕ್ಷಣದಲ್ಲಿ, ಅವನ ದಣಿದ ಮನಸಿನಲ್ಲಿ ಎಷ್ಟು ದ್ವೇಷ ಹುಟ್ಟಿತೆಂದರೆ ಸ್ವಿದ್ರಿಗೈಲೋವ್ ಅಥವಾ ಪೋರ್ಫಿರಿ ಇಬ್ಬರಲ್ಲಿ ಒಬ್ಬರನ್ನಾದರೂ ಕೊಲ್ಲಬೇಕು ಅನಿಸಿತು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

Read More

ಹಂಪ್ ಮೇಲೆ ಚೆಲ್ಲಿದ ರಕ್ತದ ಕಲೆಗಳ ಭಯ

ನನಗೆ ಆ ದಿನಗಳಲ್ಲಿ ಮಧ್ಯರಾತ್ರಿ ಹನ್ನೆರೆಡಕ್ಕೆ ಸರಿಯಾಗಿ ಎಚ್ಚರಾಗುತ್ತಿತ್ತು. ತಲೆ ತುಂಬ ರಗ್ಗು ಹೊದ್ದು ಕಣ್ಣು ಮುಚ್ಚಿಕೊಂಡರೂ ನಿದ್ರೆ ಬರುತ್ತಿರಲಿಲ್ಲ. ಸದಾ ಎಚ್ಚರವಾಗೆ ಇರುತ್ತಿದ್ದೆ. ಎದೆ ಕಂಪಿಸುತ್ತಿತ್ತು. ಅಲುಗಾಡದೆ ಮುದುರಿಕೊಂಡಿರುತ್ತಿದ್ದೆ. ವಿಶಲ್ ಊದುತ್ತಾ ಲಾಟಿ ಬಡಿಯುತ್ತ ಬರುವ ಗೂರ್ಖನ ಬೂಟುಗಾಲಿನ ಸದ್ದು ಕೇಳಿಸುತ್ತಿತ್ತು. ಸರಿಯಾಗಿ ಹನ್ನೆರೆಡು ಗಂಟೆಗೆ ರೈಲಿನ ಬೆಲ್ಲು ಢಣಗುಡುತ್ತಿತ್ತು. ರೈಲು ಬರುವ ಸದ್ದು ಕೇಳಿದ ತಕ್ಷಣ ನನ್ನ ಕಲ್ಪನೆಗಳು ಗರಿಗೆದರುತ್ತಿದ್ದವು.”

Read More

ಹಾಥಿ ಮತ್ತು ಚೂನಿ ಎಂಬ ಎರಡು ನತದೃಷ್ಟ ಆನೆಗಳ ಕಥೆ

ಒಂದೆಡೆ ಚೂನಿಯ ಸಾವಿನ ಬಗೆಗೆ ಪ್ರತಿಭಟನೆ ನಡೆಯುತ್ತಿದ್ದರೆ, ಇನ್ನೊಂದು ಕಡೆ, ಆನೆಯ ಮಾಂಸದ ರುಚಿಯ ಅನುಭವ ಹೇಗಿರಬಹುದೆಂಬ ಮಾತುಗಳೂ ಕೇಳಿ ಬಂದವು. ಆನೆ ಮಾಂಸದ ತಿನುಸುಗಳ ರೆಸಿಪಿಗಳೂ ಪ್ರಕಟವಾದವು. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಹಿಟ್ಲರ್‌ನ ಜರ್ಮನ್ ವಿಮಾನಗಳು ಲಂಡನ್ ಮೇಲೆ ಬಾಂಬ್ ದಾಳಿ ಮಾಡಿದಾಗ, ಚೂನಿಯ ಅಸ್ತಿ ಪಂಜರ ಚೂರು ಚೂರಾಗಿ ಲಂಡನ್ನಿನ ಮಣ್ಣಿನೊಳಗೆ ಬೆರೆಯಿತು.
ಶೇಷಾದ್ರಿ ಗಂಜೂರು ಬರೆಯುವ ‘ಆನೆಗೆ ಬಂದ ಮಾನ’ ಸರಣಿ.

Read More

ʻದ ಮಿಲ್ಕ್ ಆಫ್‌ ಸಾರೋʼ: ವಿಷಾದದ ಹನಿಗಳು

ಈ ಚಿತ್ರದಲ್ಲಿ ಮೊದಲ ಹಾಡಿನ ಭಾವದ ನೆಲೆಯಲ್ಲಿಯೇ ಚಿತ್ರದ ಕಥನವಿದೆ. ಚಿತ್ರ ತೆರೆದುಕೊಳ್ಳುತ್ತಿದ್ದಂತೆ ಈ ವಿಷಾದ ಭಾವವನ್ನು ಇನ್ನೊಂದು ರೀತಿಯಲ್ಲಿ ಸ್ಥಿರಪಡಿಸುತ್ತಾಳೆ ನಿರ್ದೇಶಕಿ. ಮದುವೆಗೆ ಸಿದ್ಧವಾಗುತ್ತಿರುವ ಮ್ಯಾಕ್ಸಿಮಾ ತನ್ನ ಸ್ಕರ್ಟಿನ ಸೊಂಟಕ್ಕಿರುವ ಬಟ್ಟೆಯ ಉದ್ದ ಸಾಲದೆಂದು ಕೂಗಾಡುವಾಗ ಮೆಲ್ಲನೆ ಹೆಜ್ಜೆ ಇಟ್ಟು ಬರುತ್ತಾಳೆ ಫಾಸ್ಟಾ. ಅವಳಿಗೆ ಎದುರಾಗುತ್ತದೆ ಮದುವೆಗೆ ಸಂಬಂಧಪಟ್ಟ ವಿಷಯ. ಮದುವೆ! ಅವಳಿಗೆ ಅಷ್ಟೇ ಸಾಕಾಗುತ್ತದೆ. ಗಂಡು-ಹೆಣ್ಣಿಗೆ ಸಂಬಂಧಿಸಿದ, ಅವರಿಬ್ಬರ ಸಮಾಗಮಕ್ಕೆ ಅನುವುಮಾಡಿಕೊಡುವ ವಿಷಯ!
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಪೆರು ದೇಶದ ʻದ ಮಿಲ್ಕ್ ಆಫ್‌ ಸಾರೋʼ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ