Advertisement

Category: ಸರಣಿ

ಚಿತ್ರಾನ್ನದಲ್ಲಿ ಕಡ್ಳೆ ಬೀಜಕ್ಕಾಗಿ ಹೋರಾಟ

ಹಿಂದಿನ ಬೆಂಚಿನಲ್ಲಿ ಸತೀಶ ಎಂಬ ತೀಟಲೆ ಹುಡುಗನಿದ್ದ. ಅವನು ಗುಂಪು ಕಟ್ಟಿಕೊಂಡು ‘ಮರಿ’ ಜಾಗದಲ್ಲಿ ‘ಮುದಿ’ ಸೇರಿಸಿ ರಾಗವಾಗಿ ಹೇಳುತ್ತಿದ್ದನು. ಈ ಅಪಬ್ರಂಶವನ್ನು ಕೇಳಿದ್ದೆ ತಡ, ಧ್ವನಿ ಬಂದ ಕಡೆಗೆ ನುಗ್ಗಿ ಕೈಗೆ ಸಿಕ್ಕಿದವರನ್ನು ರಪರಪನೆ ಚೆಚ್ಚಿ ಬಿಡುತ್ತಿದ್ದರು. ಎಷ್ಟು ಸರ್ತಿ ಹೇಳಿಕೊಟ್ಟರೂ ಕೆಲ ಹುಡುಗರು ಮತ್ತೆ ಮತ್ತೆ ಹಾಗೆ ಹೇಳುತ್ತಿದ್ದರು. ಇದರಿಂದ ಉರಿದು ಬೀಳುತ್ತಿದ್ದ ಮಾಸ್ಟರ್ ಸಿಟ್ಟಿನಿಂದಲೇ ಹಾರ್ಮೋನಿಯಂ ಎತ್ತಿಕೊಂಡು ಹೊರ ಹೋಗಿಬಿಡುತ್ತಿದ್ದರು.
ಗುರುಪ್ರಸಾದ್ ಕಂಟಲಗೆರೆ ಬರೆಯುವ ‘ಟ್ರಂಕು-ತಟ್ಟೆ’ ಸರಣಿಯ ಐದನೆಯ ಕಂತು

Read More

ನೀಲ ಕುರುಂಜಿಯ ನಾಡಿನಲ್ಲಿ ರಕ್ತಸಿಕ್ತ ಅಧ್ಯಾಯ

ಯಾವುದೇ ಮನೆ, ಕಾಂಕ್ರೀಟ್ ಕಾಡಿನ ಕಟ್ಟಡಗಳಿಲ್ಲದ, ಒಂದು ಪ್ರಶಾಂತವಾದ ಜಾಗ. ಆದರೆ ಅಲ್ಲಿಗೆ ಹೋಗಿ ತಲುಪುವುದು ಸ್ವಲ್ಪ ಕಷ್ಟದ ಕೆಲಸ. ಹತ್ತು ಕಿಲೋಮೀಟರು ದೂರದವರೆಗೆ ನಿಮ್ಮ ವಾಹನಗಳಲ್ಲಿ ಹೋಗಿ, ಅಲ್ಲಿಂದ ಮುಂದೆ ಅದಕ್ಕೆಂದೇ ಬಾಡಿಗೆ ಇರುವ ಕೆಲವು ಫೋರ್ ವ್ಹೀಲ್ ಜೀಪ್‌ಗಳಲ್ಲಿ ಮಾತ್ರ ಹೋಗಬಹುದು. ಓರೆ ಕೋರೆ, ನೀರು ಹರಿದು, ಅರ್ಧ ಹಾಳಾದ ರಸ್ತೆಯಲ್ಲಿ ಹೋಗುವುದೇ ಒಂದು ಸಾಹಸ ಕ್ರೀಡೆ ಅರ್ಥಾತ್ ಅಡ್ವೆಂಚರ್. ಸಮುದ್ರ ಮಟ್ಟದಿಂದ ನಾಲ್ಕು ಸಾವಿರ ಅಡಿ ಮೇಲೆ ಇರುವ ಸ್ಥಳ.
ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’

Read More

ಚಪ್ಪಲಿ ಸಾಹೇಬರ ಚೌರ್ಯಸಂಬಂಧೀ ನೆನಪು

ಸುಮಾರು ದೂರ ಓಡಿ ಅವರನ್ನು ಹಿಡಿದು ಭುಜ ತಟ್ಟಿ ಮಾತಾಡಿಸಿ ಅದೇನೋ ಕೇಳಿದ. ಕೂಡಲೇ ನಕ್ಕು ಪ್ರತಿಕ್ರಿಯಿಸಿದ ಆ ವಯೋವೃದ್ಧರು ತಮ್ಮ ಕೈಲಿದ್ದ ಪ್ಲಾಸ್ಟಿಕ್ ಸಂಚಿಯನ್ನು ಇವನ ಕೈಗೆ ವರ್ಗಾಯಿಸಿದರು. ಇವನು ಅವರ ಕೈ ಕುಲುಕಿದ. ನಾವು ಎಲ್ಲವೂ ಅಯೋಮಯವಾದಂತೆ ನೋಡುತ್ತ ಪಿಳಿಪಿಳಿ ಕಣ್ಣು ಬಿಡುತ್ತಾ ನಿಂತೇ ಇದ್ದೆವು. ಇಬ್ಬರ ಮುಖದಲ್ಲೂ ಹುಸಿನಗೆಯೊಂದು ಕಾಣುತ್ತಲೇ ಇತ್ತಾಗಿ ಧೈರ್ಯ. ಮತ್ತಾವುದೇ ಕಿರಿಕ್ ನಡೆಯದೆಂಬ ಸಮಾಧಾನ. ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕ

Read More

ಛಡಿಯಾಮಿ ಛಂ ಛಂ, ವಿದ್ಯಾಯಾಮಿ ಘಂ ಘಂ

ಪ್ರತಿಯೊಬ್ಬ ವಿದ್ಯಾರ್ಥಿ ವೈವಿಧ್ಯಮಯವಾಗಿ ಬನಿಯನ್ ಬಾಕ್ಸ್‌ಗಳಲ್ಲಿ ಸರಸ್ವತಿಯ ಚಿತ್ರವಿಟ್ಟು ತನ್ನಿಚ್ಛೆಯಂತೆ ಸಿಂಗರಿಸಿ ಖುಷಿ ಪಡುತ್ತಿದ್ದ. ತುಂಬ ಶ್ರಮವಹಿಸಿ ತಯಾರಿಸಿದ ಈ ಸುಂದರ ‘ಸರಸ್ವತೀಮಂದಿರ’ಗಳನ್ನು ಬೇರೆ ವಿದ್ಯಾರ್ಥಿಗಳು ನೋಡುವುದು ಕಡಿಮೆ. ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಸಿಂಗರಿಸಿದ ಸರಸ್ವತಿಯನ್ನು ತಾನೇ ನೋಡುತ್ತ, ನೋಡುತ್ತ ಆನಂದತುಂದಿಲನಾಗಿ ತನ್ನ ಮತ್ತು ಸರಸ್ವತಿಯ ಮಧ್ಯೆ ಯಾರೂ ಇಲ್ಲದ ಹಾಗೆ ತದೇಕಚಿತ್ತನಾಗಿರುತ್ತಿದ್ದ. ಆ ಕ್ಷಣದ ಆನಂದವೇ ಆನಂದ. ಇದು ಒಂದುರೀತಿಯ ಲಿಂಗಾಂಗಸಾಮರಸ್ಯದಂತೆ!
ರಂಜಾನ್‌ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ ಹನ್ನೆರಡನೆಯ ಕಂತು

Read More

ಚಿನ್ನದ ಗಣಿಯಲ್ಲಿ ಭಯಾನಕ ದಿನಗಳು

ಹತ್ತುವರ್ಷಗಳ ಕಾಲ ಕೆಲಸ ಮಾಡುವ ಕರಾರು ಮುಕ್ತಾಯವಾಗುತ್ತಲೇ ಗಣಿಯಿಂದ ಒಬ್ಬೊಬ್ಬರೇ ಹೊರಡತೊಡಗಿದರು. ಇದಿನಬ್ಬ ಕೂಡ, ಸಂಬಳ ಕೊಡುವ ಕಂಪೆನಿಯ ಮ್ಯಾನೇಜರ್ ಬಳಿ ಬಂದು ವಿನಮ್ರನಾಗಿ ನಿಂತು,’ಸರ್, ನಾನು ಊರಿಗೆ ಹೋಗುತ್ತೇನೆ’ ಎಂದ. ಹೋಗಬಹುದು ಎಂದು ಮ್ಯಾನೇಜರ್ ಒಪ್ಪಿದ. ನನ್ನ ಸಂಬಳ ಕೊಟ್ಟುಬಿಡಿ ಎಂದು ಮನವಿ ಮಾಡಿದಾಗ, ಅಧಿಕಾರಿ ಅಚ್ಚರಿಯಿಂದ, ‘ಯಾವ ಸಂಬಳ ? ಅದನ್ನು ಸಿಲೋನಿನಲ್ಲೇ ಕೊಟ್ಟಾಗಿದೆಯಲ್ಲಾ..’ ಎಂದು ಹೇಳಿದ. ಈ ಮಾತು ಕೇಳಿದ ಇದಿನಬ್ಬ ಕುಸಿದು ಕುಳಿತುಬಿಟ್ಟ. ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರುಕಾದಂಬರಿಯ ಹತ್ತನೇ ಕಂತು.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ