Advertisement

Category: ಸರಣಿ

“ಹೊಸ ಸರಳತೆ”ಯ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

“ಆರಂಭದಲ್ಲಿ ನಾನು ಧ್ವನಿಯಿಂದ ವಿಶೇಷವಾಗಿ ಆಕರ್ಷಿತನಾಗಿದ್ದೆ, ಆದ್ದರಿಂದ ನನ್ನ ಆರಂಭಿಕ ಕವಿತೆಗಳು ಧ್ವನಿಗೆ ಹತ್ತಿರವಾಗಿದ್ದ ಮೂರ್ತ ಕವನಗಳಾಗಿದ್ದವು. ಈ ರೂಪದಲ್ಲಿ ನನಗೆ ಮುಖ್ಯವಾದ ವಿಷಯಗಳ ಬಗ್ಗೆ ಬರೆಯಲು ಸಾಧ್ಯವಿಲ್ಲ ಎಂದು ನಂತರ ನಾನು ಅರಿತುಕೊಂಡೆ. ನಿಧಾನವಾಗಿ ನನ್ನ ಶೈಲಿಯನ್ನು ಹೆಚ್ಚು ನಿರೂಪಣಾ ಕಾವ್ಯದ ಕಡೆಗೆ ಬದಲಾಯಿಸಿದೆ. ”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ಲೊವೀನಿಯಾ ದೇಶದ ಕವಿ ಪೀಟರ್ ಸೆಮೊಲಿಕ್-ರವರ (Peter Semolič) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ಕಳೆದ ನೆನಪಿನ ಬಾನಿನ ಮೇಲಿನ ಮಿನುಗುವ ಭಾವಲೋಕ: ರಾಮ್ ಪ್ರಕಾಶ್ ರೈ ಕೆ ಸರಣಿ

ತಂಜಾವೂರಿನ ದೇವಸ್ಥಾನ. ಕಲ್ಲುಗಂಬಗಳು ಮನ ಮೋಹಕವಾಗಿ ಸಿಂಗರಿಸಿಕೊಂಡಿವೆ. ಶಿರವೆತ್ತಿ ನಗುವ ಗೋಪುರಗಳು, ಅನಂತ ಅಗಲದ ಅಂಗಣ, ಎಲ್ಲವೂ ಮಾಯೆಯೆನ್ನುವ ಗರ್ಭ ಗುಡಿಯಲ್ಲಿ ಕುಳಿತ ಆತ್ಮ. ಅಲ್ಲಿಯ ಜಗುಲಿಯ ಮೇಲೆ ಅಂಗಾತ ಆಗಸಾಭಿಮುಖವಾದ ಅರುಲ್ ಕಣ್ಣಲ್ಲಿ ನೀರು ಕದ ತೆರೆದು ಹೊರ ಪ್ರವಹಿಸಿದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಕನ್ನಡದ ‘ಮೆಯ್ಯಳಗನ್’ ಸಿನಿಮಾದ ವಿಶ್ಲೇಷಣೆ

Read More

ದೀಪಾವಳಿ ನೋಪಿ ಮತ್ತು ಹಬ್ಬದ ಹೂರಣ: ಸುಮಾ ಸತೀಶ್ ಸರಣಿ

ದೀಪಾವಳಿ ಟೇಮ್ನಾಗೆ ಉಚ್ಚೆಳ್ಳು ಗಿಡಗಳಲ್ಲಿ ಅಚ್ಚ ಅರಿಶಿನ ಬಣ್ಣ ಹುಯ್ದಂಗೆ ಹುವ್ವ ತುಂಬಕಂತಿತ್ತು. ಅವು ದೀಪಾವಳಿ ಹಬ್ಬದಾಗೆ ಶ್ರೇಷ್ಠವಂತೆ. ಅವುನ್ನ ತಂದು ಹೊಸಿಲಿಗೆ ಇಟ್ಟು ದೀಪ ಮುಟ್ಟಿಸ್ತಿದ್ರು. ಎಲ್ಲಾ ಹೊಸಿಲಿಗೂ ದೀಪ ಮುಟ್ಟಿಸ್ಬೇಕು.‌ ತುಳಸಿ ಗಿಡದ ಹತ್ರ, ದೀಪದ ಸಾಲು ಇಡ್ತಿದ್ರು.‌ ಉಚ್ಚೆಳ್ಳು ಗಿಡ ಸಿಗ್ದೇ ಇದ್ದೋರು ತಂಗಡಿ ಗಿಡದ ಹುವ್ವ ತಂದು ಇಡ್ತಿದ್ರು. ಅದೂ ಹಳದೀ ಬಣ್ವೇಯಾ. ಸಣ್ಣ ಸಣ್ಣ ಹುವ್ವ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಹಳ್ಳಿ ಹಬ್ಬಗಳ ಸಂಭ್ರಮಗಳ ವಿವರಗಳು ಇಲ್ಲಿದೆ

Read More

ಕೂರಾಪುರಾಣ ೯: ಕಾರು ಪ್ರಯಾಣವೆಂದರೆ ಮೇಲೇಳುತ್ತವೆ ಕಿವಿಗಳು..

ಕೂರಾ ಇಲ್ಲದಿದ್ದಾಗ ತರಕಾರಿ, ಕಿರಾಣಿ, ಮತ್ತಿತರೆ ಸಾಮಾನುಗಳನ್ನು ಹಿಂದಿನ ಸೀಟಿನಲ್ಲಿ ತುಂಬುತ್ತಿದ್ದ ನಾವು ಈಗ ಅವೆಲ್ಲವನ್ನು ಡಿಕ್ಕಿಯಲ್ಲಿ ಹೇರಿ ಅಲ್ಲಿ ಜಾಗ ಸಾಲದಾದರೆ ನಮ್ಮ ಕಾಲ ಬಳಿಯೇ ಇಟ್ಟುಕೊಂಡು ಇಕ್ಕಟ್ಟು ಮಾಡಿಕೊಳ್ಳುತ್ತೆವೆಯೇ ಹೊರತು ಹಿಂದೆ ಪವಡಿಸುವ ನಮ್ಮ ಮಹಾರಾಜರಿಗೆ ಒಂದಿನಿತು ಅಸೌಕರ್ಯ ಮಾಡುವುದಿಲ್ಲ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಒಂಭತ್ತನೆಯ ಕಂತು

Read More

ಓದೋ ಜರ್ನಿಯಲಿ ಅಡ್ಡಿಯಾದ ಸಮಸ್ಯೆಗಳ ‘ಹಂಪ್ಸ್’ಗಳು!!: ಬಸವನಗೌಡ ಹೆಬ್ಬಳಗೆರೆ ಸರಣಿ

ಪಿಯುಸಿಯಲ್ಲಿ ಇದ್ದ 24 ವಿದ್ಯಾರ್ಥಿಗಳು ಅಷ್ಟೇನೂ ಸೀರಿಯಸ್ಸಾಗಿ ಓದುತ್ತಿರಲಿಲ್ಲ. ಇವರೊಡನೆ ನಾನು ಸೇರಿದ ಕಾರಣ ಹೇಸಿಗೆ ತಿನ್ನೋ ಎಮ್ಮೆ ಜೊತೆ ಆಕಳು ಸೇರಿ ಆಕಳೂ ಸಹ ಹೇಸಿಗೆ ತಿನ್ನೋದನ್ನ ಕಲೀತಂತೆ ಅನ್ನೋ ಹಾಗೆ ನಾನೂ ಸಹ ಓದುವುದನ್ನು ಕಮ್ಮಿ ಮಾಡಿದೆ. ನಾನು ತುಂಬಾ ಕ್ಲೋಸ್ ಆಗಿದ್ದು ಲಿಂಗರಾಜ ಹಾಗೂ ಸುಧಾಕರ ಜೊತೆ. ಲಿಂಗರಾಜ ನಮ್ಮದೇ ಕಾಲೇಜು ಆದರೆ ಸುಧಾಕರ ಮಾತ್ರ ಡಿಆರ್ ಎಂ ಕಾಲೇಜು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತಾರನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ