Advertisement

Category: ಸರಣಿ

ಅಪ್ಪನ ಕೌಟುಂಬಿಕ ಅರ್ಥಶಾಸ್ತ್ರ

ನಮಗೆ ಒಂದು ಗೇಣು ಭೂಮಿಯೂ ಇರಲಿಲ್ಲ. ಆದರೆ ತಂದೆಗೆ ಕೃಷಿಕನಾಗುವ ಹುಚ್ಚು ಬಹಳವಿತ್ತು. ಬೆಳದಿಂಗಳ ರಾತ್ರಿಯಲ್ಲಿ ಕೂಡ ಅವರು ಆ ಭೂಮಿಯಲ್ಲಿ ದುಡಿಯುತ್ತಿದ್ದರು. ಅವರಿಗೆ ದುಡಿತದ ಆನಂದವೇ ಆನಂದ. ದುಡಿದು ದುಡಿದು ಕಲ್ಲುಗಳಿಂದ ತುಂಬಿದ ಆ ಹಾಳು ಭೂಮಿಯನ್ನು ಸಮೃದ್ಧಗೊಳಿಸಿದರು. ಬಾಳೆಯ ಸಸಿ ನೆಟ್ಟರು. ಹಳೆಯ ಡೀಸಲ್ ಎಂಜಿನ್ ಕೊಂಡು ನೀರು ಉಣಿಸುತ್ತ ಚಿಕ್ಕ ಬಾಳೆಯ ಬನವನ್ನೇ ಸೃಷ್ಟಿಸಿದರು.
ರಂಜಾನ್ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ ಹದಿನೈದನೇ ಕಂತು ಇಲ್ಲಿದೆ.

Read More

ನವೋದಯದಿಂದ ನವ್ಯಕ್ಕೆ ಪೇಜಾವರ ಸದಾಶಿವ ರಾವ್

ಕನ್ನಡದ ಆಧುನಿಕ ಕವಿಗಳನ್ನೆಲ್ಲ ಓದಿ, ಬರೆದುಕೊಂಡು, ತಾವು ಸ್ವತಃ ಕವನಗಳನ್ನು ಬರೆದು ತಮ್ಮನ್ನು ಸ್ವತಃ ತಿದ್ದಿಕೊಂಡು, ಗೋಕಾಕರಂಥ ವಿಮರ್ಶಕರ ಅಭಿಪ್ರಾಯವನ್ನು ಕೇಳಿ ಮುಕ್ತ ಮನಸ್ಸಿನಿಂದ ಸ್ವೀಕರಿಸಿ, ಅವರ ಸಾಹಿತ್ಯ ರಚನೆಯ ಬಗ್ಗೆ ತಮ್ಮ ಮುಕ್ತ ಅಭಿಪ್ರಾಯಗಳನ್ನು ಹೇಳಿ ತಾನೂ ಬೆಳೆದ ಪೇಜಾವರ ಸದಾಶಿವರಾಯರು ತಮ್ಮೊಂದಿಗೆ ಇತರರನ್ನೂ ಬೆಳೆಸಿದ ಸಾಹಿತಿ. ಚಿತ್ರಕಲೆ ಟೆನಿಸ್ ಆಟ, ಸಿತಾರ್ ನುಡಿಸುವುದು, ಫೋಟೋಗ್ರಫಿ, ಅಂಚೆಚೀಟಿ ಸಂಗ್ರಹ, ಚಾರಣ, ಮೌಂಟೆನಿಯರಿಂಗ್  ಮುಂತಾದ ಆಸಕ್ತಿಗಳನ್ನು ಹೊಂದಿದ್ದ ಜೀವನ್ಮುಖಿ ಅವರಾಗಿದ್ದರು. 

Read More

ಹೊಟ್ಟೆ ಮತ್ತು ಮನಸ್ಸು ತುಂಬಿದ ಭಾರೀ ಭೋಜನ…

“ಅವರಿಗೆ ಸುಲಭವೆನಿಸಿದ ಲೆಕ್ಕವನ್ನು, ‘ಒಂದಲ್ಲ ನಾಲ್ಕು ಸಲ ಕೇಳಿ ಹೇಳಿ ಕೊಡ್ತಿನಿ’ ಎನ್ನುತ್ತಿದ್ದರು. ಅದೇ ಸಲುಗೆಯ ಮೇಲೆ ಹುಡುಗರೇನಾದರೂ ‘ಇದು ಅರ್ಥ ಆಗ್ಲಿಲ್ಲ ಯಂಗೆ ಸರ್’ ಎಂದು ಕೇಳಿದರೆ ಉಪಾಯವಾಗಿ ತಾವಿರುವಲ್ಲಿಯ ಬೋರ್ಡ್ ಹತ್ತಿರಕ್ಕೆ ಕರೆಸಿಕೊಂಡು. ‘ಇಂಥ ಸುಲಭದ್ದು ಅರ್ಥ ಆಗ್ಲಿಲ್ವ, ಹೇಳಿ ಕೊಡ್ಬೇಕಾದ್ರೆ ಯತ್ತಗೆ ನೋಡ್ತಿರ್ತಿರ, ಎಲ್ಲಾರ ದನ ಕಾಯದ ಬಿಟ್ಟು, ಸ್ಕೂಲಿಗೆ ಯಾಕೆ ಬತ್ತಿರ’ ಎಂದು ಒಂದೇ ಉಸಿರಿಗೆ ಬೈಯುತ್ತ ಕನಿಷ್ಠ ಎರೆಡು ಕೋಲು ಮುರಿಯುವವರೆಗೂ ಹೊಡೆಯುತ್ತಿದ್ದರು.”

Read More

‘ಕೈ ಮದ್ದು’ ಹಾಕುವವರ ಮಧ್ಯೆ..

ಈ ಮದ್ದು ತೆಗೆಯುವುದು ಎಂದರೆ ಸಂತೆಯಲ್ಲಿ, ಜಾತ್ರೆಯಲ್ಲಿ, ಕಿವಿ, ಕಣ್ಣಿನಿಂದ ಕಲ್ಲು ತೆಗೆದಂತೆ. ತಮ್ಮ ಕೈಚಳಕದಿಂದ ತಾವೇ ಹಾಕಿದ್ದನ್ನು ರಾಶಿಗಟ್ಟಲೆ ತೆಗೆದು ತೋರುವವರಂತೆ ಇದು ಒಂದು ವೃತ್ತಿ. ಆದರೆ ಕೆಲವೊಮ್ಮೆ ಈ ರೀತಿಯ ಪ್ರಕ್ರಿಯೆಯ ನಂತರ ರೋಗ ಗುಣ ಆಗುವುದೂ ಉಂಟು. ಶರೀರಕ್ಕೆ ಬರುವ ಅನೇಕ ರೋಗಗಳು ಮನಸ್ಸಿಗೆ ಸಂಬಂಧಿಸಿದ್ದು. ಅದರಿಂದ ಅನೇಕ ಬಗೆಯ ಚಿಹ್ನೆಗಳು ಕಂಡು ಬರಬಹುದು. ಹೀಗಿರುವಾಗ ತನ್ನಲ್ಲಿದ್ದ “ಮದ್ದು” ಹೊರಬಿತ್ತು ಎಂಬ ನಂಬಿಕೆಯೂ ಅವರನ್ನು ಗುಣಪಡಿಸಲು ಸಾಕು.”

Read More

ಸಲಕರಣೆಗಳನ್ನು ಅನ್ವೇಷಿಸುವ ಮನುಷ್ಯರ ಮನೋಲೋಕದ ಕತೆಯಿದು

ನ್ಯೂಯಾರ್ಕ್ ಸರ್ಕಾರ ಎ.ಸಿ. ವಿದ್ಯುತ್ ನ ಅಪಾಯದ ಕುರಿತು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿ, ಎಂಜಿನಿಯರುಗಳು ಮತ್ತು ತಜ್ಞರಿಂದ ಮಾಹಿತಿ ಕಲೆ ಹಾಕಿತು. ವೆಸ್ಟಿಂಗ್‌ಹೌಸ್‌ನ ಪರವಿದ್ದ ಎಂಜಿನಿಯರುಗಳು ಅಪಾಯವನ್ನು ಅಲ್ಲಗೆಳೆದರೆ, ಎಡಿಸನ್ ಪರವಿದ್ದ ತಜ್ಞರು ಎ.ಸಿ. ವಿದ್ಯುತ್ ವ್ಯವಸ್ಥೆಯನ್ನು ಮಾನವರನ್ನು ಅರೆಗಳಿಗೆಯಲ್ಲೇ ಕೊಲ್ಲಬಲ್ಲ ರಕ್ಕಸ ಶಕ್ತಿಯೆಂಬಂತೆ ಬಿಂಬಿಸಿದರು. ವೆಸ್ಟಿಂಗ್‌ಹೌಸ್ ಮತ್ತು ಎಡಿಸನ್ ನಡುವಿನ ಈ ವ್ಯಾವಹಾರಿಕ ಕದನದಲ್ಲಿ, ತಾನು ನಿರ್ಲಿಪ್ತನೆಂದು ಘೋಷಿಸಿಕೊಂಡ ಹೆರಾಲ್ಡ್ ಬ್ರೌನ್, ಎ.ಸಿ. ವಿದ್ಯುತ್ತಿನ ವಿರುದ್ಧ..”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ