Advertisement

Category: ಸರಣಿ

ಗರುಡ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಸುಮಾರು 48 ಸೆಂಟಿಮೀಟರ್ ಗಾತ್ರದ ಗರುಡ ಹಕ್ಕಿಗೆ ಕೆಂಗಂದು ದೇಹದಲ್ಲಿ ಎದ್ದು ಕಾಣುವ ಅಚ್ಚ ಬಿಳಿ ತಲೆ, ಕತ್ತು ಮತ್ತು ಎದೆ, ಈ ಗುರುತುಗಳಿಂದ ಗರುಡನನ್ನು ಸುಲಭವಾಗಿ ಗುರುತಿಸಬಹುದು. ಸತ್ತ ಪ್ರಾಣಿಯಾಗಲೀ ಅಥವಾ ತಾನೇ ಹಿಡಿದು ಕೊಂದ ಪ್ರಾಣಿಯಾಗಲೀ, ಅದರ ಮಾಂಸವನ್ನು ಕಿತ್ತು ತಿನ್ನಲು ಬಲಿಷ್ಠವಾದ ಮತ್ತು ತುದಿಯಲ್ಲಿ ಕೊಕ್ಕೆಯಂತೆ ಬಾಗಿರುವ ಕೊಕ್ಕು ಮತ್ತು ಗರಿಗಳಿಂದ ಆವೃತವಾದ ಹಳದಿ ಕಾಲುಗಳಲ್ಲಿಯೂ ಕೊಕ್ಕೆಯಂತೆ ಬಾಗಿರುವ ಕಾಲ್ಬೆರಳ ಉಗುರುಗಳು…
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ಗರುಡ” ಹಕ್ಕಿಯ ಕುರಿತ ಬರಹ ಇಲ್ಲಿದೆ

Read More

ನಾಟಕ ಕಂಪನಿ ಮತ್ತು ಒಲವಿನ ಪತ್ರ: ಜುಲೇಖಾ ಬೇಗಂ ಜೀವನ ವೃತ್ತಾಂತ

ಅಪ್ಪನನ್ನು ಚಹಾ ಕುಡಿಯೋಣವೆಂದು ಊರಿನ ಕೆಲವರೆಲ್ಲ ಸೇರಿ ಕರೆದುಕೊಂಡು ಹೋದರು. ಚಹಾ ಕುಡಿಯುವುದರಲ್ಲೇನಿದೆ? ಎಂದು ಅಪ್ಪನಿಗೂ ಅನ್ನಿಸಿ, ಜೊತೆ ನಡೆದರು. ಆ ಚಹಾ ಅಂಗಡಿಯಲ್ಲಿ ಅವರೆಲ್ಲ ಒಟ್ಟು ಸೇರಿ, ಅಪ್ಪನ ಕಾಲಿಗೆರಗಿ ಗೋಗರೆದರು. ‘ಇಲ್ಲಂತ ಹೇಳ್‌ಬ್ಯಾಡ್ರಿ. ಕಂಪೆನಿ ಕಟ್ಟೋ ಆಸಿನೇ ಇರ್ಲಿಲ್ರಿ. ನಿಮ್ ಮಗ್ಳ ಅಭಿನಯ ಕಂಡ್ಮೇಲೆ ಅನ್ಸ್ತು ಅಜ್ಜಾರ’ ಎಂದು ಅಲವತ್ತುಕೊಂಡರು. ಅವರೆಲ್ಲ ತನ್ನ ಕಾಲಡಿ ಕೂತು ಹೀಗೆ ಕೇಳುವಾಗ ಅಪ್ಪನ ಮನಸ್ಸಿಗೆ ಅದೇನು ಎನಿಸಿತೋ? ಹೂಂಗುಟ್ಟಿದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ನಾಲ್ಕನೆಯ ಕಂತು

Read More

ಮುಗುದನೊಬ್ಬನ ಮುನಿಸು ಮತ್ತು ನೆಲದ ನೆರಳ ಹಂಬಲದವರು: ಎಸ್. ಗಂಗಾಧರಯ್ಯ ಅನುಭವ ಕಥನ

ಸುಮ್ಮನೇ ಅತ್ತ ನೋಡಿದೆ. ಅದಕ್ಕಾಗೇ ಕಾಯುತ್ತಿದ್ದೆ ಅನ್ನುವಂತೆ ಮಾದು ಸೀದಾ ನನ್ನ ಬಳಿಗೆ ಬಂದರು. ತಮ್ಮ ಬೊಚ್ಚು ಬಾಯಿಂದ ಹೇಳ ಹೊರಟ ಮಾತುಗಳೆಲ್ಲಾ ಬಿಕ್ಕಳಿಕೆಗಳಾದವು. ಮೂಳೆ ಬಿಟ್ಟುಕೊಂಡಿದ್ದ ಅವರ ಮುಖದಲ್ಲಿನ ಕಣ್ಣೀರು ಮಾತಾಡತೊಡಗಿದವು. ಗೆಳೆಯನ ಸಾವು ಅವರನ್ನು ದಿಕ್ಕೆಡಿಸಿತ್ತು. ಅದಾದ ನಂತರ ನಾವಿಬ್ಬರೂ ಮುಂಚಿನ ಥರವೇ ಗೆಳೆಯರಾಗಿದ್ದೆವು. ಮಾದು ಮೆತ್ತಗಾಗತೊಡಗಿದ್ದರು. ವಯಸ್ಸು ದೇಹವನ್ನು ಜಪ್ಪುತ್ತಿತ್ತು. ಆದರೆ ಆ ಮುಗ್ಧ ನಗು, ಆ ತಾಳ್ಮೆ, ನಿಷ್ಕಲ್ಮಷ ಪ್ರೀತಿ, ಆ ತಮಾಷೆ ಮಾತ್ರ ಹಂಗೇ ಇದ್ದವು. `
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹದಿಮೂರನೆಯ ಕಂತು

Read More

ಕಷ್ಟ ಸುಖದವರು ಬೇಕು: ಕೆ. ಸತ್ಯನಾರಾಯಣ ಕಥಾ ಸರಣಿ

ಇಲ್ಲಿ ಬಿಡಿಸಿ ಹೇಳುವುದು ಏನಿದೆ? ಅಥವಾ ಇದನ್ನೂ ಕೂಡ ಬಿಡಿಸಿ ಹೇಳಬೇಕಾಗಿ ಬಂದಿರುವುದು ನಮ್ಮ ಸಮಸ್ಯೆ ಇರಬಹುದು. ಜಗತ್ತಿನಲ್ಲಿ ಎಲ್ಲರೂ ಎಲ್ಲದರ ಬಗ್ಗೆ ಮಾತನಾಡಬಹುದು, ಮಾತನಾಡುತ್ತಾರೆ. ಯುದ್ಧ, ಕ್ಷಾಮ, ಭಕ್ತಿ, ದೇವರು, ಶಿಕ್ಷಣ ನೀತಿ, ಬಾಹ್ಯಾಕಾಶ, ಕಾಡ್ಗಿಚ್ಚು, ಕ್ರಿಕೆಟ್‌ ಸ್ಕೋರ್‌. ಆದರೆ ಅವರ ದಿನನಿತ್ಯದ ಕಷ್ಟ ಸುಖ ಇರುತ್ತಲ್ಲ, ಅದನ್ನು ಹೇಳಿಕೋಬೇಕು. ಅದನ್ನು ಇನ್ನೊಬ್ಬರು ಹೇಳುವಾಗ ಕೇಳಿಸಿಕೊಳ್ಳಬೇಕು. ಇನ್ನೊಬ್ಬರಿಂದ ಇದನ್ನೆಲ್ಲ ಹೇಳಿಸುವ, ಹೊರಡಿಸುವ ಕಲೆ ಗೊತ್ತಿರಬೇಕು. ಈಗ ಅಂತಹವರು ಇಲ್ಲವೇ ಇಲ್ಲ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”

Read More

ಮಾತೇನೋ ಸರಿಯಿತ್ತು, ಹೇಳಬಾರದಾಗಿತ್ತು: ಕೆ. ಸತ್ಯನಾರಾಯಣ ಕಥಾ ಸರಣಿ

ನನಗೇನು ಹಾಗೆನಿಸಲಿಲ್ಲ. ಏಕೆಂದರೆ, ನಾನೆಂದೂ ಆತ್ಮಸಾಕ್ಷಾತ್ಕಾರವನ್ನು ನನ್ನ ಜೀವನದ ಗತಿ ಎಂದು ಭಾವಿಸಿಕೊಂಡಿರಲಿಲ್ಲ. ಜೀವನಕ್ಕೆ ಒಂದು ಗುರಿ ಇರಬೇಕೆನ್ನುವುದು ನಾವು ಮೂಡಿಸಿಕೊಂಡ ತಿಳುವಳಿಕೆ. ಇನ್ನೊಬ್ಬರು ಹೇಳಿಕೊಟ್ಟ ಗಿಣಿ ಮಾತು. ಇದೆಲ್ಲ ಸಹಜವಾಗಿ ಮೂಡಲು ನಮ್ಮ ತಂದೆ ತಾಯಿಗಳು ನಮ್ಮನ್ನು ಕೇಳಿ, ನಂತರ ನಮ್ಮನ್ನು ಹುಟ್ಟಿಸಿರುವುದಿಲ್ಲ. ಅವರಿಗೂ ನಮ್ಮ ಜೀವನಕ್ಕೆ ಒಂದು ದಿಕ್ಕು, ಗುರಿ ಇರಬೇಕು ಎಂದೇನು ಅನಿಸಿರುವುದಿಲ್ಲ. ನಮಗೂ ಗೊತ್ತಾಗುವುದಿಲ್ಲ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ