ಉತ್ತರ ಕೊರಿಯಾ, ಇದು ಸರಿಯಾ?: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ
ಉತ್ತರ ಕೊರಿಯಾದಲ್ಲಿ ಕಲೆ, ಸಂಸ್ಕೃತಿ ಇವೆಲ್ಲವೂ ಕೂಡಾ ಬೆಳವಣಿಗೆ ಕಾಣುತ್ತಿರುವುದು ರಾಷ್ಟ್ರೀಯತೆಯ ಹೆಸರಿನಲ್ಲಿ. ಎಲ್ಲಾ ರೀತಿಯ ಕಲಾಕೃತಿಗಳ, ಪ್ರದರ್ಶನ ಕಲೆಗಳ ಅಂತಿಮ ಉದ್ದೇಶ ರಾಷ್ಟ್ರದ ಪ್ರಗತಿ ಮತ್ತು ರಾಷ್ಟ್ರಕ್ಕೆ ಸಾಂಸ್ಕೃತಿಕ ಅಸ್ಮಿತೆಯನ್ನು ಒದಗಿಸಿಕೊಡುವುದು ಎಂಬ ಭಾವನೆಯನ್ನು ಬಲವಾಗಿ ರೂಪಿಸಲಾಗುತ್ತಿದೆ. ಉತ್ತರ ಕೊರಿಯಾದ ಪ್ರಮುಖ ಶಿಲ್ಪಕಲಾಕೃತಿಗಳು ಯಾವುವು ಎಂದು ಗಮನಹರಿಸಿದಾಗ ಕಿಮ್ ಇಲ್ ಸುಂಗ್ ಅವರ ಪ್ರತಿಮೆಗಳು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತವೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ
