ಕಲಾ ಅಸೈನ್‌ಮೆಂಟ್ ಪುರಾಣ!!!: ಬಸವನಗೌಡ ಹೆಬ್ಬಳಗೆರೆ ಸರಣಿ
ಆಗ ಈಗಿನಂತೆ ಇರಲಿಲ್ಲ. ಸಣ್ಣಪುಟ್ಟ ತಪ್ಪಿಗೂ ಅಂಕಗಳನ್ನು ಕಳೆಯಲು ನೋಡಲಾಗುತ್ತಿತ್ತು!! ಆಗ ತಿಂಗಳಿಗೊಮ್ಮೆ ಕಿರುಪರೀಕ್ಷೆಗಳು ಇರಲಾಗುತ್ತಿತ್ತಾದರೂ ಆ ಅಂಕಗಳನ್ನು ವಾರ್ಷಿಕ ಪರೀಕ್ಷೆಯ ಅಂಕಗಳಿಗೆ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಸೆಮಿಸ್ಟರ್ ಪದ್ಧತಿ ಇರಲಿಲ್ಲ. ಇಡೀ ವರ್ಷ ಮಾಡಿದ ಪಾಠಗಳನ್ನು ಒಳಗೊಂಡ ವಾರ್ಷಿಕ ಪರೀಕ್ಷೆ ಮಾಡಲಾಗುತ್ತಿತ್ತು. ಪರೀಕ್ಷೆಯಲ್ಲಿ ಕೇಳಲಾಗುತ್ತಿದ್ದ ಪ್ರಶ್ನೆಗಳೂ ಹೆಚ್ಚು ಅಂಕಗಳಿಗೆ, ದೀರ್ಘ ಉತ್ತರ ಬಯಸುವ ಪ್ರಶ್ನೆಗಳನ್ನೂ ಕೇಳಲಾಗುತ್ತಿತ್ತು. ಆಗ ಪರೀಕ್ಷೆಯಲ್ಲಿ 35 ಅಂಕಕ್ಕಿಂತ ಕಮ್ಮಿ ತೆಗೆದರೆ ಫೇಲ್ ಮಾಡುವ ವ್ಯವಸ್ಥೆಯಿತ್ತು. ಈಗ ಆ ವ್ಯವಸ್ಥೆಯು ಸಂಪೂರ್ಣ ಬದಲಾಗಿದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ನಾಲ್ಕನೆಯ ಕಂತು
